ಶಾರುಖ್ ಖಾನ್-ಬ್ರಾವೋ ಲುಂಗಿ ಡ್ಯಾನ್ಸ್ ವೈರಲ್; ಕೆರಿಬಿಯನ್ನರ ಜೊತೆ ಕಿಂಗ್ ಖಾನ್ ಮಸ್ತಿ

ಅದ್ದೂರಿ ಪಾರ್ಟಿಯಲ್ಲಿ ಟ್ರಿನ್​ಬ್ಯಾಗೋದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಬಾಲಿವುಡ್​ ಹಾಡಿಗೆ ಇವರು ಸಖತ್​ ಸ್ಟೆಪ್​ ಹಾಕಿದ್ದಾರೆ. ​ ಲುಂಗಿ ಡಾನ್ಸ್​ ಹಾಡಿಗೆ ಶಾರುಖ್ ಹಾಗೂ ಡ್ವೇನ್ ಬ್ರಾವೋ ಸಖತ್​ ಸ್ಟೆಪ್​ ಹಾಕಿದ್ದಾರೆ.

ಶಾರುಖ್​ ಜೊತೆ ಬ್ರಾವೋ

ಶಾರುಖ್​ ಜೊತೆ ಬ್ರಾವೋ

  • Share this:
ಬಾಲಿವುಡ್​ ಸ್ಟಾರ್​ ಶಾರುಖ್​ ಖಾನ್​ ನಟನೆಯಿಂದ ಬ್ರೇಕ್​ ಪಡೆದು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆ ಸಿನಿಮಾ ನಿರ್ಮಾಣಕ್ಕೂ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇತ್ತಿಚೆಗೆ ಕಿಂಗ್​ ಖಾನ್​ ಕ್ರ್ಯೂಸ್​ ಶಿಪ್​ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ಅವರು ಮೋಜು ಮಸ್ತಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾರುಖ್ ಕೋಲ್ಕತ್ತಾ ನೈಟ್​ ರೈಡರ್ಸ್​​ ಜೊತೆ ಟ್ರಿನ್​ಬ್ಯಾಗೋ ನೈಟ್​ ರೈಡರ್ಸ್​​ ತಂಡದ ಒಡೆಯ. ಹಾಲಿ ನಡೆಯುತ್ತಿರುವ ಚಾಂಪಿಯನ್​​ ಶಿಪ್​ನಲ್ಲಿ ಟ್ರಿನ್​ಬ್ಯಾಗೋ ನೈಟ್​ ರೈಡರ್ಸ್ ಸತತ ಮೂರು ಗೆಲುವು ಸಾಧಿಸಿತ್ತು. ಇದೇ ಖುಷಿಗೆ ಶಾರುಖ್​ ಕ್ರ್ಯೂಸ್ ಶಿಪ್​ನಲ್ಲಿ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ತಂಡದ ಸದಸ್ಯರ ಜೊತೆ ಶಾರುಖ್​ ಹೆಜ್ಜೆ ಹಾಕಿದ್ದಾರೆ.

ಅದ್ದೂರಿ ಪಾರ್ಟಿಯಲ್ಲಿ ಟ್ರಿನ್​ಬ್ಯಾಗೋದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಬಾಲಿವುಡ್​ ಹಾಡಿಗೆ ಇವರು ಸಖತ್​ ಸ್ಟೆಪ್​ ಹಾಕಿದ್ದಾರೆ. ​ ಲುಂಗಿ ಡಾನ್ಸ್​ ಹಾಡಿಗೆ ಶಾರುಖ್ ಹಾಗೂ ಡ್ವೇನ್  ಬ್ರಾವೋ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಕಳೆದ ವರ್ಷ ತೆರೆಕಂಡಿದ್ದ ಶಾರುಖ್​ ಖಾನ್​ ಅಭಿನಯದ ‘ಝೀರೋ’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತ್ತು. ಶಾರುಖ್​ ಹೀರೋಯಿಸಂ ಬಿಟ್ಟು ಭಿನ್ನ ಅವತಾರ ತಾಳಿದ್ದು ಪ್ರೇಕ್ಷಕರಿಗೆ ಇಷ್ಟವಾಗಲೇ ಇಲ್ಲ. ಈ ಚಿತ್ರ ಫ್ಲಾಪ್​ ಆದ ನಂತರ ಸಿನಿಮಾ ನಿರ್ಮಾಣದತ್ತ ಶಾರುಖ್​ ಗಮನ ಹರಿಸುತ್ತಿದ್ದಾರೆ. ಅಲ್ಲದೆ, ಹೆಚ್ಚಿನ ಸಮಯವನ್ನು ಕುಟುಂಬದ ಜೊತೆಯೇ ಕಳೆಯುತ್ತಿದ್ದಾರೆ.2013ರಲ್ಲಿ ತೆರೆಕಂಡ ‘ಚೆನ್ನೈ ಎಕ್ಸ್​​ಪ್ರೆಸ್​’ ಚಿತ್ರವೇ ಕೊನೆ. ನಂತರ ಶಾರುಖ್​ ತಮ್ಮ ಮೂಲ ಚಾರ್ಮ್​ ಕಳೆದುಕೊಳ್ಳಲು ಆರಂಭಿಸಿದ್ದರು. ಸೋಲು ಅವರ ಬೆನ್ನು ಬಿದ್ದಿತ್ತು. ‘ಹ್ಯಾಪಿ ನ್ಯೂ ಇಯರ್​’ ಚಿತ್ರ ಕಮಾಯಿ ಮಾಡಿತ್ತಾದರೂ, ವಿಮರ್ಷೆಯಲ್ಲಿ ಸೋತಿತ್ತು. ಇನ್ನು, ‘ಡಿಯರ್​ ಜಿಂದಗಿ’ ಚಿತ್ರವನ್ನು ಜನ ಮೆಚ್ಚಿಕೊಂಡರಾದರೂ ಅದರಲ್ಲಿ ಹೈಲೈಟ್​ ಆಗಿದ್ದು, ನಟಿ ಆಲಿಯಾ ಭಟ್​. ಇನ್ನು, ಶಾರುಖ್​ ಅಭಿನಯದ ‘ಫ್ಯಾನ್​’ ಚಿತ್ರವಂತೂ ಹೇಳ ಹೆಸರಿಲ್ಲದೆ ನೆಲಕಚ್ಚಿತ್ತು. ‘ರಾಯೀಸ್​’, ‘ಜಬ್​ ಹ್ಯಾರಿ ಮೆಟ್ ​ಸೇಜಲ್​’ ಸಾಮಾನ್ಯ ಸಿನಿಮಾ ಎನ್ನುವ ಹಣೆ ಪಟ್ಟಿ ಹೊತ್ತುಕೊಂಡಿತು. ‘ಝೀರೋ’ ಚಿತ್ರದ ಮೂಲಕ ಮತ್ತೆ ಸೋಲಾಗಿದೆ. ಸದ್ಯ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಅದನ್ನು ನಂಬ ಬೇಡಿ ಎಂದು ಶಾರುಖ್​ ಕೇಳಿಕೊಂಡಿದ್ದಾರೆ.First published: