Shoaib Akhtar- ನಾನು ಹೋರಾಟಗಾರ, ಸೋಲಲ್ಲ: ಪಾಕ್ ಚಾನಲ್​ನ ಮಾನನಷ್ಟ ಮೊಕದ್ದಮೆಗೆ ಅಖ್ತರ್ ಪ್ರತಿಕ್ರಿಯೆ

Pakistan Television Turmoil- ಆಂಕರ್ ಹೇಳಿದ್ದಕ್ಕೆ ಶೋನಿಂದ ಹೊರಹೋಗಿದ್ದಷ್ಟೇ ಅಲ್ಲ, ಚಾನಲ್ ಜೊತೆ ಸಂಬಂಧವನ್ನೂ ಕಡಿದುಕೊಂಡ ಶೋಯಬ್ ಅಖ್ತರ್ ಅವರಿಗೆ ಪಿಟಿವಿ 10 ಕೋಟಿ ರೂ ಮಾನನಷ್ಟ ಮೊಕದ್ದಮೆ ಹಾಕಿದೆ. ಆದರೆ, ಅಖ್ತರ್ ತಾನು ಹೋರಾಡುವುದಾಗಿ ಹೇಳಿದ್ಧಾರೆ.

ಶೋಯಬ್ ಅಖ್ತರ್

ಶೋಯಬ್ ಅಖ್ತರ್

 • Share this:
  ದುಬೈ, ನ. 8: ಪಾಕಿಸ್ತಾನದ ಪಿಟಿವಿ ನ್ಯೂಸ್ ಚಾನಲ್ (PTV channel) ಮತ್ತು ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ (Ex Cricketer Shoaib Akhtar) ನಡುವಿನ ಜಗಳ ಇನ್ನೊಂದು ಹಂತಕ್ಕೆ ಹೋಗಿದೆ. ವಿಶ್ವದ ಅತ್ಯಂತ ವೇಗದ ಬೌಲರ್ ಎಂದು ಹೆಸರುವಾಸಿಯಾಗಿದ್ದ ಶೋಯಬ್ ಅಖ್ತರ್ ಮೇಲೆ ಪಿಟಿವಿ ಹತ್ತು ಕೋಟಿ ರೂ (ಪಾಕ್ ರೂಪಾಯಿ) ಮಾನನಷ್ಟ ಮೊಕದ್ದಮೆ ಹೂಡಿದೆ. ಕಾರ್ಯಕ್ರಮ ಮಧ್ಯೆಯೇ ಶೋಯಬ್ ಅಖ್ತರ್ ಎದ್ದುಹೋದ್ದರಿಂದ ಹಾಗೂ ಭಾರತದ ಚಾನಲ್​ಗೆ ಹೋಗಿ ಅಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ತಮ್ಮ ವಾಹಿನಿಗೆ ಭಾರೀ ನಷ್ಟ ಆಗಿದೆ ಎಂದು ಪಿಟಿವಿ ಆರೋಪಿಸಿ ಡಿಫೆಮೇಶನ್ ಕೇಸ್ ಹಾಕಿದೆ. ಆದರೆ, ತಾನು ಇಂಥದ್ದಕ್ಕೆಲ್ಲಾ ಜಗ್ಗಲ್ಲ. ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ತಂದು ಈಗ ಮಾನನಷ್ಟ ಕೇಸ್ ಹಾಕಿದ್ದಾರೆ. ನಾನು ಸುಮ್ಮನೆ ಇರಲ್ಲ ಎಂದು ಶೋಯಬ್ ಅಖ್ತರ್ ಅವರೂ ಆರ್ಭಟಿಸಿದ್ದಾರೆ.

  “ಒಪ್ಪಂದದ ಪ್ರಕಾರ ಯಾರೇ ಈ ಒಪ್ಪಂದ ಮಧ್ಯದಲ್ಲೇ ಬಿಟ್ಟು ಹೋಗಬೇಕಾದರೆ ಮೂರು ತಿಂಗಳು ಪೂರ್ವದಲ್ಲೇ ಲಿಖಿತ ಸೂಚನೆ ನೀಡಬೇಕು. ಅಥವಾ ಮೂರು ತಿಂಗಳ ಸಂಭಾವನೆ ಹಣವನ್ನು ಒದಗಿಸಿ ಹೋಗಬಹುದು ಎಂದು ನಿಯಮ ಇದೆ. ಆದರೆ, ಅಕ್ಟೋಬರ್ 26ರಂದು ಶೋಯಬ್ ಅಖ್ತರ್ ಟಿವಿ ಪ್ರಸಾರದಿಂದ ಹೊರಹೋಗಿಬಿಟ್ಟರು. ಇದರಿಂದ ಪಿಟಿವಿಗೆ ಭಾರೀ ಹಣಕಾಸು ನಷ್ಟ ಆಯಿತು” ಎಂದು ಶೋಯಬ್ ಅಖ್ತರ್ ಅವರಿಗೆ ಪಿಟಿವಿ ನೋಟೀಸ್ ಜಾರಿ ಮಾಡಿದೆ ಎಂದು ಪಾಕಿಸ್ತಾನದ ಎಕ್ಸ್​ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

  ಭಾರತೀಯ ಚಾನೆಲ್​ಗೆ ಶೋ ಕೊಟ್ಟು ನಮಗೆ ಹಾನಿ ಮಾಡಿದಿರಿ ಎಂದ ಪಿಟಿವಿ:

  “ಟಿ20 ವಿಶ್ವಕಪ್ ಪ್ರಸರಣದ (T20 World Cup Transmission) ವೇಳೆಯೇ ಪಿಟಿವಿ ಮ್ಯಾನೇಜ್ಮೆಂಟ್​ಗೆ ಮೊದಲೇ ಮಾಹಿತಿ ನೀಡದೆಯೇ ನೀವು ದುಬೈ ತೊರೆದು ಹೋದಿರಿ. ಅಷ್ಟೇ ಅಲ್ಲ, ಭಾರತೀಯ ಟಿವಿಯ ಶೋನಲ್ಲಿ ಹರ್ಭಜನ್ ಸಿಂಗ್ (Harbhajan Singh) ಜೊತೆ ಕಾಣಿಸಿಕೊಂಡು ಪಿಟಿವಿಗೆ ಹಾನಿ ತಂದಿರಿ” ಎಂದು ಅಖ್ತರ್ ಅವರಿಗೆ ಪಿಟಿವಿ ತಾನು ನೀಡಿರುವ ನೋಟೀಸ್​ನಲ್ಲಿ ತಿಳಿಸಿದೆ.

  ಇದನ್ನೂ ಓದಿ: India vs Pak- ‘12-1ರ ಭೋಜನ’- ಭಾರತವನ್ನ ಅಣಗಿಸಿದ ಪಾಕಿಸ್ತಾನಕ್ಕೆ ಜಾಫರ್ ತಿರುಗೇಟು

  ಪ್ರಕಟವಾಗಿರುವ ವರದಿಗಳ ಪ್ರಕಾರ ಮೂರು ತಿಂಗಳ ಸಂಬಳದ ಮೊತ್ತವಾದ 33.33 ಲಕ್ಷ ರೂಪಾಯಿಯನ್ನ ಪಾವತಿಸುವಂತೆ ಅಖ್ತರ್​ಗೆ ಪಿಟಿವಿ ಕೇಳಿದೆ. ಬೆಳವಣಿಗೆಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ ಶೋಯಬ್ ಅಖ್ತರ್, ತಮ್ಮ ವಕೀಲರ ಮೂಲಕ ಈ ಪ್ರಕರಣವನ್ನ ಮುಂದುವರಿಸುವುದಾಗಿ ತಿಳಿಸಿದ್ಧಾರೆ.

  “ಬಹಳ ನಿರಾಸೆಯಾಗಿದೆ. ನಾನು ಪಿಟಿವಿಗಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಆತ್ಮಗೌರವ ಮತ್ತು ಪ್ರತಿಷ್ಠೆಯನ್ನ ಕಾಪಾಡಲು ಅಸಮರ್ಥವಾದವರು ಈಗ ನನಗೆ ರಿಕವರಿ ನೋಟೀಸ್ ಕೊಟ್ಟಿದ್ದಾರೆ. ನಾನೊಬ್ಬ ಹೋರಾಟಗಾರ. ಇಲ್ಲಿಗೇ ಸುಮ್ಮನಾಗುವುದಿಲ್ಲ. ಈ ಕಾನೂನು ಹೋರಾಟವನ್ನು ಎದುರಿಸುತ್ತೇನೆ” ಎಂದು ಶೋಯಬ್ ಅಖ್ತರ್ ಟ್ವೀಟ್ ಮಾಡಿದ್ಧಾರೆ.

  ಅಂದು ನಡೆದದ್ದೇನು?

  ಶೋಯಬ್ ಅಖ್ತರ್ ಅವರು ಪಿಟಿವಿ ಶೋನಿಂದ ಹೊರಹೋದ ಘಟನೆ ನಡೆದದ್ದು ಕಳೆದ ವಾರ. ಟಿ20 ವಿಶ್ವಕಪ್ ಕುರಿತ ಚರ್ಚೆಯ ವೇಳೆ ಪತ್ರಕರ್ತ ಹಾಗೂ ಶೋನ ನಿರೂಪಕ ಡಾ| ನೌಮನ್ ನಿಯಾಜ್ ಮತ್ತು ಶೋಯಬ್ ಅಖ್ತರ್ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಇನ್ನೂ ಕೆಲ ಕ್ರಿಕೆಟ್ ಖ್ಯಾತನಾಮರು ಶೋನಲ್ಲಿ ಪಾಲ್ಗೊಂಡಿದ್ದರು. ಆಗ ನಿಯಾಜ್ ಅವರು ಶೋಯಬ್ ಅಖ್ತರ್ ಅವರಿಗೆ ಶೋನಿಂದ ಹೊರಹೋಗುವಂತೆ ಹೇಳಿದ ಘಟನೆ ಆಯಿತು.

  ಇದನ್ನೂ ಓದಿ: T20 Trophy- ಕರ್ನಾಟಕಕ್ಕೆ ಸತತ 4ನೇ ಜಯ; ಪ್ರೀಕ್ವಾರ್ಟರ್ ಫೈನಲ್ ಪ್ರವೇಶ; ಇಲ್ಲಿದೆ ಅಂಕಪಟ್ಟಿ

  “ನೀವು ಸ್ವಲ್ಪ ಒರಟರಾಗಿ ನಡೆದುಕೊಳ್ಳುತ್ತಿದ್ದೀರಿ. ನಾನು ಈ ಮಾತನ್ನ ಹೇಳಬೇಕೆಂದಿರಲಿಲ್ಲ. ಆದರೆ, ನೀವು ಅತಿಬುದ್ಧಿವಂತರೆಂದುಕೊಂಡಿದ್ದರೆ ಇಲ್ಲಿಂದ ಹೋಗಬಹುದು. ಆನ್ ಏರ್​ನಲ್ಲೇ ನಾನು ಈ ಮಾತು ಹೇಳುತ್ತಿದ್ದೇನೆ” ಎಂದು ಡಾ. ನೌಮನ್ ನಿಯಾಜ್ ಕಾರ್ಯಕ್ರಮದ ವೇಳೆಯೇ ಹೇಳಿದ್ದರು.

  ಕ್ಷಮೆ ಯಾಚಿಸಿದ ಆಂಕರ್:

  ಆಗ ಶೋಯಬ್ ಅಖ್ತರ್ ಅವರು ಅಸಮಾಧಾನಗೊಂಡು ಕಾರ್ಯಕ್ರಮದ ಮಧ್ಯೆಯೇ ಅಲ್ಲಿಂದ ಹೊರಹೋಗಿದ್ದರು. ಕಳೆದ ಶುಕ್ರವಾರದಂದು ಪತ್ರಕರ್ತ ನೌಮನ್ ನಿಯಾಜ್ ಅವರು ಸಾರ್ವಜನಿಕವಾಗಿ ಈ ಘಟನೆಗೆ ಕ್ಷಮೆ ಯಾಚಿಸಿದ್ದೂ ಆಯಿತು.
  Published by:Vijayasarthy SN
  First published: