Shakib Al Hasan- ಬಾಂಗ್ಲಾಗೆ ಆಘಾತ; ಗಾಯದ ಕಾರಣ ಆಲ್​ರೌಂಡರ್ ಶಾಕಿಬ್ ವಿಶ್ವಕಪ್​ನಿಂದ ಔಟ್

T20 World Cup 2021- ಕ್ರಿಕೆಟ್ ಲೋಕದ ಅತ್ಯಂತ ಯಶಸ್ವಿ ಆಲ್​ರೌಂಡರ್​ಗಳಲ್ಲಿ ಒಬ್ಬರೆನಿಸಿರುವ ಬಾಂಗ್ಲಾ ಕ್ರಿಕೆಟಿಗ ಶಾಕಿಬ್-ಅಲ್-ಹಸನ್ ಅವರು ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್​ನಿಂದ ಹೊರಬೀಳುವಂತಾಗಿದೆ.

ಶಾಕಿಬ್ ಅಲ್ ಹಸನ್

ಶಾಕಿಬ್ ಅಲ್ ಹಸನ್

  • Share this:
    ದುಬೈ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಪ್ರಮುಖ ಬೆನ್ನೆಲುಬುಗಳಲ್ಲಿಗಳಲ್ಲಿ ಒಬ್ಬರೆನಿಸಿರುವ ಶಾಕಿಬ್ ಅಲ್ ಹಸನ್ (Shakib-Al-Hasan) ಅವರಿಗೆ ಹ್ಯಾಂಸ್ಟ್ರಿಂಗ್ ಇಂಜುರಿ (Hamstring Injury- ಮಂಡಿ ಹಿಂಭಾಗದ ಸ್ನಾಯು ಅಥವಾ ತೊಡೆ ಸ್ನಾಯು ಗಾಯ) ಸಮಸ್ಯೆ ಕಾಡುತ್ತಿದೆ. 34 ವರ್ಷದ ಶಾಕಿಬ್ ಅವರಿಗೆ ಕೆಲ ವಾರಗಳ ವಿಶ್ರಾಂತಿ ಅಗತ್ಯತೆ ಇದೆ. ಈ ಕಾರಣ ಅವರು ವಿಶ್ವಕಪ್​ನ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಬಾಂಗ್ಲಾದೇಶ ಟಿ20 ವಿಶ್ವಕಪ್​ನ ಮೊದಲ ಗುಂಪಿನಲ್ಲಿ ಈಗಾಗಲೇ ತಾನು ಆಡಿರುವ ಎಲ್ಲಾ ಮೂರೂ ಪಂದ್ಯಗಳನ್ನ ಸೋತು ವಿಶ್ವಕಪ್​ನಿಂದ ನಿರ್ಗಮಿಸುವುದು ಖಚಿತವಾಗಿದೆ. ಹೀಗಾಗಿ, ಶಾಕಿಬ್ ಅಲ್ ಹಸನ್ ಅವರ ಅನುಪಸ್ಥಿತಿ ಬಾಂಗ್ಲಾದೇಶಕ್ಕೆ ದೊಡ್ಡ ಪರಿಣಾಮವೇನೂ ಬೀರುವುದಿಲ್ಲ.

    ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್: ಈ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ತಂಡಕ್ಕೆ ನಿರಾಸೆಯಾದರೂ ಶಾಕಿಬ್ ಅವರಿಗೆ ವೈಯಕ್ತಿಕವಾಗಿ ಸ್ಮರಣೀಯವಾಗಿದೆ. ಟಿ20 ವಿಶ್ವಕಪ್​ನ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆಯನ್ನ ಅವರು ಬರೆದಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದು ತಮ್ಮ ಒಟ್ಟಾರೆ ವಿಕೆಟ್ ಸಂಖ್ಯೆಯನ್ನ 40ಕ್ಕೆ ಏರಿಸಿಕೊಂಡರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವೊಬ್ಬ ಬೌಲರ್ ಪಡೆದ ಅತಿ ಹೆಚ್ಚು ವಿಕೆಟ್ ಎನಿಸಿದೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ ಅವರು 39 ವಿಕೆಟ್ ಪಡೆದು ಇದೂವರೆಗೆ ದಾಖಲೆವೀರ ಎನಿಸಿದ್ದರು. ಲಸಿತ್ ಮಾಇಂಗ ಮತ್ತು ಸಯೀದ್ ಅಜ್ಮಲ್ 38 ಮತ್ತು 36 ವಿಕೆಟ್ ಪಡೆದಿದ್ದಾರೆ.

    ಅಂತರರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್: ಇದಷ್ಟೇ ಅಲ್ಲ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯೂ ಶಾಕಿಬ್ ಅಲ್ ಹಸನ್ ಅವರದ್ದಾಗಿದೆ. ಈ ಮಾದರಿಯ ಕ್ರಿಕೆಟ್​ನಲ್ಲಿ ಶಾಕಿಬ್ 117 ವಿಕೆಟ್ ಪಡೆದಿದ್ದಾರೆ. ಲಸಿತ್ ಮಾಲಿಂಗ ಅವರ ದಾಖಲೆಯನ್ನ ಅವರು ಮುರಿದಿದ್ದಾರೆ.

    ಇದನ್ನೂ ಓದಿ: T20 World Cup: ಸೆಮಿಫೈನಲ್ ಪ್ರವೇಶಿಸಲು ಭಾರತಕ್ಕೆ ಇರೋದು ಇದೊಂದೇ ಲೆಕ್ಕಾಚಾರ

    ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇಬ್ಬರ ಪೈಕಿ ಅವರೂ ಒಬ್ಬರು. ಶ್ರೀಲಂಕಾದ ವನಿಂದು ಹಸರಂಗ ಮತ್ತು ಶಾಕಿಬ್ ಇಬ್ಬರೂ ಈ ವಿಶ್ವಕಪ್​ನಲ್ಲಿ 11 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

    ಬಾಂಗ್ಲಾಗೆ ನಿರಾಸೆಯ ಟಿ20 ವಿಶ್ವಕಪ್:

    ಬಾಂಗ್ಲಾದೇಶ ಈ ವಿಶ್ವಕಪ್​ನಲ್ಲಿ ನಿರಾಸೆಯ ಆರಂಭ ಪಡೆಯಿತು. ಮೊದಲ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಬಾಂಗ್ಲಾ 6 ರನ್​ಗಳಿಂದ ಸೋತಿತು. ಆದರೆ, ನಂತರದ ಪಂದ್ಯಗಳಲ್ಲಿ ಓಮನ್ ಮತ್ತು ಪಪುವಾ ನ್ಯೂಗಿನಿಯಾ ತಂಡಗಳ ವಿರುದ್ಧ ಗೆದ್ದು ತನ್ನ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೂಪರ್-12 ಹಂತ ಪ್ರವೇಶಿಸಿತು.

    ಇದನ್ನೂ ಓದಿ: T20 World Cup- ಮೈಕೇಲ್ ವಾನ್ ಹೇಳಿದ ಭವಿಷ್ಯ ನಿಜವಾಗುತ್ತಾ? ವಿಶ್ವಕಪ್​ನಿಂದ ಹೊರಬೀಳುತ್ತಾ ಭಾರತ?

    ಆದರೆ, ಸೂಪರ್-12 ಸುತ್ತಿನಲ್ಲಿ ಸತತ ಮೂರು ಪಂದ್ಯಗಳನ್ನ ಬಾಂಗ್ಲಾ ಸೋತಿದೆ. ಶ್ರೀಲಂಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳೆದುರು ಬಾಂಗ್ಲಾ ಹುಲಿಗಳು ಮಂಡಿಯೂರಿವೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಬಾಕಿ ಇವೆ.

    ಮಾನ ಉಳಿಸಿಕೊಳ್ಳುವ ಹೋರಾಟ:

    ಈ ಹೊತ್ತಿನಲ್ಲಿ ಶಾಕಿಬ್ ಅಲ್ ಹಸನ್ ಅವರು ಗಾಯಗೊಂಡು ನಿರ್ಗಮಿಸಿದ್ದಾರೆ. ಆದರೆ, ಸೆಮಿಫೈನಲ್ ಆಸೆ ಬಿಟ್ಟಿರುವ ಬಾಂಗ್ಲಾದೇಶಕ್ಕೆ ಈಗ ಮಾನ ಉಳಿಸಿಕೊಳ್ಳುವ ಹೋರಾಟವಷ್ಟೇ ಉಳಿದಿರುವುದು. ಶಾಕಿಬ್ ಅನುಪಸ್ಥಿತಿಯಲ್ಲಿ ಬೇರೊಬ್ಬ ಆಟಗಾರರಿಗೆ ಆಡುವ ಅವಕಾಶ ಸಿಗಲಿದೆ ಎಂಬುದು ಸಕಾರಾತ್ಮಕ ಅಂಶ.
    Published by:Vijayasarthy SN
    First published: