ಧವನ್ ಸ್ಥಾನಕ್ಕೆ ಪಂತ್​?; ಆಯ್ಕೆ ಸಮಿತಿ ಹಾಗೂ ಟೀಂ​ ಮ್ಯಾನೇಜ್​ಮೆಂಟ್ ನಡುವೆ ಭಿನ್ನಮತ

Rishabh Pant: ಕೈ ಬೆರಳಿಗೆ ಗಾಯವಾಗಿದ್ದು ಕನಿಷ್ಠ 3 ಪಂದ್ಯಗಳಲ್ಲಿ ಧವನ್ ಅಲಭ್ಯರಾಗಿದ್ದಾರೆ. ಧವನ್ ಅವರಿಗೆ ಬದಲೀ ಆಟಗಾರನಿಲ್ಲ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದ ಬಿಸಿಸಿಐ ಇದೀಗ ರಿಷಬ್ ಪಂತ್ ಅವರನ್ನು ಬ್ಯಾಕಪ್ ಆಗಿ ಇಂಗ್ಲೆಂಡ್​ಗೆ ಕಳುಹಿಸುತ್ತಿರುವುದು ಅಚ್ಚರಿ ಮೂಡಿಸಿದೆ.

Rajesh Duggumane | news18
Updated:June 13, 2019, 2:32 PM IST
ಧವನ್ ಸ್ಥಾನಕ್ಕೆ ಪಂತ್​?; ಆಯ್ಕೆ ಸಮಿತಿ ಹಾಗೂ ಟೀಂ​ ಮ್ಯಾನೇಜ್​ಮೆಂಟ್ ನಡುವೆ ಭಿನ್ನಮತ
ರಿಷಭ್​​ ಪಂತ್
  • News18
  • Last Updated: June 13, 2019, 2:32 PM IST
  • Share this:
ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶಿಖರ್ ಧವನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಿಷಭ್​ ಪಂತ್ ಅವರನ್ನು ಸ್ಟ್ಯಾಂಡ್​ ಬೈ ಆಟಗಾರನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ಆದರೆ, ಇವರನ್ನು ಶಿಖರ್​ ಜಾಗಕ್ಕೆ ತುಂಬಬೇಕು ಎನ್ನುವ ವಿಚಾರದಲ್ಲಿ ಆಯ್ಕೆ ಸಮಿತಿ ಹಾಗೂ ಭಾರತೀಯ ಕ್ರಿಕೆಟ್​ ತಂಡದ ನಿರ್ವಹಣಾ ಮಂಡಳಿ ನಡುವೆ ಭಿನ್ನಾಭಿಪ್ರಾಯ ಇತ್ತು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಆಡುವ ವೇಳೆ ಶಿಖರ್ ಧವನ್ ಗಾಯಗೊಂಡಿದ್ದರು. ಕೈ ಬೆರಳಿಗೆ ಗಾಯವಾಗಿದ್ದು ಕನಿಷ್ಠ 3 ಪಂದ್ಯಗಳಲ್ಲಿ ಧವನ್ ಅಲಭ್ಯರಾಗಿದ್ದಾರೆ. ಧವನ್ ಅವರಿಗೆ ಬದಲೀ ಆಟಗಾರನಿಲ್ಲ ಎಂದು ನಿನ್ನೆಯೇ ಸ್ಪಷ್ಟಪಡಿಸಿದ್ದ ಬಿಸಿಸಿಐ ಇದೀಗ ರಿಷಭ್​ ಪಂತ್ ಅವರನ್ನು ಬ್ಯಾಕಪ್ ಆಗಿ ಇಂಗ್ಲೆಂಡ್​ಗೆ ಕಳುಹಿಸುತ್ತಿರುವುದು ಅಚ್ಚರಿ ಮೂಡಿಸಿದೆ.

ಬದಲಿ ಆಟಗಾರರಾಗಿ ಯಾರನ್ನೂ ನೇಮಕ ಮಾಡುವ ಆಲೋಚನೆ ನಿರ್ವಹಣಾ ಸಮಿತಿಗೆ ಇಲ್ಲ. ಶಿಖರ್​ ಧವನ್​ ಅವರು ಬೇಗ ಚೇತರಿಕೆ ಕಾಣಲಿದ್ದಾರೆ ಎನ್ನುವ ವಿಶ್ವಾಸ ಈ ಸಮಿತಿಯದ್ದು. “ಶಿಖರ್​ ನಮ್ಮ ತಂಡಕ್ಕೆ ತುಂಬಾನೆ ಪ್ರಮುಖರು. ಶ್ರೀಲಂಕಾ ವಿರುದ್ಧ ಜು.6ರಂದು ಕೊನೆಯ ಪಂದ್ಯ ನಡೆಯಲಿದೆ. ಅಲ್ಲಿಯವರೆಗೂ ನಾವು ಕಾಯುತ್ತೇವೆ,” ಎಂದು ಸಹಾಯಕ ಕೋಚ್​ ಸಂಜಯ್​ ಬಂಗಾರ್​ ಹೇಳಿದ್ದಾರೆ.

ಇದನ್ನೂ ಓದಿ:  ಶಿಖರ್ ಧವನ್ ಗಾಯ ಹಿನ್ನೆಲೆ, ರಿಷಬ್ ಪಂತ್​ಗೆ ಬುಲಾವ್

ಆದರೆ, ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ದೇವಂಗ್​ ಗಾಂಧಿ ಮತ್ತು ಸರನ್​ದೀಪ್​ ಸಿಂಗ್​ ಮಾತ್ರ ಈ ವಿಚಾರದಲ್ಲಿ ಭಿನ್ನ ಮತ ಹೊಂದಿದ್ದು, ಧವನ್​ ಬದಲಿಗೆ ಪಂತ್​ ಅವರನ್ನು ನೇಮಕ ಮಾಡುತ್ತಿರುವ ವಿಚಾರವನ್ನು ಘೋಷಣೆ ಮಾಡಲು ಉತ್ಸುಕರಾಗಿದ್ದಾರೆ.

First published:June 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ