Shreyas Iyer- ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಭಾರಿಸಿದ ಅಯ್ಯರ್; ಈ ಸಾಧನೆ ಮಾಡಿದ ಕೆಲವೇ ಆಟಗಾರರ ಪಟ್ಟಿ

IND vs NZ 1st Test- 26ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಶತಕದ ಸಂಭ್ರಮ ಅನುಭವಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕಾನಪುರ್​ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್​ಗೆ ಆಧಾರಸ್ತಂಭವಾಗಿ ನಿಂತು ಆಡಿದ್ದಾರೆ.

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

  • Share this:
ಕಾನಪುರ್, ನ. 26: ಭಾರತದ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ (Shreyas Iyer hits Century on Test Debut) ಭಾರಿಸಿದ ಸಾಧನೆ ಮಾಡಿದ್ಧಾರೆ. ನ್ಯೂಜಿಲೆಂಡ್ (New Zealand) ವಿರುದ್ಧ ನಿನ್ನೆ ಆರಂಭಗೊಂಡ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಶ್ರೇಯಸ್ ಟೆಸ್ಟ್ ಶತಕ ಭಾರಿಸಿದರು. 157 ಎಸೆತದಲ್ಲಿ ಅವರು ಮೂರಂಕಿ ಸ್ಕೋರ್ ಮುಟ್ಟಿದರು. ಅಂತಿಮವಾಗಿ 195 ರನ್ ಸ್ಕೋರ್ ಮಾಡಿದ ಅವರು ಟಿಮ್ ಸೌದಿ ಅವರಿಗೆ ವಿಕೆಟ್ ಒಪ್ಪಿಸಿದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಪದಾರ್ಪಣೆ ಪಂದ್ಯದಲ್ಲಿ ಶತಕ ಭಾರಿಸಿದ 16ನೇ ಭಾರತೀಯ ಕ್ರಿಕೆಟಿಗ ಎನಿಸಿದ್ದಾರೆ. ಭಾರತದ ನೆಲದಲ್ಲಿ ಈ ಸಾಧನೆ ಮಾಡಿದ 10ನೇ ಭಾರತೀಯ ಅವರಾಗಿದ್ದಾರೆ. 1983ರ ವಿಶ್ವಕಪ್ ಹೀರೋ ಮೋಹಿಂದರ್ ಅಮರನಾಥ್ ಅವರ ತಂದೆ ಲಾಲಾ ಅಮರನಾಥ್ 1933ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ 118 ರನ್ ಭಾರಿಸಿದ್ದರು. ಪದಾರ್ಪಣೆ ಪಂದ್ಯದಲ್ಲಿ ಟೆಸ್ಟ್ ಶತಕ ಭಾರಿಸಿದ ಮೊದಲ ಭಾರತೀಯ ಎಂಬ ಗೌರವ ಅಮರನಾಥ್ ಅವರದ್ದಾಗಿದೆ. ಅಲ್ಲಿಂದೀಚೆ ಶ್ರೇಯಸ್ ಅಯ್ಯರ್ ಸೇರಿ 16 ಮಂದಿ ಈ ಸಾಧನೆ ಮಾಡಿದ್ದಾರೆ.

ಈಗ ಸಕ್ರಿಯರಾಗಿರುವ ಕ್ರಿಕೆಟಿಗರಲ್ಲಿ ಈ ಸಾಧನೆ ಮಾಡಿದವರೆಂದರೆ ರೋಹಿತ್ ಶರ್ಮಾ, ಶಿಖರ್ ಧವನ್, ಪೃಥ್ವಿ ಶಾ, ಶಿಖರ್ ಧವನ್ ಮತ್ತು ಈಗ ಶ್ರೇಯಸ್ ಅಯ್ಯರ್. ಕುತೂಹಲ ಅಂಶವೆಂದರೆ ಈ ಸಾಧನೆ ಮಾಡಿದ ಹಿಂದಿನ ಇಬ್ಬರು ಕ್ರಿಕೆಟಿಗರು ಮುಂಬೈನವರೇ. ರೋಹಿತ್ ಶರ್ಮಾ ಮತ್ತು ಪೃಥ್ವಿ ಶಾ ಇಬ್ಬರೂ ಮುಂಬೈಕರ್​ಗಳೇ ಆಗಿದ್ದಾರೆ.

ಇದನ್ನೂ ಓದಿ: PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

ಇನ್ನೊಂದು ಕುತೂಹಲವೆಂದರೆ, ಚೊಚ್ಚಲ ಇನ್ನಿಂಗ್ಸಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡಿದ ದಾಖಲೆ ಶಿಖರ್ ಧವನ್ ಅವರಿಗೆ ಸೇರಿದೆ. ಚಂಡೀಗಡದ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ 187 ರನ್ ಗಳಿಸಿದ್ದರು. ಅದಾದ ಬಳಿಕ ಅದೇ ವರ್ಷ ರೋಹಿತ್ ಶರ್ಮಾ ಕೂಡ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 177 ರನ್ ಭಾರಿಸಿದ್ದರು. ಚೊಚ್ಚಲ ಪಂದ್ಯದಲ್ಲಿ 150ಕ್ಕೂ ಹೆಚ್ಚು ರನ್ ಭಾರಿಸಿದವರು ಇವರಿಬ್ಬರು ಮಾತ್ರವೇ.

ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶತಕ ಭಾರಿಸಿದ ಭಾರತೀಯ ಕ್ರಿಕೆಟಿಗರು:ಸಂ. ಆಟಗಾರ ವರ್ಷ ರನ್ ವಿರುದ್ಧ ಸ್ಥಳ
1 ಲಾಲಾ ಅಮರನಾಥ್ 1933 118 ಇಂಗ್ಲೆಂಡ್ ಮುಂಬೈ
2 ದೀಪಕ್ ಶೋಧನ್ 1952 110 ಪಾಕಿಸ್ತಾನ್ ಕೋಲ್ಕತಾ
3 ಎಜಿ ಕೃಪಾಲ್ ಸಿಂಗ್ 1955 100 ನ್ಯೂಜಿಲೆಂಡ್ ಹೈದರಾಬಾದ್
4 ಅಬ್ಬಾಸ್ ಅಲಿ ಬೇಗ್ 1959 112 ಇಂಗ್ಲೆಂಡ್ ಮ್ಯಾಂಚೆಸ್ಟರ್
5 ಹನುಮಂತ್ ಸಿಂಗ್ 1964 105 ಇಂಗ್ಲೆಂಡ್ ದೆಹಲಿ
6 ಜಿ ಆರ್ ವಿಶ್ವನಾಥ್ 1969 137 ಆಸ್ಟ್ರೇಲಿಯಾ ಕಾನಪುರ್
7 ಸುರೀಂದರ್ ಅಮರನಾಥ್ 1976 124 ನ್ಯೂಜಿಲೆಂಡ್ ಆಕ್ಲೆಂಡ್
8 ಮೊಹಮ್ಮದ್ ಅಜರುದ್ದೀನ್ 1985 110 ಇಂಗ್ಲೆಂಡ್ ಕೋಲ್ಕತಾ
9 ಪ್ರವೀಣ್ ಆಮ್ರೆ 1992 103 ಸೌತ್ ಆಫ್ರಿಕಾ ಡರ್ಬಾನ್
10 ಸೌರವ್ ಗಂಗೂಲಿ 1996 131 ಇಂಗ್ಲೆಂಡ್ ಲಾರ್ಡ್ಸ್
11 ವೀರೇಂದ್ರ ಸೆಹ್ವಾಗ್ 2001 105 ಸೌತ್ ಆಫ್ರಿಕಾ ಬ್ಲೂಮ್​ಫೋಂಟೀನ್
12 ಸುರೇಶ್ ರೈನಾ 2010 120 ಶ್ರೀಲಂಕಾ ಕೊಲಂಬೋ
13 ಶಿಖರ್ ಧವನ್ 2013 187 ಆಸ್ಟ್ರೇಲಿಯಾ ಮೊಹಾಲಿ
14 ರೋಹಿತ್ ಶರ್ಮಾ 2013 177 ವೆಸ್ಟ್ ಇಂಡೀಸ್ ಕೋಲ್ಕತಾ
15 ಪೃಥ್ವಿ ಶಾ 2018 134 ವೆಸ್ಟ್ ಇಂಡೀಸ್ ರಾಜಕೋಟ್
16 ಶ್ರೇಯಸ್ ಅಯ್ಯರ್ 2021 105 ನ್ಯೂಜಿಲೆಂಡ್ ಕಾನಪುರ್

ಇದನ್ನೂ ಓದಿ: Bengaluru Bulls Koo: ಧೂಳ್ ಧೂಳ್… ಗೆಲ್ಲಕ್ಕೆ ಬಿಡಲ್ಲ…! ಬೆಂಗಳೂರು ಬುಲ್ಸ್ ಕಬಡ್ಡಿ ಕಹಳೆಯ ಕೂ

ಶ್ರೇಯಸ್ ಅಯ್ಯರ್ ಆತ್ಮವಿಶ್ವಾಸದ ಆಟ:

ನ್ಯೂಜಿಲೆಂಡ್ ವಿರುದ್ಧ ಕಾನಪುರ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬಹಳ ಆತ್ಮವಿಶ್ವಾಸಪೂರ್ವಕವಾದ ಆಟ ಪ್ರದರ್ಶಿಸಿದ್ದಾರೆ. ನಿನ್ನೆ ಮೊದಲ ದಿನಾಂತ್ಯದಲ್ಲಿ ಅಜೇಯ 75 ರನ್ ಗಳಿಸಿದ್ದ ಅಯ್ಯರ್, ಇಂದು ಅದೇ ಆತ್ಮವಿಶ್ವಾಸದಲ್ಲಿ ಆಡಿದರು. ರವೀಂದ್ರ ಜಡೇಜಾ ಮತ್ತು ವೃದ್ಧಿಮಾನ್ ಸಾಹ ಇಬ್ಬರೂ ಎರಡನೇ ದಿನದ ಆರಂಭಿಕ ಓವರ್​ಗಳಲ್ಲೇ ಔಟಾದರೂ ಅಯ್ಯರ್ ಏಕಾಗ್ರಚಿತ್ತ ಕಳೆದುಕೊಳ್ಳದೇ ಆಡಿ ಶತಕ ಪೂರೈಸಿದರು.

ನಿನ್ನೆ ಮೊದಲ ದಿನ ನ್ಯೂಜಿಲೆಂಡ್​ನ ವೇಗಿ ಕೈಲೆ ಜೇಮೀಸನ್ ಮಿಂಚಿದರೆ ಎರಡನೇ ದಿನ ಟಿಮ್ ಸೌದಿ ಅವರಿಗೆ ಸೇರಿತು.
Published by:Vijayasarthy SN
First published: