HOME » NEWS » Sports » CRICKET SEHWAG NAMES THIRD INDIAN PACER FOR T20 WORLD CUP 2021 ZP

Virender Sehwag : T20 ವಿಶ್ವಕಪ್​ಗೆ ಮೂವರು ವೇಗಿಗಳನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್

ಆಸ್ಟ್ರೇಲಿಯಾ ವಿರುದ್ಧ ಹಲವು ಬೌಲರ್‌ಗಳು ದುಬಾರಿಯಾದರೂ, ಎಡಗೈ ವೇಗಿ ನಟರಾಜನ್ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಅವರನ್ನು ಆರಿಸಿಕೊಳ್ಳುವುದು ಉತ್ತಮ.

news18-kannada
Updated:December 8, 2020, 7:32 PM IST
Virender Sehwag : T20 ವಿಶ್ವಕಪ್​ಗೆ ಮೂವರು ವೇಗಿಗಳನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್
Virender Sehwag
  • Share this:
ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಏಕದಿನ ಸರಣಿ ಸೋಲಿನ ಸೇಡನ್ನು ಕೊಹ್ಲಿ ಪಡೆ ತೀರಿಸಿಕೊಂಡಿದೆ. ಅಲ್ಲದೆ ಟಿ20 ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುಂಬುರುವ ಚುಟುಕು ಕ್ರಿಕೆಟ್ ಕದನಕ್ಕೆ ಸಕಲ ತಯಾರಿಯಲ್ಲಿದ್ದೇವೆ ಎಂಬುದನ್ನು ಸಾರಿದ್ದಾರೆ.

2021 ರಲ್ಲಿ ಭಾರತದಲ್ಲೇ ಟಿ20 ವಿಶ್ವಕಪ್ ನಡೆಯಲಿದ್ದು, ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮಹತ್ವ ಪಡೆದುಕೊಂಡಿತ್ತು. ಈ ವೇಳೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವತ್ತ ಆಯ್ಕೆಗಾರರು ಕೂಡ ಗಮನ ಹರಿಸಿದ್ದರು. ಇತ್ತ ಪ್ರಸ್ತುತ ತಂಡದಲ್ಲಿರುವ ಯಾವ ವೇಗಿಗಳು ಟಿ20 ವಿಶ್ವಕಪ್ ತಂಡದಲ್ಲಿರಬೇಕು ಎಂಬುದನ್ನು ವಿರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ ಟೀಮ್ ಇಂಡಿಯಾದಲ್ಲಿ ಜಸ್‌ಪ್ರಿತ್‌ ಬುಮ್ರಾ ಹಾಗೂ ಭುವನೇಶ್ವರ್‌ ಕುಮಾರ್ ಆಡಲಿರುವುದು ಖಚಿತ ಎಂದಿರುವ ಸೆಹ್ವಾಗ್, ಮೂರನೇ ವೇಗಿಯಾಗಿ ಟಿ ನಟರಾಜನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ನಟರಾಜನ್ ಅವರಿದ್ದರೆ ಟಿ20 ವಿಶ್ವಕಪ್​ನಲ್ಲಿ ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿರಲಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಹಲವು ಬೌಲರ್‌ಗಳು ದುಬಾರಿಯಾದರೂ, ಎಡಗೈ ವೇಗಿ ನಟರಾಜನ್ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಅವರನ್ನು ಆರಿಸಿಕೊಳ್ಳುವುದು ಉತ್ತಮ. ಏಕೆಂದರೆ ಅವರು ನಿಧಾನಗತಿಯ ಎಸೆತ, ಯಾರ್ಕರ್ ಎಸೆತ ಹಾಗೂ ಲೆಂಗ್ತ್ ಎಸೆತಗಳನ್ನು ಎಸೆಯುವಲ್ಲಿ ನಿಪುಣರು. ಆಸ್ಟ್ರೇಲಿಯಾ ವಿರುದ್ಧ ಸರಣಿ ಅವರ ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ವಿರೇಂದ್ರ ಸೆಹ್ವಾಗ್ ತಿಳಿಸಿದರು.

ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
Published by: zahir
First published: December 8, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories