ಅರೆಸ್ಟ್​​ ವಾರೆಂಟ್​ಗೆ ಕೋರ್ಟ್​​ನಿಂದ ತಡೆ; ಶಮಿಗೆ ತಾತ್ಕಾಲಿಕ ರಿಲೀಫ್

ಕೋರ್ಟ್​ ಶಮಿ ವಿರುದ್ಧದ ಬಂಧನ ವಾರೆಂಟ್​ಗೆ 2 ತಿಂಗಳು ತಡೆ ನೀಡಿದೆ. ಪ್ರಕರಣದ ಬಗ್ಗೆ ಮರು ವಿಚಾರಣೆಯನ್ನ ನವೆಂಬರ್​ 2ರಂದು ನಡೆಯಲಿದೆ ಎಂದು ಮೊಹಮ್ಮದ್​ ಶಮಿ ಪರ ವಕೀಲ ಸಲೀಮ್​ ರಹಮಾನ್​ ಹೇಳಿದ್ದಾರೆ.

Vinay Bhat | news18-kannada
Updated:September 10, 2019, 8:25 AM IST
ಅರೆಸ್ಟ್​​ ವಾರೆಂಟ್​ಗೆ ಕೋರ್ಟ್​​ನಿಂದ ತಡೆ; ಶಮಿಗೆ ತಾತ್ಕಾಲಿಕ ರಿಲೀಫ್
ಮೊಹಮ್ಮದ್ ಶಮಿ
  • Share this:
ಬೆಂಗಳೂರು (ಸೆ. 10): ಟೀಂ ಇಂಡಿಯಾ ವೇಗಿ ಮೊಹಮ್ಮದ್​ ಶಮಿ ವಿರುದ್ಧ ಅರೆಸ್ಟ್​​ ವಾರೆಂಟ್​ ಜಾರಿ ಮಾಡಲಾಗಿತ್ತು. ಪತ್ನಿ ಮೇಲೆ ಹಲ್ಲೆ ದೌರ್ಜನ್ಯ ಆರೋಪ ಎದುರಿಸುತ್ತಿರುವ ಭಾರತ ತಂಡದ ಆಟಗಾರನ ವಿರುದ್ಧ ಪಶ್ಚಿಮ ಬಂಗಾಳದ ಅಲಿಪೂರ್ ಕೋರ್ಟ್​ ಬಂಧನದ ಆದೇಶ ಹೊರಡಿಸಿತ್ತು. ಅಲ್ಲದೆ 15 ದಿನಗಳ ಒಳಗಾಗಿ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿತ್ತು.

ಆದರೆ, ಇದೀಗ ಕೋರ್ಟ್ ಶಮಿ ವಿರುದ್ಧ ಹೊರಡಿಸಿದ್ದ​ ಅರೆಸ್ಟ್​ ವಾರೆಂಟ್​ಗೆ ತಡೆ ನೀಡಿದೆ. ಇದರಿಂದಾಗಿ ಮೊಹಮ್ಮದ್​ ಶಮಿ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಕೋರ್ಟ್​ ಶಮಿ ವಿರುದ್ಧದ ಬಂಧನ ವಾರೆಂಟ್​ಗೆ 2 ತಿಂಗಳು ತಡೆ ನೀಡಿದೆ. ಪ್ರಕರಣದ ಬಗ್ಗೆ ಮರು ವಿಚಾರಣೆಯನ್ನ ನವೆಂಬರ್​ 2ರಂದು ನಡೆಯಲಿದೆ ಎಂದು ಮೊಹಮ್ಮದ್​ ಶಮಿ ಪರ ವಕೀಲ ಸಲೀಮ್​ ರಹಮಾನ್​ ಹೇಳಿದ್ದಾರೆ.

ಕೋಚ್ ರವಿ ಶಾಸ್ತ್ರಿಗೆ ಬಿಸಿಸಿಐಯಿಂದ ಬಂಪರ್ ಆಫರ್; ಸಂಭಾವನೆಯಲ್ಲಿ ಭಾರೀ ಏರಿಕೆ, ಎಷ್ಟು ಗೊತ್ತಾ?

ಈ ಹಿಂದೆ ಕೋಲ್ಕತ್ತಾ ಪೊಲೀಸರು ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರ ದೂರಿನ ಹಿನ್ನೆಲೆ ಕ್ರಿಕೆಟಿಗನ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 354ಎ (ಲೈಂಗಿಕ ದೌರ್ಜನ್ಯ) ವಿಭಾಗದಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದರು. ಅಷ್ಟೇ ಅಲ್ಲದೆ ತನ್ನ ಪತಿಯು ಐಪಿಎಲ್​ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದಾರೆ. ಪಾಕಿಸ್ತಾನ ಮಹಿಳೆ ಅಲಿಸ್ಬಾಯಿಂದ ಶಮಿ ದುಬೈನಲ್ಲಿ ಹಣ ಸ್ವೀಕರಿಸಿದ್ದಾರೆ ಈ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಹಸೀನ್ ಆರೋಪಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​, ಮೊಹಮ್ಮದ್ ಶಮಿ ಸೆರೆಂಡರ್​​ ಆಗಲು ಅಥವಾ ಜಾಮೀನು ಪಡೆಯಲು 15 ದಿನಗಳ ಕಾಲಾವಕಾಶ ನೀಡಿತ್ತು. ಆದರೆ, ಸದ್ಯ ಅರೆಸ್ಟ್​ ವಾರೆಂಟ್​ಗೆ ತಡೆ ನೀಡಿ ಎಂದು ಸೆಷನ್​​ ಕೋರ್ಟ್​ ಆದೇಶ ಹೊರಡಿಸಿದೆ. ಇದರಿಂದ ಶಮಿ ಅವರಿಗೆ ತಾತ್ಕಾಲಿಕ ರಿಲೀಫ್​ ಸಿಕ್ಕಿದೆ.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ