MS Dhoni: ಧೋನಿಯ ಕುರಿತು ಪಾಕ್ ಕ್ರಿಕೆಟಿಗ ನೀಡಿದ ಉತ್ತರಕ್ಕೆ ತಲಾ ಫ್ಯಾನ್ಸ್​ ಫುಲ್ ಫಿದಾ..!

ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್, ಇವರಿಬ್ಬರಲ್ಲಿ ಟೆಸ್ಟ್ ಕ್ರಿಕೆಟ್​ನ ಬೆಸ್ಟ್ ಬ್ಯಾಟ್ಸ್​ಮನ್​ ಯಾರು ಎಂಬ ಪ್ರಶ್ನೆಯನ್ನು ಅಖ್ತರ್ ಮುಂದಿಟ್ಟಿದ್ದರು. ಇದಕ್ಕೆ ಪಾಕ್ ವೇಗಿ ರಾಹುಲ್ ದ್ರಾವಿಡ್ ಹೆಸರನ್ನು ಸೂಚಿಸಿದ್ದರು.

MS Dhoni

MS Dhoni

  • Share this:
    ರಾವಲ್ಪಿಂಡಿ ಎಕ್ಸ್​ಪ್ರೆಸ್ ಖ್ಯಾತಿಯ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ನಿವೃತ್ತಿ ಬಳಿಕ ಕ್ರಿಕೆಟ್​ನಿಂದ ಮಾತ್ರ ದೂರವಾಗಿಲ್ಲ. ಇದಕ್ಕೆ ಸಾಕ್ಷಿಯೇ ಕ್ರಿಕೆಟ್​ ವಿಷಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವುದು. ಇನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಒಂದಲ್ಲ ಒಂದು ವಾದ-ವಿವಾದಗಳ ಮೂಲಕ ಗಮನ ಸೆಳೆಯುವ ಅಖ್ತರ್ ಇತ್ತೀಚೆಗೆ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಮನಗೆದ್ದಿದ್ದರು.

    ಅದರಲ್ಲೂ ಅಭಿಮಾನಿಯೊಬ್ಬ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್, ಇವರಿಬ್ಬರಲ್ಲಿ ಟೆಸ್ಟ್ ಕ್ರಿಕೆಟ್​ನ ಬೆಸ್ಟ್ ಬ್ಯಾಟ್ಸ್​ಮನ್​ ಯಾರು ಎಂಬ ಪ್ರಶ್ನೆಯನ್ನು ಅಖ್ತರ್ ಮುಂದಿಟ್ಟಿದ್ದರು. ಇದಕ್ಕೆ ಪಾಕ್ ವೇಗಿ ರಾಹುಲ್ ದ್ರಾವಿಡ್ ಹೆಸರನ್ನು ಸೂಚಿಸಿದ್ದರು. ಇನ್ನೋರ್ವ ಧೋನಿಯ ಕುರಿತು ಪ್ರಶ್ನೆಯ ಬೌನ್ಸರ್ ಎಸೆದು ಗಮನ ಸೆಳೆದಿದ್ದರು.

    ಟ್ವಿಟರ್‌ನಲ್ಲಿ #AskShoaibAkhtar ಹ್ಯಾಷ್‌ಟ್ಯಾಗ್‌ ಮೂಲಕ ಪ್ರಶ್ನೋತ್ತರ ನಡೆಸಿದ್ದ ಅಖ್ತರ್​ಗೆ ಪಾಕ್ ಅಭಿಮಾನಿಯೊಬ್ಬ ಧೋನಿ ಬಗ್ಗೆ ನೀವು ಏನು ಹೇಳ ಬಯಸುತ್ತೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅಖ್ತರ್ ನೀಡಿದ ಉತ್ತರಕ್ಕೆ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ಸಖತ್ ಖುಷಿ ಆಗಿದ್ದಾರೆ.



    ಹೌದು, ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಶೋಯೆಬ್ ಅಖ್ತರ್ ನೀಡಿದ ಉತ್ತರ, ಅದೊಂದು ಯುಗ ಎಂದು ಬಣ್ಣಿಸಿದ್ದಾರೆ. ರಾವಲ್ಪಿಂಡಿ ಎಕ್ಸ್​ಪ್ರೆಸ್ ಧೋನಿಯನ್ನು ಕ್ರಿಕೆಟ್​ನ ಒಂದು ಯುಗದ ಹೆಸರು ಎಂದು ವರ್ಣಿಸಿದ್ದಾರೆ. ಪಾಕ್ ಮಾಜಿ ವೇಗಿಯ ಈ ಉತ್ತರಕ್ಕೆ ತಲಾ ಫ್ಯಾನ್ಸ್​ ಫುಲ್ ಫಿದಾ ಆಗಿದ್ದಾರೆ.
    Published by:zahir
    First published: