MAshok KumarMAshok Kumar
|
news18 Updated:June 17, 2019, 2:24 PM IST
ಶೋಯಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಪಾಕ್ ಆಟಗಾರರ ಜೊತೆಗೆ ಶೀಶಾ ಕೆಫೆ ಬಾರ್ನಲ್ಲಿ ಕುಳಿತಿರುವುದು.
- News18
- Last Updated:
June 17, 2019, 2:24 PM IST
ಮ್ಯಾಂಚೆಸ್ಟರ್ (ಜೂನ್.17); ವಿಶ್ವ ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಅದಕ್ಕೆ ಬೇರೆಯದೇ ಮಹತ್ವವಿದೆ. ಇನ್ನೂ ಭಾರತದ ಎದುರು ವಿಶ್ವಕಪ್ನಲ್ಲಿ ಸತತ 7 ಪಂದ್ಯಗಳಲ್ಲಿ ಸೋಲನುಭವಿಸಿದ ಕೆಟ್ಟ ದಾಖಲೆ ಪಾಕ್ ಆಟಗಾರರ ಮೇಲಿದೆ. ಹೀಗಾಗಿ 2019ರ ವಿಶ್ವಕಪ್ನಲ್ಲಾದರೂ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿ ಪಾಕ್ ಆಟಗಾರರು ಕಣಕ್ಕಿಳಿದಿದ್ದರು. ಪಾಕ್ ಬೆಂಬಲಿಗರೂ ಅದೇ ಉಮೇದಿನಲ್ಲಿದ್ದರು. ಆದರೆ ಫಲಿತಾಂಶ ಮಾತ್ರ ಬೇರೆಯೇ ಆಗಿತ್ತು. ಪಾಕ್ ಎದುರು ಏಳನೇ ಬಾರಿ ಭಾರತ ಮತ್ತೆ ಗೆದ್ದು ಬೀಗಿತ್ತು. ಆದರೆ, ಈ ಸೋಲಿನ ಹಿನ್ನೆಲೆಯಲ್ಲಿ ಪಂದ್ಯಕ್ಕೂ ಮುನ್ನ ಪಾಕ್ ಆಟಗಾರರು ಮಾಡಿರುವ ಮೋಜು ಮಸ್ತಿ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಪರಿಣಾಮ ಪಾಕ್ ಆಟಗಾರರು ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಪಾಕ್ ಆಟಗಾರ ಶೋಯಬ್ ಮಲಿಕ್ ತಮ್ಮ ಪತ್ನಿ ಭಾರತದ ಮೂಲದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಪಂದ್ಯಕ್ಕೂ ಮುನ್ನ ಮ್ಯಾಂಚೆಸ್ಟರ್ನ ಶೀಶಾ ಕೆಫೆ ಬಾರ್ಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲದೆ ತಮ್ಮ ತಂಡದ ಸಹ ಆಟಗಾರರಿಗೆ ಪರಿಚಯಿಸಿದ್ದಾರೆ. ಈ ವಿಡಿಯೋದಲ್ಲಿ ಮಲಿಕ್ ಹಾಗೂ ಸಾನಿಯಾ ಮಿರ್ಜಾ ಜೊತೆಗೆ ಪಾಕ್ ಆಟಗಾರರಾದ ವಾಹಬ್ ರಿಯಾಜ್ ಹಾಗೂ ಇಮಾಮ್-ಉಲ್-ಹಕ್ ಒಟ್ಟಿಗೆ ಕುಳಿದು ಶೀಶಾ ಸೇದುತ್ತಾ ಊಟ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ಪಂದ್ಯದ ನಂತರ ಪಾಕಿಸ್ತಾನ್ ಸೋಲಿಗೆ ಪ್ರಮುಖ ಕಾರಣಗಳನ್ನು ಹುಡುಕುತ್ತಿದ್ದ ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಇದೀಗ ಈ ವಿಡಿಯೋ ಒಳಗಾಗಿದೆ. ಭಾರತ ಎದುರಿನ ಪ್ರಮುಖ ಪಂದ್ಯಕ್ಕೂ ಮುನ್ನ ಪಾಕ್ ಅಟಗಾರರು ಶೀಶಾ ಕೆಫೆಯಲ್ಲಿ ಕುಳಿತು ಹುಕ್ಕಾ ಸೇದುತ್ತಾ ಹೀಗೆ ಮಜಾ ಮಾಡುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.ಮತ್ತೆ ಕೆಲವರು ಶೋಯಬ್ ಮಲಿಕ್ ರಾತ್ರಿ 2 ಗಂಟೆಯವರೆಗೆ ಶೀಶಾ ಕೆಫೆಯಲ್ಲಿ ಹುಕ್ಕಾ ಎಳೆದಿದ್ದಾರೆ. ಇನ್ನೂ ಜೊತೆಗಿದ್ದ ಆಟಗಾರರು ಫಿಜಾ ಬರ್ಗರ್ ನಂತಹ ಜಂಕ್ ಫುಡ್ಗಳನ್ನು ತಿಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಹ ಆಟಗಾರರು ಅಥವಾ ಮಡದಿಯ ಜೊತೆಗೆ ಹೀಗೆ ನೈಟ್ಔಟ್ ಹೋಗುವುದು ಅಪರಾಧವಲ್ಲ ಆದರೆ, ಭಾರತದ ತಂಡದ ಎದುರಿನ ಪ್ರಮುಖ ಪಂದ್ಯದ ಮುನ್ನಾ ದಿನ ರಾತ್ರಿ ಹೀಗೆ ವರ್ತಿಸುವುದು ಶುದ್ಧ ಅವಿವೇಕ ಎಂದು ಮತ್ತಷ್ಟು ಪಾಕ್ ಅಭಿಮಾನಿಗಳು ಶೋಯಬ್ ಮಲಿಕ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಮಲಿಕ್ ಮೊದಲ ಎಸೆತಕ್ಕೆ ಶೂನ್ಯಕ್ಕೆ ಪೆವಿಲಿಯನ್ ತೆರಳಿರುವುದು ಸಹ ಪಾಕ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ, ಈ ವಿಡಿಯೋ ಕುರಿತು ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, “ನಮ್ಮ ಅನುಮತಿ ಇಲ್ಲದೆ ಈ ವಿಡಿಯೋವನ್ನು ಹೇಗೆ ತೆಗೆಯಲಾಯಿತು. ಇದರಿಂದ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ನಾವು ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ನಮ್ಮ ಜೊತೆ ಒಂದು ಮಗು ಸಹ ಇತ್ತು. ಪಂದ್ಯದಲ್ಲಿ ಸೋಲನುಭವಿಸಿದರೆ ಊಟ ಮಾಡಬಾರದೆ? ಎಂದು ಕಿಡಿಕಾರಿದ್ದಾರೆ.
ಸಾನಿಯಾ ಮಿರ್ಜಾ ಅವರ ಈ ಟ್ವೀಟ್ನಿಂದಾಗಿ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಸಮಾಧಾನಕ್ಕೊಳಪಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಅಲ್ಲದೆ ಕೆಲವರು ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡುವ ಮೂಲಕ ಪಾಕ್ ಆಟಗಾರರ ತಯಾರಿಯನ್ನೂ ಭಾರತೀಯ ಆಟಗಾರರ ತಯಾರಿಯನ್ನೂ ಹೋಲಿಕೆ ಮಾಡಿ ಪಾಕ್ ಕ್ರಿಕೆಟಿಗರನ್ನು ಹೀಗೆಳೆದಿದ್ದಾರೆ.
First published:
June 17, 2019, 2:00 PM IST