Dance- ಕೊಹ್ಲಿಗೆ ಡ್ಯಾನ್ಸ್ ಹೇಳಿಕೊಟ್ಟ ಚಹಲ್ ಪತ್ನಿ; ಶತಕದ ಸಂಭ್ರಮದಲ್ಲಿ ಅಯ್ಯರ್ ಡ್ಯಾನ್ಸ್

Cricketer Dance: ನೆವರ್​ ಗಿವಪ್ ಸಾಂಗ್​ನ ಮೇಕಿಂಗ್ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ತಂಡ ಬಿಡುಗಡೆ ಮಾಡಿದ್ದು, ಇದ್ರಲ್ಲಿ ಆರ್​ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಧನಶ್ರೀ ಡಾನ್ಸ್ ಹೇಳಿಕೊಟ್ಟಿದ್ದಾರೆ

ಶ್ರೇಯಸ್

ಶ್ರೇಯಸ್

 • Share this:
  ಟೀಮ್ ಇಂಡಿಯಾ( team India) ಆಟಗಾರರು (players) ಮೈದಾನದಲ್ಲಿ ಎಷ್ಟು ಅಗ್ರೆಸ್ಸಿವ್ aggressive ಆಗಿ ಆಟ ಆಡ್ತಾರೋ ಮೈದಾನದಿಂದ (field) ಹೊರಗೆ ಅಷ್ಟೇ ತಮ್ಮ ಜೀವನವನ್ನು ಎಂಜಾಯ್ (enjoy) ಮಾಡ್ತಾರೆ.. ಯಾವುದೇ ಒತ್ತಡವಿರಲಿ, ಯಾವುದೇ ಸಂದರ್ಭವಿರಲಿ (situation) ಪರಿಸ್ಥಿತಿಯನ್ನು ಶಾಂತಿಯುತವಾಗಿ ನಿಭಾಯಿಸುವ ಆಟಗಾರರು, ಸೋಶಿಯಲ್ ಮೀಡಿಯಾದಲ್ಲಿ (social media) ಸದಾ ಸಕ್ರಿಯರಾಗಿದ್ದು, ಅಭಿಮಾನಿಗಳಿಗೆ ಫುಲ್ ಮನರಂಜನೆ (entertainment) ನೀಡುತ್ತಾರೆ..ಈಗಾಗಲೇ ಯುಜುವೇಂದ್ರ ಚಹಾಲ್, (yuzvendra chahal) ರೋಹಿತ್ ಶರ್ಮಾ (Rohit Sharma) ವಿರಾಟ್ ಕೊಹ್ಲಿ( Virat Kohli) ಸೇರಿ, ಅನೇಕರು ತಮ್ಮ ಪನ್ನಿ ವಿಡಿಯೋ ಹಾಗೂ ಡ್ಯಾನ್ಸ್ ಗಳ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈಗ.. ನ್ಯೂಜಿಲ್ಯಾಂಡ್ (New Zealand) ವಿರುದ್ಧ ಆಡುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನಸೆಳೆದಿರುವ ಶ್ರೇಯಸ್ ಅಯ್ಯರ್ (Shreyas Iyer) , ಶತಕದ (century) ಸಂಭ್ರಮವನ್ನು ಡ್ಯಾನ್ಸ್( Dance) ಮಾಡಿ ಸಂಭ್ರಮಿಸಿದ್ದಾರೆ..

  ಡ್ಯಾನ್ಸ್ ಮಾಡಿ ಶತಕ ಸಂಭ್ರಮಿಸಿದ ಶ್ರೇಯಸ್ ಅಯ್ಯರ್

  ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಪರ 303ನೇ ಟೆಸ್ಟ್ ಕ್ರಿಕೆಟರ್ ಆಗಿ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.. ಶ್ರೇಯಸ್ ಅವರ ಶತಕದ ಸಂಭ್ರಮಕ್ಕೆ ಅನೇಕ ದಿಗ್ಗಜ ಕ್ರಿಕೆಟಿಗರು ಶಹಭಾಸ್ ಎಂದು ಹೇಳುತ್ತಿದ್ದಾರೆ.. ಶತಕ ಬಾರಿಸಿದ ಖುಷಿಯಲ್ಲಿರುವ ಶ್ರೇಯಸ್ ರೋಹಿತ್ ಶರ್ಮಾ, ಹಾಗೂ ಶಾರ್ದುಲ್ ಠಾಕೂರ್ ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.. ಈ ವಿಡಿಯೋವನ್ನು ಟೀಮ್ ಇಂಡಿಯಾ ಟಿ20 ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..
  ಶತಕ ಸಿಡಿಸಿ ಬಾಲ್ಯದ ಕೋಚ್ ಷರತ್ತು ಪೂರೈಸಿದ ಶ್ರೇಯಸ್

  ಇನ್ನು ಪದಾರ್ಪಣೆ ಮಾಡಿದ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿಯೇ ಶತಕವನ್ನು ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಗೆದ್ದಿದ್ದಾರೆ. ಹೌದು, "ನೀನು ಯಾವ ದಿನ ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಬಾರಿಸುತ್ತೀಯೋ, ಅಂದೇ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡ" ಎಂದು ತರಬೇತುದಾರ ಪ್ರವೀಣ್ ಆಮ್ರೆ ಶ್ರೇಯಸ್ ಅಯ್ಯರ್ ಅವರಿಗೆ ಷರತ್ತನ್ನು ವಿಧಿಸಿದ್ದರು. ಈಗ ಷರತ್ತು ಗೆದ್ದಿರುವ ಶ್ರೇಯಸ್ ತಮ್ಮ ಬಾಲ್ಯದ ಕೋಚ್ ನ್ನು ಮನೆಗೆ ಊಟಕ್ಕೆ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ..

  ಇದನ್ನೂ ಓದಿ: ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಭಾರಿಸಿದ ಅಯ್ಯರ್; ಈ ಸಾಧನೆ ಮಾಡಿದ ಕೆಲವೇ ಆಟಗಾರರ ಪಟ್ಟಿ

  ವಿರಾಟ್ ಕೊಹ್ಲಿಗೆ ಡ್ಯಾನ್ಸ್ ಹೇಳಿಕೊಟ್ಟ ಚಹಲ್ ಪತ್ನಿ: 

  ಇತ್ತೀಚಿಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಆಟಗಾರರಿಗೆ ಧನ್ಯವಾದ ಅರ್ಪಿಸಲು ವಿರಾಟ್​ ಕೊಹ್ಲಿ, ಎಬಿಡಿ ವಿಲಿಯರ್ಸ್​ ಹಾಗೂ ಇತರೆ ಆಟಗಾರರು ಕಾಣಿಸಿಕೊಂಡ ವಿಶೇಷ ವಿಡಿಯೋ ಸಾಂಗ್​ವೊಂದನ್ನು​ ಬಿಡುಗಡೆ ಮಾಡಿತ್ತು.ಈಗ ನೆವರ್​ ಗಿವಪ್ ಸಾಂಗ್ ನ ಮೇಕಿಂಗ್ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ತಂಡ ಬಿಡುಗಡೆ ಮಾಡಿದ್ದು, ಇದ್ರಲ್ಲಿ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಧನಶ್ರೀ ಡಾನ್ಸ್ ಹೇಳಿಕೊಟ್ಟಿದ್ದಾರೆ… ನೆವರ್ ಗಿವ್ ಆಪ್ ಸಾಂಗ್ ನ ಮೇಕಿಂಗ್ ವಿಡಿಯೋದಲ್ಲಿ ಕೊಹ್ಲಿ ಧನಶ್ರೀ ಇಂದ ಒಳ್ಳೆ ವಿಧೇಯ ವಿದ್ಯಾರ್ಥಿಯಂತೆ ಡ್ಯಾನ್ಸ್ ಕಲಿತುಕೊಂಡಿದ್ದಾರೆ..
  ಇನ್ನು ನೆವರ್​ ಗಿವಪ್​ ಸಾಂಗ್​ನಲ್ಲಿ ಮಾಜಿ ನಾಯಕ ವಿರಾಟ್​ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಮ್ಯಾಕ್ಸ್​ವೆಲ್​, ಪಡಿಕ್ಕಲ್​, ಚಹಲ್ ಸೇರಿದಂತೆ ಸಹ ಆಟಗಾರರು ಕಾಣಿಸಿಕೊಂಡಿದ್ರು. ಇನ್ನು ಈ ಸಾಂಗ್​ ಅನ್ನ ಯಜುವೇಂದ್ರ ಚಹಲ್ ಪತ್ನಿ ಧನಶ್ರಿ ವರ್ಮಾ ನಿರ್ದೇಶನ , ಕೊರಿಯೋಗ್ರಫಿ ಮಾಡಿದ್ದು, ಹರ್ಷ ಉಪಾಧ್ಯಾಯ ಸಂಗೀತ ಸಂಯೋಜನೆ ಮಾಡಿದ್ದಾರೆ.
  Published by:ranjumbkgowda1 ranjumbkgowda1
  First published: