ಇಂಗ್ಲೆಂಡ್ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಐದು ವಿಕೆಟ್ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ವನಿತೆಯರು ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಯುವ ಆಟಗಾರ್ತಿ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಉತ್ತಮ ಆರಂಭ ಒದಗಿಸಿದ್ದರು.
ಸ್ಮೃತಿ ಮಂಧನಾ (30 ಎಸೆತಗಳಲ್ಲಿ 22) ಜೊತೆಗೂಡಿ ಶಫಾಲಿ ವರ್ಮಾ ಮೊದಲ ವಿಕೆಟ್ಗೆ 54 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ 44 ರನ್ ಬಾರಿಸಿ ಚೊಚ್ಚಲ ಅರ್ಧಶತಕದತ್ತ ದಾಪುಗಾಲಿಟ್ಟಿದ್ದ 17 ವರ್ಷದ ಸ್ಫೋಟಕ ಬ್ಯಾಟ್ಸ್ಮನ್ ಶಫಾಲಿ ಸೋಫಿ ಎಕ್ಲೆಸ್ಟೋನ್ ಅವರ ಎಸೆತಕ್ಕೆ ಬಲಿಯಾಗಿದ್ದರು. 17 ನೇ ಓವರ್ನಲ್ಲಿ ಎಕ್ಲೆಸ್ಟೋನ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಮುಂದಾದ ಶಫಾಲಿ ಚೆಂಡನ್ನು ಗುರುತಿಸುವಲ್ಲಿ ಎಡವಿದರು. ಇತ್ತ ಸಿಕ್ಕ ಅವಕಾಶವನ್ನು ವಿಕೆಟ್ ಕೀಪರ್ ಜೋನ್ಸ್ ಬಳಸಿಕೊಂಡರು.
ಚೆಂಡು ಕೀಪರ್ ಕೈ ಸೇರುತ್ತಿರುವುದನ್ನು ಗಮನಿಸಿದ ಶಫಾಲಿ ಮತ್ತೆ ಕ್ರೀಸ್ ಸೇರಲು ಸಂಪೂರ್ಣ ಸ್ಟ್ರಚ್ ಆಗಿ ಪ್ರಯತ್ನ ನಡೆಸಿದರು. ಶಫಾಲಿ ಈ ಪ್ರಯತ್ನವು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ನೆನಪಿಸಿತ್ತು. ಧೋನಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ಸ್ಟಂಪಿಂಗ್ನಿಂದ ಪಾರಾಗಲು ಸಂಪೂರ್ಣವಾಗಿ ಸ್ಟ್ರಚ್ ಆಗಿ ಕೀಸ್ ಮುಟ್ಟಿದ್ದರು. ಅಂತಹದ್ದೇ ಪ್ರಯತ್ನವನ್ನು ಶಫಾಲಿ ನಡೆಸಿದರೂ ಇಂಚುಗಳ ಅಂತರದಲ್ಲಿ ಔಟಾಗಬೇಕಾಯಿತು. ಯುವ ಆಟಗಾರ್ತಿಯ ಈ ಅದ್ಭುತ ಪ್ರಯತ್ನದಿಂದ ಮೂರನೇ ಅಂಪೈರ್ ಕೂಡ ಒಂದಷ್ಟು ಹೊತ್ತು ಔಟ್ ನೀಡಲು ತಲೆಕೆಡಿಸಿಕೊಳ್ಳಬೇಕಾಯಿತು.
This is the second time in 2 ODI’s that we are making harder than it needs to be for the third umpire. Be great to get bright coloured bails pic.twitter.com/0bXAdO1jMw
— Lisa Sthalekar (@sthalekar93) June 30, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ