ಧವನ್ ಇಲ್ಲದೆ ಬಲಿಷ್ಠ ತಂಡದೆದುರು ಭಾರತ ಕಣಕ್ಕೆ; ಶಿಖರ್ ಜಾಗವನ್ನು ತುಂಬುವವರಾರು?

Shikhar Dhawan: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಧವನ್ ಎಡಗೈ ಹೆಬ್ಬರಳಿಗೆ ಧವನ್ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ.

Vinay Bhat | news18
Updated:June 11, 2019, 3:52 PM IST
ಧವನ್ ಇಲ್ಲದೆ ಬಲಿಷ್ಠ ತಂಡದೆದುರು ಭಾರತ ಕಣಕ್ಕೆ; ಶಿಖರ್ ಜಾಗವನ್ನು ತುಂಬುವವರಾರು?
ಸಾಂದರ್ಭಿಕ ಚಿತ್ರ
  • News18
  • Last Updated: June 11, 2019, 3:52 PM IST
  • Share this:
ಬೆಂಗಳೂರು (ಜೂ. 11): ಈ ಬಾರಿಯ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ ಎನ್ನುವಾಗಲೇ ದೊಡ್ಡ ಆಘಾತ ಎದುರಾಗಿದೆ. ಈಗಾಗಲೇ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಕ್ಕೆ ತುತ್ತಾಗಿ ಮೂರು ವಾರಗಳ ಕಾಲ ವಿಶ್ವಕಪ್​ನಿಂದ ಹೊರ ಬಿದ್ದಿದ್ದಾರೆ.

ಮುಂಬರುವ ಮೂರು ವಾರಗಳಲ್ಲಿ ಟೀಂ ಇಂಡಿಯಾ ಪ್ರಮುಖ ತಂಡಗಳ ವಿರುದ್ಧ ಸೆಣೆಸಾಟ ನಡೆಸಲಿದೆ. ಹೀಗಾಗಿ ಧವನ್ ಅನುಪಸ್ಥಿತಿಯಲ್ಲಿ ಅವರ ಸ್ಥಾನಕ್ಕೆ ಯಾವ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಭಾರತ ತಂಡ ಇದೇ ಜೂನ್ ತಿಂಗಳಲ್ಲಿನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ಆಫ್ಘಾನಿಸ್ತಾನ ತಂಡದ ವಿರುದ್ಧ ಸೆಣಸಲಿದ್ದು, ಈ ಐದು ಪಂದ್ಯಗಳಿಂದ ಧವನ್ ವಂಚಿತರಾಗಲಿದ್ದಾರೆ.

Shikar dhawan Injury Updates
ಇಂಜುರಿಗೆ ತುತ್ತಾದ ಧವನ್


ಹೀಗಾಗಿ ಧವನ್ ಸ್ಥಾನವನ್ನು ತುಂಬಲು ಈಗಾಗಲೇ ರೇಸ್​ನಲ್ಲಿ ವಿಜಯ್ ಶಂಕರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ ಜೊತೆ ಶ್ರೇಯಸ್ ಐಯರ್ ಹೆಸರಿದೆ. ಅಲ್ಲದೆ ಟ್ವಿಟ್ಟರ್​​ನಲ್ಲಿ ಅಜಿಂಕ್ಯ ರಹಾನೆಯನ್ನು ಆಯ್ಕೆ ಮಾಡಿ ಎಂಬ ಕೂಗು ಕೇಳಿ ಬರುತ್ತದೆ.

Shikhar Dhawan: ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ; ವಿಶ್ವಕಪ್​ನಿಂದ ಧವನ್ ಮೂರು ವಾರ ಹೊರಕ್ಕೆ!

ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಆಡುವ ಸಾಧ್ಯತೆಯಿದೆ. ಹೀಗಾದಲ್ಲಿ 4ನೇ ಕ್ರಮಾಂಕದ ಸಮಸ್ಯೆ ಮತ್ತೆ ಕಾಡಲಿದೆ. ಈ ಜಾಗಕ್ಕೆ ಯಾವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಎಂಬುದೆ ಸದ್ಯ ಪ್ರಶ್ನೆಯಾಗಿ ಉಳಿದಿದೆ.ಒಟ್ಟಾರೆ ವಿಶ್ವಕಪ್​ನಲ್ಲಿ ಹೆಚ್ಚಿನ ಆಟಗಾರರಿಗೆ ಇಂಜುರಿ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ದ. ಆಫ್ರಿಕಾದ ಪ್ರಮುಖ ವೇಗಿ ಡೇಲ್ ಸ್ಟೇನ್ ಸೇರಿದಂತೆ ಅಫ್ಘಾನಿಸ್ಥಾನ ತಂಡದ ಮೊಹಮ್ಮದ್ ಶಹ್ಜಾದ್ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ. ಸದ್ಯ ಧವನ್​ಗೆ ಹೆಚ್ಚಿನ ಗಾಯವಾಗದೆ ಮೂರು ವಾರಗಳ ಕಾಲ ವಿಶ್ರಾಂತಿಯಲ್ಲಿದ್ದಾರೆ. ಇವರ ಜಾಗಕ್ಕೆ ಮ್ಯಾನೇಜ್​ಮೆಂಟ್ ಯಾವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಕಾದುನೋಡಬೇಕಿದೆ.

ಕಳೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಧವನ್ ಎಡಗೈ ಹೆಬ್ಬರಳಿಗೆ ಧವನ್ ಗಾಯ ಮಾಡಿಕೊಂಡಿದ್ದರು. ಬಳಿಕ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು ಮೂರು ವಾರಗಳ ಕಾಲ ವಿಶ್ರಾಂತಿ ಅಗ್ಯವಿದೆ ಎಂದು ಹೇಳಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿತ್ತು. ಇದಾದ ಬಳಿಕ ಬಂದ ವರದಿ ಪರಿಶೀಲಿಸಿದ ವೈದ್ಯರು, ಧವನ್​ಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

IND vs PAK: ಕೊಹ್ಲಿಯನ್ನು ಅಭಿನಂದನ್​ ರೀತಿ ವಿಚಾರಣೆಗೆ ಒಳಪಡಿಸಿದ ಪಾಕಿಗರು; ಪಾಪಿ ಕೃತ್ಯಕ್ಕೆ ಭಾರೀ ಆಕ್ರೋಶ

ಆಸೀಸ್ ವೇಗಿ ನೇಥನ್ ಕೌಲ್ಟರ್ ನೇಲ್ ಬೌಲಿಂಗ್ ಮಾಡುವಾಗ ಆಕಸ್ಮಿಕವಾಗಿ ಚೆಂಡು ಧವನ್ ಕೈಬೆರಳಿಗೆ ಬಡಿದು ಗಾಯಗೊಂಡಿದ್ದರು. ನೋವಿನಲ್ಲೂ 109 ಎಸೆತಗಳಲ್ಲಿ 117 ರನ್ ಸಿಡಿಸಿ ಔಟಾಗಿದ್ದ ಧವನ್, ನಂತರ ಫೀಲ್ಡಿಂಗ್​​ಗೆ ಬಂದಿರಲಿಲ್ಲ.

First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading