ವಿಶ್ವಕಪ್ ವೇಳೆ ನಿಯಮ ಉಲ್ಲಂಘಿಸಿ ಪತ್ನಿಯೊಂದಿಗೆ ಕಾಲ ಕಳೆದ ಆಟಗಾರ ಯಾರು?

Team India : ಬಿಸಿಸಿಐ ಕಟ್ಟುನಿಟ್ಟಿನ ನಿಯಮವನ್ನು ಮೀರಿದ ಈ ಆಟಗಾರ ಬರೋಬ್ಬರಿ 7 ವಾರ ಪತ್ತಿಯೊಂದಿಗೆ ಇದ್ದರು. ಈ ವೇಳೆ ತಂಡದ ನಾಯಕ, ಕೋಚ್ ಅಥವಾ ಆಡಳಿತ ಮಂಡಳಿಯ ಅನುಮತಿಯನ್ನು ಸಹ ಪಡೆದಿರಲಿಲ್ಲ ಎಂದು ಪ್ರಮುಖ ವೆಬ್​ಸೈಟ್​ವೊಂದು ವರದಿ ಮಾಡಿದೆ.

zahir | news18
Updated:July 24, 2019, 6:36 PM IST
ವಿಶ್ವಕಪ್ ವೇಳೆ ನಿಯಮ ಉಲ್ಲಂಘಿಸಿ ಪತ್ನಿಯೊಂದಿಗೆ ಕಾಲ ಕಳೆದ ಆಟಗಾರ ಯಾರು?
team india
  • News18
  • Last Updated: July 24, 2019, 6:36 PM IST
  • Share this:
ವಿಶ್ವಕಪ್ ಸೆಮಿಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತ್ತು. ಈ ಸೋಲಿಗೆ ನಾನಾ ಕಾರಣಗಳು ಈ ಹಿಂದೆ ಕೇಳಿ ಬಂದಿದ್ದವು. ಆದರೀಗ ತಂಡದ ಹಿರಿಯ ಆಟಗಾರೊಬ್ಬರು ಬಿಸಿಸಿಐ ನಿಯಮವನ್ನು ಉಲ್ಲಂಘಿಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಟೂರ್ನಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಆಟಗಾರರ ಪತ್ನಿಯರಿಗೆ ತಂಡದೊಂದಿಗೆ ಇರಲು ಕೇವಲ 15 ದಿನಗಳ ಕಾಲ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈ ನಿಯಮವನ್ನು ಮೀರಿದ ತಂಡದಲ್ಲಿದ್ದ ಹಿರಿಯ ಆಟಗಾರ ವಿಶ್ವಕಪ್ ಕೊನೆವರೆಗೂ ಹೆಂಡತಿಯೊಂದಿಗೆ ಕಾಲ ಕಳೆದಿದ್ದರು ಎಂಬ ಸುದ್ದಿ ಹೊರ ಬಿದ್ದಿದೆ.

ಬಿಸಿಸಿಐ ಕಟ್ಟುನಿಟ್ಟಿನ ನಿಯಮವನ್ನು ಮೀರಿದ ಈ ಆಟಗಾರ ಬರೋಬ್ಬರಿ 7 ವಾರ ಪತ್ತಿಯೊಂದಿಗೆ ಇದ್ದರು. ಈ ವೇಳೆ ತಂಡದ ನಾಯಕ, ಕೋಚ್ ಅಥವಾ ಆಡಳಿತ ಮಂಡಳಿಯ ಅನುಮತಿಯನ್ನು ಸಹ ಪಡೆದಿರಲಿಲ್ಲ ಎಂದು ಪ್ರಮುಖ ವೆಬ್​ಸೈಟ್​ವೊಂದು ವರದಿ ಮಾಡಿದೆ.

ಆದರೆ ಈ ಆಟಗಾರ ಯಾರು ಎಂಬ ಮಾಹಿತಿ ಮಾತ್ರ ಬಹಿರಂಗವಾಗಿಲ್ಲ. ಬಿಸಿಸಿಐ ಮೂಲಗಳ ಪ್ರಕಾರ ನಿಯಮ ಉಲ್ಲಂಘಿಸಿದ ಆಟಗಾರನ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ತಂಡದ ಆಡಳಿತ ವ್ಯವಸ್ಥಾಕಾದ ಸುನೀಲ್ ಸುಬ್ರಹ್ಮಣ್ಯ ಅವರನ್ನು ಪ್ರಶ್ನಿಸಲಾಗುವುದು ಎಂದು ಹೇಳಲಾಗಿದೆ.

ವಿಶ್ವಕಪ್‌ ಆರಂಭಕ್ಕೂ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಆಟಗಾರರ ಪತ್ನಿ ಅಥವಾ ಗೆಳತಿಯರೊಂದಿಗೆ ಇರಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದ್ದರು. ಆದರೆ ಕುಟುಂಬ ವರ್ಗದವರು ಜೊತೆಗಿದ್ದರೆ ಆಟದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣದಿಂದ ಬಿಸಿಸಿಐ ನಾಯಕನ ಕೋರಿಕೆಯನ್ನು ತಿರಸ್ಕರಿಸಿತ್ತು.
First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ