ವೆಸ್ಟ್​ ಇಂಡೀಸ್ ಆಟಗಾರರ ಜೊತೆ ಬೋಟ್​ನಲ್ಲಿ ಕಾಣಿಸಿಕೊಂಡ ರೋಹಿತ್, ಧವನ್, ಐಯರ್!

ವಿಂಡೀಸ್ ಆಟಗಾರರೊಂದಿಗೆ ಬೋಟ್​ನಲ್ಲಿ ಡ್ಯಾನ್ಸ್​ ಮಾಡುತ್ತಾ, ಸೆಲ್ಫಿ ತೆಗೆದ ಫೋಟೋವನ್ನು ಶ್ರೇಯಸ್ ಐಯರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.

Vinay Bhat | news18
Updated:August 13, 2019, 2:29 PM IST
ವೆಸ್ಟ್​ ಇಂಡೀಸ್ ಆಟಗಾರರ ಜೊತೆ ಬೋಟ್​ನಲ್ಲಿ ಕಾಣಿಸಿಕೊಂಡ ರೋಹಿತ್, ಧವನ್, ಐಯರ್!
ಟೀಂ ಇಂಡಿಯಾ ಆಟಗಾರರು
  • News18
  • Last Updated: August 13, 2019, 2:29 PM IST
  • Share this:
ಬೆಂಗಳೂರು (ಆ. 13): ಕೆರಿಬಿಯನ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಟಿ-20 ಸರಣಿ ವಶ ಪಡಿಸಿಕೊಂಡು ಏಕದಿನ ಸರಣಿ ಆಡುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಸರಣಿ ವಶ ಪಡಿಸಿಕೊಳ್ಳಲು ನಾಳೆ ನಡೆಯಲಿರುವ ಅಂತಿಮ ಪಂದ್ಯ ಗೆಲ್ಲಬೇಕಿದೆ.

ಈ ಮಧ್ಯೆ ಟೀಂ ಇಂಡಿಯಾ ಪ್ರಮುಖ ಆಟಗಾರರು ವೆಸ್ಟ್​ ಇಂಡೀಸ್ ಆಟಗಾರರೊಂದಿಗೆ ಸುತ್ತಾಟ ನಡೆಸುತ್ತಿದ್ದು, ಮಸ್ತ್​ ಮಜಾ ಮಾಡುತ್ತಿದ್ದಾರೆ. ಬಿಡುವಿನ ವೇಳೆ ವಿಂಡೀಸ್ ಹೊಡೆಬಡಿಯ ಆಟಗಾರ ಕಿರನ್ ಪೊಲ್ಲಾರ್ಡ್ ಹಾಗೂ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಭಾರತೀಯ ಕ್ರಿಕೆಟಿಗರಾದ ಶಿಖರ್ ಧವನ್, ರೋಹಿತ್ ಶರ್ಮಾ, ಯಜುವೇಂದ್ರ ಚಾಹಲ್, ಮಯಾಂಕ್ ಅಗರ್ವಾಲ್, ಖಲೀಲ್ ಅಹ್ಮದ್ ಸೇರಿದಂತೆ ಸ್ನೇಹಿತ ಕ್ರಿಕೆಟಿಗರನ್ನು ತಮ್ಮ ದೇಶದ ಪ್ರಮುಖ ತಾಣಗಳಿಗೆ ಕರೆದೊಯ್ಯುತ್ತಿದ್ದಾರೆ.

Fun in the Caribbean! Shikhar Dhawan, Shreyas Iyer hang out with Kieron Pollard in Port of Spain
ಕೀರೊನ್ ಪೊಲ್ಲಾರ್ಡ್​ ಜೊತೆ ಶ್ರೇಯಸ್ ಐಯರ್ ಹಾಗೂ ಶಿಖರ್ ಧವನ್


Virat Kohli: ಏಕದಿನ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ 50ನೇ ಶತಕ ಯಾವಾಗ?; ಇಲ್ಲಿದೆ ಉತ್ತರ

ಬೋಟ್​ನಲ್ಲಿ ಡ್ಯಾನ್ಸ್​ ಮಾಡುತ್ತಾ, ಸೆಲ್ಫಿ ತೆಗೆದ ಫೋಟೋವನ್ನು ಶ್ರೇಯಸ್ ಐಯರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. ವೆಸ್ಟ್​ ಇಂಡೀಸ್ ಆಟಗಾರರು ಐಪಿಎಲ್​​ನಲ್ಲಿ ಆಡುತ್ತಿರುವ ಕಾರಣ ಟೀಂ ಇಂಡಿಯಾ ಆಟಗಾರರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

ಟೀಂ ಇಂಡಿಯಾ ಆಟಗಾರರು


Fun in the Caribbean! Shikhar Dhawan, Shreyas Iyer hang out with Kieron Pollard in Port of Spain
ನಿಕೋಲಸ್ ಪೂರನ್

Loading...

ನಾಳೆ ಕ್ವೀನ್ಸ್​ ಪಾರ್ಕ್​​ ಓವೆಲ್​ನಲ್ಲಿ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಸರಣಿ ಕೈವಶ ಮಾಡಿಕೊಳ್ಳಲು ಉಭಯ ತಂಡಗಳಿಗೆ ಇದು ಪ್ರಮುಖ ಪಂದ್ಯವಾಗಿದೆ.

  First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...