ಅನುಷ್ಕಾ ಜೊತೆ ಸ್ನೇಹ ಬೆಳೆಸಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದವನಿಗೆ ಈ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ಶೆಲ್ಡನ್ ಕಳೆದ ರಣಜಿ ಋತುವಿನಲ್ಲಿ 854 ರನ್‌ಗಳನ್ನು ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾಕಷ್ಟು ಸಾಧನೆ ಮಾಡಿ, ಸರಾಸರಿ 50 ಹೊಂದಿದ್ದಾರೆ. ಇಷ್ಟಾದರು ಇವರನ್ನು ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಸರಣಿಗೆ ಮತ್ತು ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಿಲ್ಲ.

Vinay Bhat | news18-kannada
Updated:September 13, 2019, 9:23 AM IST
ಅನುಷ್ಕಾ ಜೊತೆ ಸ್ನೇಹ ಬೆಳೆಸಿದರೆ ಟೀಂ ಇಂಡಿಯಾದಲ್ಲಿ ಸ್ಥಾನ ಖಚಿತ ಎಂದವನಿಗೆ ಈ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?
ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಶೆಲ್ಡನ್ ಜಾಕ್ಸನ್
  • Share this:
ಬೆಂಗಳೂರು (ಸೆ. 13): ಇತ್ತೀಚೆಗಷ್ಟೆ ಸೌರಾಷ್ಟ್ರ ಕ್ರಿಕೆಟ್ ತಂಡದ ಪ್ರಮುಖ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​​ ಶೆಲ್ಡನ್ ಜಾಕ್ಸನ್ ಅವರು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದರು. ಈಗ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್​​ನಲ್ಲಿ ಉದ್ದಟತನ ಮೆರೆದ ಒಬ್ಬರಿಗೆ ಸರಿಯಾಗೆ ಮೈ ಚಳಿ ಬಿಡಿಸಿ ಮತ್ತೆ ಸುದ್ದಿಯಲ್ಲಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಜಾಕ್ಸನ್ ಅವರು, 'ನಾವು ರಣಜಿ ಕ್ರಿಕೆಟ್​ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದರು ಅಂತರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ನೀಡುತ್ತಿಲ್ಲ. ಸಣ್ಣ ರಾಜ್ಯಗಳ ತಂಡ ಎಂದು ನಮ್ಮನ್ನು ಕಡೆಗಣಿಸಲಾಗುತ್ತಿದೆ. ನಮಗೆ ಅನ್ಯಾಯವಾಗುತ್ತಿದೆ. ನಮಗೆ ಅವಕಾಶ ಕೊಡಲ್ಲ ಎಂದಮೇಲೆ ನಾವು ರಣಜಿ ಕ್ರಿಕೆಟ್ ಆಡುವುದರಿಂದ ಏನು ಪ್ರಯೋಜನ' ಎಂದು ಬರೆದು ಬಿಸಿಸಿಐ ವಿರುದ್ಧ ಟ್ವೀಟ್ ಮಾಡಿದ್ದರು.

 


ಅಲ್ಲದೆ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಅಂಕಿಅಂಶ ಇರುವ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸೂರ್ಯ ಅಡ್ವೊಕೆಟ್ ವಿಂಗ್ ಎಂಬಾತ ಮಾಡಿರುವ ಕಮೆಂಟ್ ಜಾಕ್ಸನ್​ ಅವರನ್ನು ರೊಚ್ಚಿಗೆಬ್ಬಿಸಿದೆ.

ಫಿರೋಜ್ ಶಾ ಕೋಟ್ಲಾ ಇನ್ಮುಂದೆ ಅರುಣ್ ಜೇಟ್ಲಿ ಕ್ರೀಡಾಂಗಣ; ನೂತನ ಪೆವಿಲಿಯನ್​ಗೆ ಕೊಹ್ಲಿ ಹೆಸರು

 'ನೀವು ಕೆ ಎಲ್ ರಾಹುಲ್ ರೀತಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಸ್ನೇಹ ಬೆಳೆಸಿ ಆಗ ಟೀಂ ಇಂಡಿಯಾದಲ್ಲಿ ಸುಲಭವಾಗಿ ಸ್ಥಾನ ಸಿಗುತ್ತೆ' ಎಂಬರ್ಥದಲ್ಲಿ ಸೂರ್ಯ ಎಂಬವರು ಕಮೆಂಟ್ ಮಾಡಿದ್ದಾರೆ.

 ಇದಕ್ಕೆ ಮುಟ್ಟಿ ನೋಡುವ ಉತ್ತರ ಕೊಡ್ಡ ಜಾಕ್ಸನ್, 'ಸೂರ್ಯ, ಮೊದಲು ನೀವು ಹೇಗೆ ಮಾತನಾಡ ಬೇಕು ಎಂಬುದನ್ನು ಕಲಿಯಿರಿ. ಟ್ವೀಟ್ ಮಾಡುವ ಮುನ್ನ ನಿಮ್ಮ ವರ್ತನೆ ಚೆನ್ನಾಗಿದ್ದರೆ ಉತ್ತಮ. ನೀವು ಮಾಡಿರುವ ಟ್ವೀಟ್​ಗೂ​ ಈ ವಿಚಾರಕ್ಕೆ ಸಂಬಧವೇ ಇಲ್ಲದಂತಿದೆ. ಅನುಷ್ಕಾ ಹಾಗೂ ರಾಹುಲ್​ರನ್ನು ಮಧ್ಯೆ ತರಬೇಡಿ. ಕ್ರಿಕೆಟ್​​ನಲ್ಲಿ ಕುಟುಂಬದ ವಿಚಾರ ಮಾತನಾಡಬೇಡಿ' ಎಂದು ಖಡಕ್ ಆಗಿ ಹೇಳಿದ್ದಾರೆ.

 ಶೆಲ್ಡನ್ ಕಳೆದ ರಣಜಿ ಋತುವಿನಲ್ಲಿ 854 ರನ್‌ಗಳನ್ನು ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಸಾಕಷ್ಟು ಸಾಧನೆ ಮಾಡಿ, ಸರಾಸರಿ 50 ಹೊಂದಿದ್ದಾರೆ. ಇಷ್ಟಾದರು ಇವರನ್ನು ದಕ್ಷಿಣ ಆಫ್ರಿಕಾ ‘ಎ’ ತಂಡದ ಎದುರಿನ ಸರಣಿಗೆ ಮತ್ತು ದುಲೀಪ್ ಟ್ರೋಫಿ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಇದರಿಂದ ಬೇಸರಗೊಂಡ ಅವರು ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಹರಿಹಾಯ್ದಿದ್ದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading