ಕೊನೆಗೂ ಬಹಿರಂಗವಾಯ್ತು ಪಾಕ್​ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅಸಲಿ ವಯಸ್ಸು!

1996 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 37 ಎಸೆತದಲ್ಲಿ ಶತಕ ಸಿಡಿಸಿ ಯಾರೂ ಊಹಿಸದಂತಹ ವಿಶ್ವದಾಖಲೆಯೊಂದನ್ನು ಅಫ್ರಿದಿ ನಿರ್ಮಿಸಿದ್ದರು.

zahir | news18
Updated:May 3, 2019, 3:04 PM IST
ಕೊನೆಗೂ ಬಹಿರಂಗವಾಯ್ತು ಪಾಕ್​ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅಸಲಿ ವಯಸ್ಸು!
@HT
  • News18
  • Last Updated: May 3, 2019, 3:04 PM IST
  • Share this:
ಕ್ರಿಕೆಟ್ ಜಗತ್ತಿನ ಬಹು ಕಾಲದ ಸಂದೇಹಗಳಲ್ಲಿ ಒಂದಾಗಿದ್ದ ಪಾಕ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ತಮ್ಮ ಆತ್ಮಕಥೆ 'ಗೇಮ್​ ಚೇಂಜರ್'​ನಲ್ಲಿ ನಿಜವಾದ ಹುಟ್ಟಿದ ದಿನಾಂಕವನ್ನು ಅಫ್ರಿದಿ ಪ್ರಸ್ತಾಪ ಮಾಡಿದ್ದು, ಈ ಮೂಲಕ ಎಲ್ಲಾ ಅನುಮಾನಗಳು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನ ತಂಡಕ್ಕೆ ಅಫ್ರಿದಿ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರ ವಯಸ್ಸು 16 ಎನ್ನಲಾಗಿತ್ತು. ಈ ವೇಳೆ ಹಲವು ಮಂದಿ ಅನುಮಾನವನ್ನು ವ್ಯಕ್ತಪಡಿಸಿದ್ದರು. ಅತೀ ಕಡಿಮೆ ವಯಸ್ಸಿನಲ್ಲೇ ಪಾಕ್ ಕ್ರಿಕೆಟ್​ಗೆ ಎಂಟ್ರಿ ಕೊಟ್ಟ ಆಟಗಾರ ಎಂಬ ದಾಖಲೆ ಸಹ ಅಫ್ರಿದಿ ಪಾಲಾಗಿತ್ತು. ಆದರೆ ಇವರ ವಯಸ್ಸಿನ ಬಗ್ಗೆ ಹಲವು ಬಾರಿ ಸಂಶಯಗಳು ಮೂಡಿ ಬಂದಿತ್ತಾದರೂ ಅಫ್ರಿದಿ ಎಲ್ಲೂ ಕೂಡ ಬಾಯಿ ಬಿಟ್ಟಿರಲಿಲ್ಲ.

ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದರೂ ಅಫ್ರಿದಿ ವಯಸ್ಸಿನ ಬಗ್ಗೆ ಸಂದೇಹಗಳು ಹಾಗೇ ಉಳಿದಿತ್ತು. ಇದೀಗ ತಮ್ಮ ಆತ್ಮಚರಿತ್ರೆಯಲ್ಲಿ ಖುದ್ದು ತಾವು ಮೊದಲ ಪಂದ್ಯವಾಡಿದಾಗ ತನ್ನ ವಯಸ್ಸು 21 ವರ್ಷವಾಗಿತ್ತು ಎಂದು ತಿಳಿಸಿದ್ದಾರೆ. ಅಂದರೆ ಅಫ್ರಿದಿಯು 1975 ರಲ್ಲಿ ಜನಿಸಿದ್ದರು. ಆದರೆ ಕ್ರಿಕೆಟ್​ ಆಡಳಿತ ಮಂಡಳಿ ನನ್ನ ವಯಸ್ಸನ್ನು ಮಾರ್ಚ್​ 1, 1980 ಎಂದು ಬರೆದುಕೊಂಡಿತು. ಹೀಗಾಗಿ ನನ್ನ ಜನ್ಮದಿನಾಂಕದಲ್ಲಿ ವ್ಯತ್ಯಾಸಗಳು ಉಂಟಾಗಿದೆ ಎಂದು ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.

1996 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 37 ಎಸೆತದಲ್ಲಿ ಶತಕ ಸಿಡಿಸಿ ಯಾರೂ ಊಹಿಸದಂತಹ ವಿಶ್ವದಾಖಲೆಯೊಂದನ್ನು ಅಫ್ರಿದಿ ನಿರ್ಮಿಸಿದ್ದರು. ಈ ಒಂದು ಶತಕದೊಂದಿಗೆ ವಿಶ್ವದ ಗಮನ ಸೆಳೆದ ಅಫ್ರಿದಿ ಸಿಡಿಲಬ್ಬರ ಬ್ಯಾಟಿಂಗ್​ಗೆ ಮುಂದೆ ಬೂಂ ಬೂಂ ಆಟಗಾರನೆಂಬ ಪಟ್ಟ ಕೂಡ ಲಭಿಸಿತ್ತು. ಈ ದಾಖಲೆಯು 17 ವರ್ಷಗಳ ಕಾಲ ವಿಶ್ವದಾಖಲೆಯಾಗಿ ಉಳಿದದ್ದು ಈಗ ಇತಿಹಾಸ.



ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 27 ಟೆಸ್ಟ್, 398 ಏಕದಿನ ಹಾಗೂ 99 ಟಿ20 ಪಂದ್ಯಗಳನ್ನು ಆಡಿರುವ ಬೂಂ ಬೂಂ ಅಫ್ರಿದಿ 2016ರಲ್ಲಿ ನಿವೃತ್ತಿ ಘೋಷಿಸಿದ್ದರು. ಇದೀಗ ತಮ್ಮ ಆತ್ಮಕಥನ 'ಗೇಮ್ ಚೇಂಜರ್' ಮೂಲಕ ಅಲೆಯೆಬ್ಬಿಸಿರುವ ಅಫ್ರಿದಿ, ನಾನು ಬರೆದಿರುವ ಪುಸ್ತಕವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸುವಂತೆ ಎಂದು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

First published:May 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading