HOME » NEWS » Sports » CRICKET SHAH RUKH SON ARYAN JUHI CHAWLAS DAUGHTER JAHNAVI ATTEND IPL AUCTION 2021 BRIEFING FOR KKR ZP

IPL 2021: ಐಪಿಎಲ್ ಹರಾಜಿನ ವೇಳೆ ಕಾಣಿಸಿಕೊಂಡ ಈ ಇಬ್ಬರು ಯಾರು ಗೊತ್ತಾ?

ಉತ್ತಮ ಬಿಡ್ಡಿಂಗ್ ಮೂಲಕ ಶಕೀಬ್ ಅಲ್ ಹಸನ್, ಬೆನ್ ಕಟಿಂಗ್​ನಂತಹ ಸ್ಟಾರ್ ಆಲ್​ರೌಂಡರ್​ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಜಾಹ್ನವಿ-ಆರ್ಯನ್ ಯಶಸ್ವಿಯಾಗಿದ್ದರು.

news18-kannada
Updated:February 19, 2021, 5:23 PM IST
IPL 2021: ಐಪಿಎಲ್ ಹರಾಜಿನ ವೇಳೆ ಕಾಣಿಸಿಕೊಂಡ ಈ ಇಬ್ಬರು ಯಾರು ಗೊತ್ತಾ?
Aryan Khan, Jahanvi Chawla
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಹರಾಜು ಪ್ರಕ್ರಿಯೆ ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಿತು. ಈ ಹರಾಜಿನಲ್ಲಿ, ಎಲ್ಲಾ 8 ತಂಡಗಳು ಒಟ್ಟು 57 ಆಟಗಾರರನ್ನು ಖರೀದಿಸಿದೆ. ಭಾರೀ ಮೊತ್ತದ ಬಿಡ್ಡಿಂಗ್​ಗಳಿಂದ, ಚೊಚ್ಚಲ ಅವಕಾಶಗಳಿಂದ ಕೆಲ ಆಟಗಾರರು ಮಿಂಚಿದರು. ಅತ್ತ ಆಟಗಾರರ ಖರೀದಿಗೆ ಆಗಮಿಸಿದ್ದ ಇಬ್ಬರು ಯುವ ಮಾಲೀಕರು ಕೂಡ ಎಲ್ಲರ ಕೇಂದ್ರ ಬಿಂದುವಾಗಿದ್ದರು. ಇದರ ಬೆನ್ನಲ್ಲೇ ಕೆಕೆಆರ್ ತಂಡದ ಫ್ರಾಂಚೈಸಿ ಟೇಬಲ್​ನಲ್ಲಿ ಕಾಣಿಸಿಕೊಂಡಿದ್ದ ಇಬ್ಬರು ಯಾರು ಎಂಬ ಪ್ರಶ್ನೆಗಳು ಎದ್ದಿದ್ದವು.

ಹೌದು, ಗುರುವಾರ ನಡೆದ ಹರಾಜಿನ ವೇಳೆ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಮಾಲೀಕರಾದ ನಟ ಶಾರುಖ್ ಖಾನ್ ಹಾಗೂ ನಟಿ ಜೂಹಿ ಚಾವ್ಲಾ ಅವರ ಮಕ್ಕಳು ಬಿಡ್ಡಿಂಗ್​ನಲ್ಲಿ ತಲ್ಲೀನರಾಗಿದ್ದರು. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರು. ಅಲ್ಲದೆ ಜೂಹಿ ಚಾವ್ಲಾ ಅವರ ಪುತ್ರಿ ಜಾಹ್ನವಿ ಮೆಹ್ತಾ ಅವರು ಕೂಡ ಕಾಣಿಸಿಕೊಂಡರು. ಆದರೆ, ಇದು ಜಾಹ್ನವಿ ಐಪಿಎಲ್ ಹರಾಜಿನ ವೇಳೆ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ.

ಇನ್ನು ಜೂಹಿ ಚಾವ್ಲಾ ಅವರ ಪತಿ ಜೈ ಮೆಹ್ತಾ ಕೂಡ ಹರಾಜಿನಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಉತ್ತಮ ಬಿಡ್ಡಿಂಗ್ ಮೂಲಕ ಶಕೀಬ್ ಅಲ್ ಹಸನ್, ಬೆನ್ ಕಟಿಂಗ್​ನಂತಹ ಸ್ಟಾರ್ ಆಲ್​ರೌಂಡರ್​ಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಜಾಹ್ನವಿ-ಆರ್ಯನ್ ಯಶಸ್ವಿಯಾಗಿದ್ದರು. ಇನ್ನು ಅನುಭವಿ ಹರ್ಭಜನ್ ಸಿಂಗ್ ಅವರನ್ನೂ ಸಹ ಕೆಕೆಆರ್​ ಬಿಡ್ ಮಾಡಿದೆ. ಇದಲ್ಲದೆ ಕರುಣ್ ನಾಯರ್, ಪವನ್ ನೇಗಿ ಹಾಗೂ ಶೆಲ್ಡನ್ ಜಾಕ್ಸನ್ ಸಹ ಕೆಕೆಆರ್​ ಪಾಲಾಗಿದೆ. ಒಟ್ಟಿನಲ್ಲಿ ಬಾಲಿವುಡ್​ ತಾರೆಯರ ಮಕ್ಕಳೂ ಸಹ ಈ ಬಾರಿ ಬಿಡ್ಡಿಂಗ್​ನಲ್ಲಿ ಭಾಗವಹಿಸುವ ಮೂಲಕ ತಂದೆ-ತಾಯಿಗಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡಿದ್ದು ವಿಶೇಷವಾಗಿತ್ತು.


ಕೆಕೆಆರ್ ತಂಡ ಹೀಗಿದೆ: ದಿನೇಶ್ ಕಾರ್ತಿಕ್, ಆಂಡ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ಲಾಕಿ ಫರ್ಗುಸನ್, ನಿತೀಶ್ ರಾಣಾ, ಪ್ರಸಿದ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಬ್ಮನ್ ಗಿಲ್, ಸುನೀಲ್ ನರೀನ್, ಇಯಾನ್ ಮೋರ್ಗನ್, ಪ್ಯಾಟ್ ಕುಮಿನ್ಸ್, ರಾಹುಲ್ ತ್ರಿಪಾಠಿ , ಟಿಮ್ ಸೀಫರ್ಟ್, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್
Published by: zahir
First published: February 19, 2021, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories