ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಆಟಗಾರರು


Updated:May 30, 2018, 3:02 PM IST
ಶಾಹೀದ್ ಅಫ್ರಿದಿ ನಾಯಕತ್ವದಲ್ಲಿ ಆಡಲಿದ್ದಾರೆ ಟೀಂ ಇಂಡಿಯಾದ ಇಬ್ಬರು ಆಟಗಾರರು
#6 ಶಾಹಿದ್ ಅಫ್ರಿದಿ
  • Share this:
ನ್ಯೂಸ್ 18 ಕನ್ನಡ

ಇಸ್ಲಮಾಬಾದ್(ಮೇ.30): ಮೇ 31 ರಂದು ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರುವ ಟಿ 20 ಪಂದ್ಯದಿಂದ ಇಯಾನ್ ಮಾರ್ಗನ್ ಹೊರಗುಳಿದಿದ್ದಾರೆ. ಕೈ ಬೆರಳಿನ ಗಾಯದಿಂದ ಬಳಲುತ್ತಿರುವ ಇವರು ಚಾರಿಟಿ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಇಂಗ್ಲೆಂಡ್​ನ ಏಕದಿನ ಹಾಗೂ ಟಿ20 ಕ್ರಿಕೆಟ್ ವಿಭಾಗದ ನಾಯಕ ಇಯಾನ್ ಮಾರ್ಗನ್ ಬದಲಾಗಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ವರ್ಲ್ಡ್ಪ್​ ಇಲೆವೆನ್​ನ ನಾಯಕತ್ವ ನಿಭಾಯಿಸಲಿದ್ದಾರೆ. ಇನ್ನು ಮಾರ್ಗನ್ ಬದಲಾಗಿ ಸ್ಯಾಮ್​ ಬಿಲ್ಲಿಂಗ್ಸ್​ರನ್ನು ತಂಡದಲ್ಲಿ ಆಡಲಿದ್ದಾರೆ. ಇದನ್ನು ಹೊರತುಪಡಿಸಿ ಸ್ಯಾಮ್ ಕರ್ರನ್ ಹಾಗೂ ವೇಗಿ ಬೌಲರ್ ಟಿಮಾಲ್ ಮಿಲ್ಸ್​ರನ್ನೂ ವರ್ಲ್ಡ್​ ಇಲೆವೆನ್​ ತಂಡದಲ್ಲಿ ಶಾಮೀಲು ಮಾಡಲಾಗಿದೆ.

ಶಾಹಿದ್ ಅಫ್ರಿದಿ ಪಾಕಿಸ್ತಾನದ 500ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಕೇವಲ 16ರ ವಯಸ್ಸಿನಲ್ಲಿ ಮೊದಲ ಏಕದಿನ ಪಂದ್ಯವಾಡಿದ್ದ ಅಫ್ರಿದಿ 37 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದರು.

ಲಾರ್ಡ್ಸ್​ನ ಐತಿಹಾಸಿಕ ಮೈದಾನದಲ್ಲಿ ನಡೆಯಲಿರುವ ಚಾರಿಟಿ ಮ್ಯಾಚ್​ನಲ್ಲಿ ಬರಲಿರುವ ಮೊತ್ತವನ್ನು ವೆಸ್ಟ್​ ಇಂಡೀಸ್​ನಲ್ಲಿ ಕಳೆದ ವರ್ಷ ಭೀಕರ ಬಿರುಗಾಳಿಯಿಂದ ನಾಶವಾದ ಸ್ಟೇಡಿಯಂಗಳನ್ನು ಮರುಸ್ಥಾಪಿಸಲು ಬಳಸಲಾಗುತ್ತದೆ. ಈ ಪಂದ್ಯದಲ್ಲಿ ಭಾರತದ ಇಬ್ಬರು ಆಟಗಾರರೂ ಪಾಲ್ಗೊಳ್ಳಲಿದ್ದಾರೆ. ದಿನೆಶ್ ಕಾರ್ತಿಕ್ ಹಾಗೂ ಮೊಹಮನ್ಮದ್ ಶಮಿ ವರ್ಲ್ಡ್​ ಇಲೆವೆನ್​ ತಂಡದಲ್ಲಿ ಆಡಲಿದ್ದಾರೆ.

ICC ವರ್ಲ್ಡ್​ ಇಲವೆನ್: ಶಾಹಿದ್ ಅಫ್ರಿದಿ(ನಾಯಕ, ಪಾಕಿಸ್ತಾನ), ತಮೀಮ್ ಇಕ್ಬಾಲ್(ಬಾಂಗ್ಲಾದೇಶ), ದಿನೆಶ್ ಕಾರ್ತಿಕ್(ಭಾರತ), ರಶೀದ್ ಖಾನ್(ಅಫ್ಗಾನಿಸ್ತಾನ್), ಸಂದೀಪ್ ಲಾಮಿಚಾನೆ(ನೇಪಾಳ), ಮಿಶೆಲ್ ಮೈಕ್ಲೆಗನ್(ನ್ಯೂಜಿಲ್ಯಾಂಡ್), ಶೋಯೆಬ್ ಮಲಿಕ್(ಪಾಕಿಸ್ತಾನ), ಥಿಸಾರಾ ಪರೇರಾ(ಶ್ರೀಲಂಕಾ), ಲೂಕ್ ರಾಂಕಿ(ನ್ಯೂಜಿಲ್ಯಾಂಡ್), ಆದಿಲ್ ರಶೀದ್(ಇಂಗ್ಲೆಂಡ್), ಮೊಹಮ್ಮದ್ ಶಮಿ(ಭಾರತ), ಸ್ಯಾಮ್ ಬಿಲ್ಲಿಂಗ್ಸ್​(ಇಂಗ್ಲೆಂಡ್), ಟಿಮಾಲ್ ಮಿಲ್ಸ್​(ಇಂಗ್ಲೆಂಡ್).
First published:May 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading