ಟೀಂ ಇಂಡಿಯಾ ಗಬ್ಬರ್​ಗೆ ಎರಡೆರಡು ಪೆಟ್ಟು: ವಿಚ್ಛೇದನದ ನಂತರ ಟಿ-20 ವಲ್ಡ್​ಕಪ್​ನಿಂದಲೂ ಡಿವೋರ್ಸ್​

Shikhar Dhavan Tragedy: ಎರಡು ದಿನಗಳ ಹಿಂದಷ್ಟೇ ಹಲವು ವರ್ಷಗಳ ದಾಂಪತ್ಯ ಜೀವನದಿಂದಲೂ ಶಿಖರ್​ ಧವನ್​ ಅನುವಾರ್ಯವಾಗಿ ಆಚೆ ಬರುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಟಿ-20 ತಂಡದ ಮುಖ್ಯ ಪಾತ್ರರಾಗಿದ್ದ ಶಿಖರ್​ ಮುಂದಿನ ಟಿ-20 ವಲ್ಡ್​ಕಪ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ

ಶಿಖರ್ ಧವನ್ ಮತ್ತು ಇಶಾನ್ ಕಿಶನ್

ಶಿಖರ್ ಧವನ್ ಮತ್ತು ಇಶಾನ್ ಕಿಶನ್

 • Share this:
  ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಮಹತ್ವಾಕಾಂಕ್ಷೆಯ ಟಿ20 ವಿಶ್ವಕಪ್​ಗೆ ಕೊನೆಗೂ ಭಾರತ ತಂಡವನ್ನು ಬಿಸಿಸಿಐ ಘೋಷಿಸಿದೆ. ಆದರೆ, 15 ಆಟಗಾರರ ಸ್ಕ್ವಾಡ್​ನಲ್ಲಿ ಐಪಿಎಲ್​ ಯಶಸ್ವಿ ಬ್ಯಾಟ್ಸ್​ಮನ್ ಶಿಖರ್ ಧವನ್ ಮತ್ತು ಲೆಗ್​ ಸ್ಪಿನ್ನರ್​ ಯಜುವೇಂದ್ರ ಚಾಹಲ್​ನನ್ನು ಹೊರಗಿಟ್ಟು ಅಚ್ಚರಿ ಮೂಡಿಸಿರುವ ಬಿಸಿಸಿಐ, 4 ವರ್ಷಗಳ ನಂತರ ಟಿ20 ತಂಡಕ್ಕೆ ಮತ್ತೆ ಆಫ್​ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ರನ್ನು ಆಯ್ಕೆ ಮಾಡುವ ಮೂಲಕ ಮತ್ತೊಂದು ಅಚ್ಚರಿ ನೀಡಿದೆ.ಅಲ್ಲದೆ, ಇದೇ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಮತ್ತೋರ್ವ ಆಫ್ ಸ್ಪಿನ್ನರ್ ತಮಿಳುನಾಡು ಮೂಲದ ವರುಣ್ ಚಕ್ರವರ್ತಿ ಮತ್ತು ಮುಂಬೈ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್​ಗೆ ಅವಕಾಶ ನೀಡಲಾಗಿದೆ.

  ಎರಡು ದಿನಗಳ ಹಿಂದಷ್ಟೇ ಹಲವು ವರ್ಷಗಳ ದಾಂಪತ್ಯ ಜೀವನದಿಂದಲೂ ಶಿಖರ್​ ಧವನ್​ ಅನುವಾರ್ಯವಾಗಿ ಆಚೆ ಬರುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಟಿ-20 ತಂಡದ ಮುಖ್ಯ ಪಾತ್ರರಾಗಿದ್ದ ಶಿಖರ್​ ಮುಂದಿನ ಟಿ-20 ವಲ್ಡ್​ಕಪ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ವೈಯಕ್ತಿಕ ಜೀವನ ಮತ್ತು ವೃತ್ತಿ ಕ್ಷೇತ್ರ ಎರಡರಲ್ಲೂ ಗಬ್ಬರ್​ ಖ್ಯಾತಿಯ ಶಿಖರ್​ ಧವನ್​ಗೆ ಹಿನ್ನಡೆಯಾಗಿದೆ. ಮೂಲಗಳ ಪ್ರಕಾರ ಶಿಖರ್​ ಒಂದಾದ ಮೇಲೆ ಒಂದು ಪೆಟ್ಟು ತಿಂದು ತುಂಬಾ ಬೇಸರ ಅನುಭವಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ, ಏಕ ದಿನ ಪಂದ್ಯ, ಟಿ 20 ಮತ್ತು ಟೆಸ್ಟ್​ಗಳಲ್ಲೂ ಕೂಡ ಭಾರತದ ಓಪನರ್​ ಆಗಿ ಶಿಖರ್​ ಧವನ್​ ಮಿಂಚಿದ್ದರು. ವೈಯಕ್ತಿಕ ಜೀವನದ ಜತೆಜತೆಗೆ ಕ್ರೀಡಾ ಜೀವನವೂ ಮುಸ್ಸಂಜೆ ತಲುಪಿದೆಯೇ? ಅದು ಭವಿಷ್ಯವೇ ನಿರ್ಧರಿಸಲಿದೆ.

  ಉಳಿದ ತಂಡ:

  ಇದಲ್ಲದೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಮತ್ತು ದೀಪಕ್ ಚಹರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ. 2017 ರಲ್ಲಿ ಕೊನೆಯದಾಗಿ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್ ಮತ್ತೆ ಭಾರತ ತಂಡಕ್ಕಾಗಿ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಆಯ್ಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇನ್ನೂ ಶ್ರೀಲಂಕಾದಲ್ಲಿ ನಡೆದ ಟಿ 20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಯಜುವೇಂದ್ರ ಚಾಹಲ್ ಅವರನ್ನು ಹೊರಗಿಟ್ಟಿರುವುದು ಸಹ ಅಚ್ಚರಿಗೆ ಕಾರಣವಾಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಅದ್ಭುತ ಪ್ರದರ್ಶನ ನೀಡದ ಕಾರಣಕ್ಕೆ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದಲ್ಲದೆ, ಇಂದು ಪ್ರಕಟಿಸಿರುವ 15 ಜನರ ತಂಡದಲ್ಲಿ 5 ಜನ ಸ್ಪಿನ್ನರ್​ಗಳಿಗೆ ಆದ್ಯತೆ ನೀಡಿರುವುದು ಮತ್ತೊಂದು ವಿಶೇಷ.

  ಇದನ್ನೂ ಓದಿ: Shikhar Dhawan divorce: ವಿಚ್ಛೇದನಕ್ಕೆ ಮುಂದಾದ ಕ್ರಿಕೆಟಿಗ ಶಿಖರ್ ಧವರ್: 9 ವರ್ಷಗಳ ದಾಂಪತ್ಯ ಅಂತ್ಯ

  ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಅಚ್ಚರಿ ಇಲ್ಲದಿದ್ದರೂ, ಯಶಸ್ವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಆದರೆ, ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳಾಗಿ ಇಶಾನ್ ಕಿಶನ್ ಮತ್ತು ರಿಷಬ್ ಪಂತ್ ಅವರಿಗೆ 15 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ.

  ಇದನ್ನೂ ಓದಿ: India's T20 World Cup Squad| ಟಿ20 ವಿಶ್ವಕಪ್ ತಂಡ ಘೋಷಣೆ; ಧವನ್, ಚಹಲ್​ಗಿಲ್ಲ ಸ್ಥಾನ, ಅಶ್ವಿನ್, ವರುಣ್​ಗೆ ಜಾಕ್​ಪಾಟ್

  ವೇಗದ ಬೌಲಿಂಗ್ ವಿಭಾಗದಲ್ಲಿ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಪರಿಣಿತ ವೇಗದ ಬೌಲರ್‌ಗಳಾಗಿದ್ದು, ಪಾಂಡ್ಯ ನಾಲ್ಕನೇ ಸೀಮರ್ ಪಾತ್ರವನ್ನು ನಿರ್ವಹಿಸುವ ಸಾಧ್ಯತೆ ಇದೆ. ಪಾಂಡ್ಯರಲ್ಲದೆ, ಆಲ್‌ರೌಂಡರ್‌ ಕೋಟಾದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
  ಟೀಂ ಇಂಡಿಯಾದ ಗಬ್ಬರ್ ಸಿಂಗ್ ಎಂದೇ ಖ್ಯಾತಿ ಗಳಿಸಿರುವ ಕ್ರಿಕೆಟಿಗ ಶಿಖರ್ ಧವರ್ ದಾಂಪತ್ಯದಲ್ಲಿ ಬಿರುಗಾಳಿ ಎದಿದೆ. 9 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಲು ಶಿಖರ್ ಧವನ್ ಹಾಗೂ ಪತ್ನಿ ಅಯೇಷಾ ಮುಖರ್ಜಿ ಮುಂದಾಗಿದ್ದಾರೆ. 2012ರಲ್ಲಿ ಸಿಖ್ ಸಂಪ್ರದಾಯದಂತೆ ಮದುವೆಯಾಗಿದ್ದ ಜೋಡಿ ದೂರವಾಗುತ್ತಿದ್ದಾರೆ. ಡಿವೋರ್ಸ್ ಬಗ್ಗೆ ಅಯೇಷಾ ಮುಖರ್ಜಿ ಇನ್ಸ್ಟಾಗ್ರಾಂನಲ್ಲಿ ದೃಢಪಡಿಸಿದ್ದಾರೆ.
  Published by:Sharath Sharma Kalagaru
  First published: