ಇದು ಫುಟ್ಬಾಲ್ ಅಥವಾ ಕ್ರಿಕೆಟ್?; ಆಸೀಸ್ ವಿರುದ್ಧದ ಟೆಸ್ಟ್​ನಲ್ಲಿ ಪಾಕ್ ಫೀಲ್ಡರ್​ನ ಎಡವಟ್ಟು ನೀವೇ ನೋಡಿ!

ಪಾಕ್ ಬೌಲರ್ ಶಾಹೀನ್ ಆಫ್ರಿದಿ ಬೌಂಡರಿ ಗೆರೆ ಬಳಿ ಚೆಂಡು ಹಿಡಿಯಲು ಹೋಗಿ ಫೋರ್​ಗೆ ಚೆಂಡನ್ನು ಒದ್ದಿ ಆಸ್ಟ್ರೇಲಿಯಾ ಖಾತೆಗೆ 4 ರನ್ ಸೇರಿಸಲು ಕಾರಣರಾದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

news18-kannada
Updated:November 30, 2019, 10:43 AM IST
ಇದು ಫುಟ್ಬಾಲ್ ಅಥವಾ ಕ್ರಿಕೆಟ್?; ಆಸೀಸ್ ವಿರುದ್ಧದ ಟೆಸ್ಟ್​ನಲ್ಲಿ ಪಾಕ್ ಫೀಲ್ಡರ್​ನ ಎಡವಟ್ಟು ನೀವೇ ನೋಡಿ!
ಆಸ್ಟ್ರೇಲಿಯಾ vs ಪಾಕಿಸ್ತಾನ
  • Share this:
ಬೆಂಗಳೂರು (ನ. 30): ಅಡಿಲೇಡ್​​ನಲ್ಲಿ ಸಾಗುತ್ತಿರುವ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಆಟ ಪ್ರದರ್ಶಿಸುತ್ತಿದೆ. ಡೇವಿಡ್ ವಾರ್ನರ್ ದ್ವಿಶತಕ ಸಿಡಿಸಿ ಅಬ್ಬರಿಸುತ್ತಿದ್ದರೆ, ಮರ್ನಸ್ ಲಬುಸ್ಚಗ್ನೆ162 ರನ್ ಗಳಿಸಿ ಔಟ್ ಆಗಿದ್ದಾರೆ. ಈಗಾಗಲೇ ಆಸೀಸ್ ತಂಡದ ಮೊತ್ತ 450ರ ಅಂಚಿನಲ್ಲಿದ್ದು, ದೊಡ್ಡ ಮೊತ್ತ ಪೇರಿಸುವ ಲಕ್ಷಣ ಗೋಚರಿಸುತ್ತಿದೆ.

ಮೊದಲ ದಿನವಾದ ನಿನ್ನೆ ವಾರ್ನರ್ ಹಾಗೂ ಲಬುಸ್ಚಗ್ನೆ ಪಾಕ್ ಬೌಲರ್​ಗಳ ಬೆವರಳಿಸಿ ಬಿಟ್ಟರು. ಬೌಂಡರಿಗಳ ಮಳೆ ಸುರಿಸಿದರು. ಅದರಲ್ಲು ಪಾಕಿಸ್ತಾನ ಫೀಲ್ಡರ್​ಗಳು ಮಾಡಿದ ಎಡವಟ್ಟಿನಿಂದಲೇ ಆಸೀಸ್​ಗೆ ಸಾಕಷ್ಟು ರನ್ ಹರಿದುಬಂತು.

 


3 ತಿಂಗಳಲ್ಲಿ ಎಲ್ಲವೂ ಗೊತ್ತಾಗಲಿದೆ; ಧೋನಿ ರಾಜೀನಾಮೆ ಬಗ್ಗೆ ಗಂಗೂಲಿ ಅಚ್ಚರಿಯ ಹೇಳಿಕೆ

ಮುಖ್ಯವಾಗಿ ಪಾಕ್ ಬೌಲರ್ ಶಾಹೀನ್ ಆಫ್ರಿದಿ ಬೌಂಡರಿ ಗೆರೆ ಬಳಿ ಚೆಂಡು ಹಿಡಿಯಲು ಹೋಗಿ ಫೋರ್​ಗೆ ಚೆಂಡನ್ನು ಒದ್ದಿ ಆಸ್ಟ್ರೇಲಿಯಾ ಖಾತೆಗೆ 4 ರನ್ ಸೇರಿಸಲು ಕಾರಣರಾದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಇದು ಫುಟ್ಬಾಲ್ ಆಟವಲ್ಲ, ಕ್ರಿಕೆಟ್ ಆಟ ಎಂದು ಕೆಲವರು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಶಾಹೀನ್ ಫೀಲ್ಡಿಂಗ್ ನೋಡಿದರೆ ಮೆಸ್ಸಿ ಅಥವಾ ರೊನಾಲ್ದೋ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಪಾಕಿಸ್ತಾನದ ಕ್ರಿಕೆಟ್​ನಲ್ಲಿ ಇಂತಹ ಸನ್ನಿವೇಶಗಳು ಕಾಮನ್ ಎಂದಿದ್ದಾರೆ.

 ಇಷ್ಟೇ ಅಲ್ಲದೆ ಇನ್ನೊಮ್ಮ ಬೌಂಡರಿ ಲೈನ್ ಬಳಿ ಅಫ್ರಿದಿ ಫೀಲ್ಡಿಂಗ್ ಮಾಡುತ್ತಿರುವಾಗ ಬಾಲ್ ಎಲ್ಲಿ ಹೋಯಿತೆಂದೇ ಅರಿಯದೆ ಮತ್ತೆ 4 ರನ್ ಆಸೀಸ್​ ಕಲೆಹಾಕುವಂತೆ ಮಾಡಿದರು.

 ವೈರಲ್ ಆಗುತ್ತಿದೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಜಾಕ್ ಕಾಲಿಸ್ ಪೋಟೋ; ಇದರ ಹಿಂದಿದೆ ಒಳ್ಳೆಯ ಉದ್ದೇಶ!

ಈಗಾಗಲೇ ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್​ ಹಾಗೂ 5 ರನ್​ಗಳಿಂದ ಗೆಲುವು ಸಾಧಿಸಿದೆ. 2ನೇ ಟೆಸ್ಟ್​ನಲ್ಲೂ ಆಸೀಸ್ ಬ್ಯಾಟ್ಸ್​ಮನ್​ಗಳು ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ವಾರ್ನರ್- ಲಬುಸ್ಚಗ್ನೆ ಅವರ 361 ರನ್​ಗಳ ಅಮೋಘ ಜೊತೆಯಾಟ ತಂಡಕ್ಕೆ ಉಪಯುಕ್ತವಾಯಿತು.

 

First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ