Team India: 1992 ರ ಲುಕ್ನಲ್ಲಿ ಟೀಮ್ ಇಂಡಿಯಾ: ಹೊಸ ಜರ್ಸಿಯಲ್ಲಿ ಕಣಕ್ಕಿಳಿಯುವುದು ಕನ್ಫರ್ಮ್..!
ಟೀಮ್ ಇಂಡಿಯಾದ ನೂತನ ಜರ್ಸಿ 1992ರ ವಿಶ್ವಕಪ್ ಜರ್ಸಿಯ ವಿನ್ಯಾಸವನ್ನು ಹೊಂದಿದೆ. ಈ ವಿಶ್ವಕಪ್ನಲ್ಲಿ ಎಲ್ಲಾ ಕ್ರಿಕೆಟ್ ತಂಡಗಳು ಒಂದೇ ವಿನ್ಯಾಸದ ವಿವಿಧ ಬಣ್ಣಗಳ ಜರ್ಸಿ ಧರಿಸಿತ್ತು.
news18-kannada Updated:November 24, 2020, 8:11 PM IST

Team India New Jersey
- News18 Kannada
- Last Updated: November 24, 2020, 8:11 PM IST
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 27 ರಂದು ಮೊದಲ ಏಕದಿನ ನಡೆಯಲಿದ್ದು, ಈ ಪಂದ್ಯದಲ್ಲಿ ರೆಟ್ರೊ ಸ್ಟೈಲ್ ಜರ್ಸಿಯೊಂದಿಗೆ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿಯುವುದು ಖಚಿತವಾಗಿದೆ. ಹೌದು, ಕೆಲ ದಿನಗಳ ಹಿಂದೆಯಷ್ಟೇ ಟೀಮ್ ಇಂಡಿಯಾದ ಜೆರ್ಸಿ ಬದಲಾಗಲಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅದು ಕೂಡ 1992 ರ ವಿಶ್ವಕಪ್ ವೇಳೆ ಭಾರತದ ಆಟಗಾರರು ಧರಿಸಿದ್ದ ಜರ್ಸಿ ಅವತಾರದಲ್ಲಿ ಎಂದು ಹೇಳಲಾಗಿತ್ತು.
ಇದೀಗ ಭಾರತ ತಂಡದ ನೂತನ ಜರ್ಸಿಯನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ. ಟ್ವಿಟರ್ನಲ್ಲಿ ಹೊಸ ಜರ್ಸಿ ಧರಿಸಿದ ಫೋಟೋ ಹಂಚಿಕೊಂಡಿರುವ ಧವನ್, ಹೊಸ ಜರ್ಸಿ, ಹೊಸ ಪ್ರೇರಣೆ, ಮುನ್ನುಗ್ಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ನೂತನ ಜರ್ಸಿ 1992ರ ವಿಶ್ವಕಪ್ ಜರ್ಸಿಯ ವಿನ್ಯಾಸವನ್ನು ಹೊಂದಿದೆ. ಈ ವಿಶ್ವಕಪ್ನಲ್ಲಿ ಎಲ್ಲಾ ಕ್ರಿಕೆಟ್ ತಂಡಗಳು ಒಂದೇ ವಿನ್ಯಾಸದ ವಿವಿಧ ಬಣ್ಣಗಳ ಜರ್ಸಿ ಧರಿಸಿತ್ತು. ಅಂದು ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಕಂಗೊಳಿಸಿದ್ದ ಕಡು ನೀಲಿ ಬಣ್ಣದ ಜರ್ಸಿ ಲುಕ್ನಲ್ಲಿ ಇದೀಗ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್ ಸೇರಿದಂತೆ ಯುವ ಪಡೆ ಮಿಂಚಲು ಸಿದ್ಧವಾಗಿದೆ. ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡವೂ ಕಡು ಹಸಿರಿನಿಂದ ಕೂಡಿರುವ ವಿಭಿನ್ನ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
ಇದೀಗ ಭಾರತ ತಂಡದ ನೂತನ ಜರ್ಸಿಯನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ. ಟ್ವಿಟರ್ನಲ್ಲಿ ಹೊಸ ಜರ್ಸಿ ಧರಿಸಿದ ಫೋಟೋ ಹಂಚಿಕೊಂಡಿರುವ ಧವನ್, ಹೊಸ ಜರ್ಸಿ, ಹೊಸ ಪ್ರೇರಣೆ, ಮುನ್ನುಗ್ಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!