ICC ODI Ranking: ಶಕೀಬ್​ ಅಲ್​ ಹಸನ್ ನಂ.1: ಭಾರತದ ಆಟಗಾರರಿಗಿಲ್ಲ ಸ್ಥಾನ..!

ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡವನ್ನು ಪ್ರತಿನಿಧಿಸಿದ್ದ ಶಕೀಬ್​ ಅಲ್ ಹಸನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಐಸಿಸಿ ಆಲ್​ರೌಂಡರ್ ಪಟ್ಟಿಯಲ್ಲಿ ಕ್ರಮವಾಗಿ ಸ್ಥಾನಗಳಿಸಿರುವುದು ವಿಶೇಷ.

zahir | news18
Updated:May 24, 2019, 7:52 PM IST
ICC ODI Ranking: ಶಕೀಬ್​ ಅಲ್​ ಹಸನ್ ನಂ.1: ಭಾರತದ ಆಟಗಾರರಿಗಿಲ್ಲ ಸ್ಥಾನ..!
@Scroll.in
  • News18
  • Last Updated: May 24, 2019, 7:52 PM IST
  • Share this:
ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಏಕದಿನ ಕ್ರಿಕೆಟ್​ ಆಲ್​ ರೌಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಶ್ರೆಯಾಂಕ ಪಟ್ಟಿಯಲ್ಲಿ ಬಾಂಗ್ಲಾದೇಶ ತಂಡದ​​​​​​ ಶಕೀಬ್​​​​ ಅಲ್​ ಹಸನ್​​ ಅಗ್ರಸ್ಥಾನ ಪಡೆದು ವಿಶ್ವದ ನಂ.1 ಆಲ್​ರೌಂಡರ್ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೆಯೇ ಟೀಂ ಇಂಡಿಯಾದ ಯಾವುದೇ ಆಟಗಾರರು ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಪಡೆಯದೇ ನಿರಾಸೆ ಮೂಡಿಸಿದ್ದಾರೆ.

ಇತ್ತೀಚೆಗೆ ವೆಸ್ಟ್​ ಇಂಡೀಸ್ ವಿರುದ್ಧ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಶಕೀಬ್ 2ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. 3 ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿದ್ದ ಶಕೀಬ್, ಎರಡು ಅರ್ಧ ಶತಕಗಳೊಂದಿಗೆ 140 ರನ್ ಮತ್ತು ಎರಡು ವಿಕೆಟ್​​ ಪಡೆದುಕೊಂಡಿದ್ದರು.

ಈ ಪ್ರದರ್ಶನದಿಂದ 359 ಅಂಕಗಳೊಂದಿಗೆ ಶಕೀಬ್​ ಅಲ್ ಹಸನ್ ನಂಬರ್ ಒನ್ ಪಟ್ಟಕ್ಕೇರಿದ್ದಾರೆ. ಇನ್ನು ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್​ ಖಾನ್ ಎರಡನೇ ಸ್ಥಾನವನ್ನು ಪಡೆದರೆ, ಮತ್ತೊಬ್ಬ ಅಫ್ಘಾನ್ ಆಟಗಾರ ಮೊಹಮ್ಮದ್ ನಬಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಐಪಿಎಲ್​ನಲ್ಲಿ ಸನ್​ರೈಸರ್ಸ್​ ತಂಡವನ್ನು ಪ್ರತಿನಿಧಿಸಿದ್ದ ಶಕೀಬ್​ ಅಲ್ ಹಸನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಐಸಿಸಿ ಆಲ್​ರೌಂಡರ್ ಪಟ್ಟಿಯಲ್ಲಿ ಕ್ರಮವಾಗಿ ಸ್ಥಾನಗಳಿಸಿರುವುದು ವಿಶೇಷ.ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಭಾರತದ ಆಲ್​ ರೌಂಡರ್​ಗಳು ವಿಫಲರಾಗಿದ್ದಾರೆ. ಈಗಾಗಲೇ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಾದ ಕೇದರ್ ಜಾಧವ್ 12ನೇ ಸ್ಥಾನವನ್ನು ಗಳಿಸಿದರೆ, ಹಾರ್ದಿಕ್ ಪಾಂಡ್ಯ 20ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವರ್ಲ್ಡ್​ಕಪ್ ತಂಡದಲ್ಲಿರುವ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ ಹಾಗೂ ವಿಜಯ್​ ಶಂಕರ್ ಟಾಪ್​ 20ಯಲ್ಲೂ ಸ್ಥಾನಗಿಟ್ಟಿಸಿಲ್ಲ.ಐಸಿಸಿ ಟಾಪ್​5 ಆಲ್​ರೌಂಡರ್ ಪಟ್ಟಿ:1- ಶಕೀಬ್ ಅಲ್ ಹಸನ್ ( ಬಾಂಗ್ಲಾದೇಶ)
2- ರಶೀದ್ ಖಾನ್ ( ಅಫ್ಘಾನಿಸ್ತಾನ್)
3- ಮೊಹಮ್ಮದ್ ನಬಿ ( ಅಫ್ಘಾನಿಸ್ತಾನ್)
4- ಇಮಾದ್ ವಾಸಿಂ (ಪಾಕಿಸ್ತಾನ್)
5- ಮಿಚೆಲ್ ಸ್ಯಾಂಟ್ನರ್( ನ್ಯೂಜಿಲೆಂಡ್)

First published:May 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ