Shakib Al Hasan| ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್ ಗೆಲ್ಲಬೇಕೆಂಬ ಮನಸ್ಥಿತಿಯಲ್ಲಿ ಸಿದ್ಧವಾಗುತ್ತಿದೆ; ಶಕೀಬ್ ಅಲ್ ಹಸನ್

ಐಪಿಎಲ್​ ಸಹ ಯುಎಇ ಯಲ್ಲೇ ನಡೆಯಲಿದ್ದು, ನಾವು 2 ವಾರಕ್ಕಿಂತ ಮುಂಚಿತವಾಗಿಯೇ ಅಲ್ಲಿಗೆ ತೆರಳಲಿದ್ದೇವೆ, ಇದೂ ಸಹ ನಮ್ಮ ತಂಡಕ್ಕೆ ಅನುಕೂಲವಾಗಲಿದೆ ಎಂದು ಶಕೀಬ್ ಅಭಿಪ್ರಾಯಪಟ್ಟಿದ್ದಾರೆ.

ಶಕೀಬ್ ಅಲ್ ಹಸನ್.

ಶಕೀಬ್ ಅಲ್ ಹಸನ್.

  • Share this:
    ಬಾಂಗ್ಲಾದೇಶವು ಟಿ 20 ವಿಶ್ವಕಪ್‌ಗೆ ತಯಾರಿ ನಡೆಸಲು ಸಾಕಷ್ಟು ಸಮಯವಿದೆ. ಅಲ್ಲದೆ, ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವು ಬಾಂಗ್ಲಾದೇಶದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಯುಎಇ ಮತ್ತು ಓಮನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಬಾಂಗ್ಲಾದೇಶ ತಂಡ ಗೆಲ್ಲಲೇಬೇಕೆಂಬ ಆತ್ಮವಿಶ್ವಾಸದಿಂದಲೇ ಸಿದ್ಧಗೊಳ್ಳುತ್ತಿದೆ ಎಂದು ಬಾಂಗ್ಲಾದೇಶದ ಆಲ್​ರೌಂಡರ್ ಶಕೀಬ್ ಅಲ್​ ಹಸನ್ ತಿಳಿಸಿದ್ದಾರೆ. ಇದಲ್ಲದೆ, ಐಪಿಎಲ್​ ಸಹ ಯುಎಇ ಯಲ್ಲೇ ನಡೆಯಲಿದ್ದು, ನಾವು 2 ವಾರಕ್ಕಿಂತ ಮುಂಚಿತವಾಗಿಯೇ ಅಲ್ಲಿಗೆ ತೆರಳಲಿದ್ದೇವೆ, ಇದೂ ಸಹ ನಮ್ಮ ತಂಡಕ್ಕೆ ಅನುಕೂಲವಾಗಲಿದೆ ಎಂದು ಶಕೀಬ್ ಅಭಿಪ್ರಾಯಪಟ್ಟಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಶಕೀಬ್ ಅಲ್ ಹಸನ್, "ಬಾಂಗ್ಲಾದೇಶ ತಂಡವು ತಮ್ಮ ಮೊದಲ ಪಂದ್ಯಕ್ಕೆ ಕನಿಷ್ಠ ಎರಡು ವಾರಗಳ ಮುಂಚಿತವಾಗಿ ಮಸ್ಕತ್‌ಗೆ ಆಗಮಿಸಲಿದ್ದು, ನನ್ನ ಜೊತೆಗೆ ಮುಸ್ತಫಿಜುರ್ ರೆಹಮಾನ್ ಸಹ ಐಪಿಎಲ್‌ನಲ್ಲಿ ಆಡಲಿದ್ದಾರೆ. ಈ ಅನುಭವ ಬಾಂಗ್ಲಾದೇಶ ತಂಡಕ್ಕೆ ಸಹಕಾರಿಯಾಗುತ್ತದೆ. ಐಪಿಎಲ್ ಎಲ್ಲರಿಗೂ ಸಹಾಯ ಮಾಡುತ್ತದೆ ಎಂದು ನಾನು ಆಶಿಸುತ್ತೇನೆ. ನಾವು ಆ ಪರಿಸ್ಥಿತಿಗಳಲ್ಲಿ ಸಮಯ ಕಳೆಯುತ್ತೇವೆ, ಪಂದ್ಯಗಳನ್ನೂ ಆಡುತ್ತೇವೆ.

    ಮುಸ್ತಫಿಜ್ ಮತ್ತು ನಾನು ತಂಡದ ಉಳಿದವರೊಂದಿಗೆ ಅನುಭವವನ್ನು ಹಂಚಿಕೊಳ್ಳಬಹುದು. ನಾವು ಇತರ ಆಟಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇವೆ. ಅವರು ವಿಶ್ವಕಪ್ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಗ್ರಹಿಸಿ ಆ ಬಗ್ಗೆ ಬಾಂಗ್ಲಾದೇಶ ತಂಡದ ಜೊತೆಗೆ ಚರ್ಚೆ ನಡೆಸಿ ಪಂದ್ಯ ಗೆಲ್ಲಬಹುದಾದ ಸ್ಟ್ರಾಟಜಿಯನ್ನು ಸಿದ್ದಪಡಿಸುತ್ತೇವೆ.

    ಇದನ್ನೂ ಓದಿ: Rahul Gandhi| ಮುಂಬೈ ದಾಳಿಗೆ ಸಿಂಗ್​ರನ್ನು ಪ್ರಶ್ನಿಸಿದ್ದ ಮಾಧ್ಯಮಗಳು ಪುಲ್ವಾಮಾ ಬಗ್ಗೆ ಮೋದಿಯನ್ನೇಕೆ ಪ್ರಶ್ನಿಸಿಲ್ಲ?; ರಾಹುಲ್ ಗಾಂಧಿ

    ಇನ್ನೂ ವಿಶ್ವಕಪ್‌ಗೆ ಕನಿಷ್ಠ 15-16 ದಿನಗಳ ಮೊದಲು ನಮ್ಮ ತಂಡವು ಯುಎಇ ನಲ್ಲಿರುತ್ತದೆ. ಇದು ಅಲ್ಲಿನ ವಾತಾವರಣ ಮತ್ತು ಪಿಚ್​ ಬಗ್ಗೆ ಅರಿತುಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುತ್ತದೆ. ಇಲ್ಲಿ ಪಿಚ್‌ಗಳು ಮತ್ತು ಪರಿಸ್ಥಿತಿಗಳು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಈ ಎಲ್ಲಾ ವಿಚಾರಗಳೂ ವಿಶ್ವಕಪ್​ ಗೆಲ್ಲುವ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ" ಎಂದು ಶಕೀಬ್ ಅಲ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.
    Published by:MAshok Kumar
    First published: