• Home
  • »
  • News
  • »
  • sports
  • »
  • Shakib Al Hasan: ನಿಷೇಧದ ಬಳಿಕ ಮತ್ತೆ ತಂಡದಲ್ಲಿ ಸ್ಥಾನ ಪಡೆದ ಶಕೀಬ್ ಅಲ್ ಹಸನ್..!

Shakib Al Hasan: ನಿಷೇಧದ ಬಳಿಕ ಮತ್ತೆ ತಂಡದಲ್ಲಿ ಸ್ಥಾನ ಪಡೆದ ಶಕೀಬ್ ಅಲ್ ಹಸನ್..!

Shakib Al Hasan

Shakib Al Hasan

33ರ ಹರೆಯದ ಶಕೀಬ್ ಬಾಂಗ್ಲಾದೇಶದ ಪರ 56 ಟೆಸ್ಟ್‌ ಪಂದ್ಯಗಳಲ್ಲಿ 3862 ರನ್, 210 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 206 ಏಕದಿನ ಪಂದ್ಯಗಳಿಂದ 6323 ರನ್, 260 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

  • Share this:

    ಒಂದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಕ್ಕೊಳಗಾದ ಖ್ಯಾತ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಮತ್ತೆ ಬಾಂಗ್ಲಾದೇಶ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಕಟಿಸಿರುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶಕೀಬ್ ಸ್ಥಾನ ಪಡೆದಿದ್ದು, ಇದರೊಂದಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವ ಸೂಚನೆ ನೀಡಿದ್ದಾರೆ.


    ಕಳೆದ ವರ್ಷ ಶಕೀಬ್ ಅಲ್ ಹಸನ್ 12 ತಿಂಗಳುಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಬುಕ್ಕಿಗಳು ಸಂಪರ್ಕಿಸಿರುವ ವಿಚಾರವನ್ನು ಐಸಿಸಿ ಗಮನಕ್ಕೆ ತರದಿರುವ ಕಾರಣ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭ್ರಷ್ಟಾಚಾರ ವಿರೋಧಿ ನಿಯಮದಡಿ ಶಿಕ್ಷೆ ವಿಧಿಸಿತ್ತು. ಇದೇ ಕಾರಣದಿಂದ ಶಕೀಬ್ ಐಪಿಎಲ್ ಸೇರಿದಂತೆ ಪ್ರಮುಖ ಟೂರ್ನಿಯಿಂದ ಹೊರಗುಳಿಯಬೇಕಾಯಿತು.ಇದೀಗ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದು, ಈ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ ಶಕೀಬ್ ಅಲ್ ಹಸನ್.


    33ರ ಹರೆಯದ ಶಕೀಬ್ ಬಾಂಗ್ಲಾದೇಶದ ಪರ 56 ಟೆಸ್ಟ್‌ ಪಂದ್ಯಗಳಲ್ಲಿ 3862 ರನ್, 210 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೆ 206 ಏಕದಿನ ಪಂದ್ಯಗಳಿಂದ 6323 ರನ್, 260 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು 76 ಟಿ20 ಪಂದ್ಯಗಳಿಂದ 1567 ರನ್ 92 ವಿಕೆಟ್ ಉರುಳಿಸಿ ಮಿಂಚಿದ್ದಾರೆ.


    ಫೆಬ್ರವರಿ 15ರಿಂದ ವೆಸ್ಟ್ ಇಂಡೀಸ್ ವಿರುದ್ಧದ 2 ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದ್ದು, ಇದಕ್ಕಾಗಿ ಪ್ರಕಟಿಸಿರುವ ಬಾಂಗ್ಲಾದೇಶ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಸ್ಥಾನ ಪಡೆದಿದ್ದಾರೆ.


    ಬಾಂಗ್ಲಾದೇಶ ಸಂಭಾವ್ಯ ಆಟಗಾರರ ಪಟ್ಟಿ:
    ಏಕದಿನ ತಂಡ: ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್ ಖಾನ್, ನೈಮ್ ಶೇಖ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಅಲ್ ಅಮೀನ್ ಹೊಸೈನ್, ಎಂಡಿ. ಶೋರಿಫುಲ್ ಇಸ್ಲಾಂ, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕುರ್ ರಹೀಮ್, ಎಂಡಿ ಮಿಥುನ್, ಲಿಟ್ಟನ್ ದಾಸ್, ಎಂಡಿ ಮಹಮ್ಮದ್ ಉಲ್ಲಾ, ಅಫಿಫ್ ಹೊಸೈನ್ ಧ್ರೂಬೊ, ಹಸನ್ ಮಹಮ್ಮದ್, ಸೈಫ್ ಉದ್ದೀನ್, ಮುಸ್ತಾಫಿಜುರ್ ರಹಮಾನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಾಸುಮ್ ಅಹ್ಮದ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ಮಹಾದಿ ಹಸನ್, ರುಬೆಲ್ ಹೊಸೈನ್, ಮುಸದ್ದೇಕ್ ಹೊಸೈನ್ ಸೈಕತ್, ಸೌಮ್ಯಾ ಸರ್ಕಾರ್, ಯಾಸಿರ್ ಅಲಿ ಚೌಧರಿ.


    ಟೆಸ್ಟ್ ತಂಡ: ಶಕೀಬ್ ಅಲ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಮುಶ್ಫಿಕೂರ್ ರಹೀಮ್, ಎಂಡಿ ಮಿಥುನ್, ಲಿಟ್ಟನ್ ದಾಸ್, ಮೊಮಿಮುಲ್ ಹಕ್ ಶೋರಾಬ್, ತಮೀಮ್ ಇಕ್ಬಾಲ್ ಖಾನ್, ಶಕೀಬ್ ಅಲ್ ಹಸನ್, ಯಾಸಿರ್ ಅಲಿ ಚೌಧರಿ, ಮೊಹಮ್ಮದ್ ಸೈಫ್ ಹಸನ್, ಅಬು ಜಯೀದ್ ಚೌಧರಿ ರಾಹಿ, ತಸ್ಕಿನ್ ಅಹ್ಮದ್, ಶಾಡ್ಮನ್ ಇಸ್ಲಾಂ, ನಯೀಮ್ ಹಸನ್, ಎಬಾಡೋಟ್ ಹೊಸೈನ್ ಚೌಧರಿ, ತಾಸ್ಕಿನ್ ಅಹ್ಮದ್ ರಹಮಾನ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಕ್ವಾಜಿ ನೂರುಲ್ ಹಸನ್ ಸೊಹನ್.

    Published by:zahir
    First published: