VIDEO: ವಿಶ್ವಕಪ್​ನಿಂದ ಔಟ್​; ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ ಶಿಖರ್​ ಧವನ್​

ಗಾಯದಿಂದ ಚೇತರಿಕೆ ಪಡೆದು ಮುಂದಿನ ಆಟಕ್ಕೆ ಸಿದ್ಧಗೊಳ್ಳಬೇಕಿದೆ. ಭಾರತ ತಂಡಕ್ಕೆ ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಧವನ್​ ಹೇಳಿಕೊಂಡಿದ್ದಾರೆ.

ಶಿಖರ್ ಧವನ್

ಶಿಖರ್ ಧವನ್

  • News18
  • Last Updated :
  • Share this:
ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ವಿಶ್ವಕಪ್​ನಿಂದಲೇ ಹೊರಗುಳಿದಿದ್ದಾರೆ. ಧವನ್​ ಅಭಿಮಾನಿಗಳಿಗೋಸ್ಕರ ಭಾವನಾತ್ಮಕ ವಿಡಿಯೋ ಮಾಡಿ ಹಾಕಿದ್ದಾರೆ. ಈ ವಿಡಿಯೋ ಟ್ವಿಟ್ಟರಿಗರ ಮನ ಗೆದ್ದಿದೆ.

“ಗಾಯಗೊಂಡ ಹೆಬ್ಬೆರಳು ಚೇತರಿಕೆ ಕಾಣದ ಕಾರಣ ಈ ಬಾರಿಯ ವಿಶ್ವಕಪ್​ನಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಶೋ ಸಾಗಲೇಬೇಕು. ಇಡೀ ದೇಶದ ಕ್ರೀಡಾಭಿಮಾನಿಗಳು ಹಾಗೂ ತಂಡದಿಂದ ಸಿಕ್ಕ ಪ್ರೀತಿಗೆ ನಾನು ಚಿರಋಣಿ,” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

“ಈ ಬಾರಿಯ ವಿಶ್ವಕಪ್​ನಲ್ಲಿ ಆಡಲೇಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ,ದುರಾದೃಷ್ಟವಶಾತ್​ ಅದು ಸಾಧ್ಯವಾಗಿಲ್ಲ. ಗಾಯದಿಂದ ಚೇತರಿಕೆ ಪಡೆದು ಮುಂದಿನ ಆಟಕ್ಕೆ ಸಿದ್ಧಗೊಳ್ಳಬೇಕಿದೆ. ಭಾರತ ತಂಡಕ್ಕೆ ನಿಮ್ಮ ಬೆಂಬಲ ಹೀಗೆ ಇರಲಿ,” ಎಂದು ಧವನ್​ ಕೋರಿಕೊಂಡಿದ್ದಾರೆ.



ಕಳೆದ ಆಸ್ಟ್ರೇಲಿಯಾ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಧವನ್ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದರು. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್​ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.

ಹೀಗಾಗಿ ಧವನ್​ಗೆ ಮೂರು ವಾರಗಳ ಕಾಲ ವಿಶ್ವಕಪ್​ನಿಂದ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಊ ಹೇಳಿತ್ತು. ಆದರೆ ಸದ್ಯ ಬಂದಿರುವ ಮಾಹಿತಿ ಪ್ರಕಾರ ಧವನ್ ವಿಶ್ವಕಪ್​ನಿಂದಲೇ ಹೊರಬಿದ್ದಿದ್ದು, ಇವರ ಸ್ಥಾನಕ್ಕೆ ರಿಷಭ್ ಪಂತ್​ರನ್ನು ನೇಮಕ ಮಾಡಲಾಗಿದೆ.

First published: