Irfan-Harbhajan: ಕಾಲಿವುಡ್​ನಲ್ಲಿ ಖಾತೆ ತೆರೆಯಲಿರುವ ಕ್ರಿಕೆಟ್​ ಕಲಿಗಳು: ಬಣ್ಣದ ಲೋಕಕ್ಕೆ ಇರ್ಫಾನ್​-ಹರ್​ಭಜನ್​ ಸಿಂಗ್​

Vikram 58: ಮೈದಾನದಲ್ಲಿ ಅಬ್ಬರಿಸುತ್ತಿದ್ದ ಈ ಕ್ರಿಕೆಟ್ ಕಲಿಗಳು ಈಗ ಬೆಳ್ಳಿತೆರೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ. ಬ್ಯಾಟ್​ ಹಿಡಿದು ಮೈದಾನದಲ್ಲಿ ಎದುರಾಳಿದ ಬೆವರಿಳಿಸುತ್ತಿದ್ದ ಆಟಗಾರರು ಇನ್ನು ಹಾಡುಗಳ ಬೀಟ್​ಗೆ ಸ್ಟೆಪ್​ ಹಾಕಲಿದ್ದಾರೆ.

ತಮಿಳು ಸಿನಿಮಾದಲ್ಲಿ ಇರ್ಫಾನ್​ ಹಾಗೂ ಹರ್​ಭಜನ್​

ತಮಿಳು ಸಿನಿಮಾದಲ್ಲಿ ಇರ್ಫಾನ್​ ಹಾಗೂ ಹರ್​ಭಜನ್​

  • Share this:
ಚೆನ್ನೈ ಸೂಪರ್​ ಕಿಂಗ್ಸ್​ಗೆ ಆಡುತ್ತಿದ್ದ ಇರ್ಫಾನ್​ ಪಠಾಣ್​ ಹಾಗೂ ಹರ್​ಭಜನ್​ ಸಿಂಗ್​ ಸದ್ಯ ಕಾಲಿವುಡ್​ನಲ್ಲಿ ಡಬ್ಯು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಇಬ್ಬರು ಕ್ರಿಕೆಟ್​ಗಳು ಬೇರೆ ಬೇರೆ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ.

ಕಾಲಿವುಡ್​ ಸೂಪರ್​ ಸ್ಟಾರ್​  ವಿಕ್ರಮ್​ ಅಭಿನಯದ ಸಿನಿಮಾದಲ್ಲಿ ಇರ್ಫಾನ್​ ಪಠಾಣ್​ ಕಾಣಿಕೊಳ್ಳಲಿದ್ದಾರೆ. ಇನ್ನು ಹರ್​ಭಜನ್​ ಸಿಂಗ್​ ಸಂತಾನಮ್​ ಅವರ 'ಡಿಕ್ಕಿಲೋನಾ' ಸಿನಿಮಾದಲ್ಲಿ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

Harbhajan in Tamil Movie
'ಡಿಕ್ಕಿಲೋನಾ' ತಮಿಳು ಸಿನಿಮಾದಲ್ಲಿ ಹರ್​ಭಜನ್​ ಸಿಂಗ್​
ಪಕ್ಕಾ ಆ್ಯಕ್ಷನ್​ ಥ್ರಿಲ್ಲರ್​ 'ವಿಕ್ರಮ್​ 58' ಸಿನಿಮಾದಲ್ಲಿ ಇರ್ಫಾನ್​ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಜಯ್​ ಜ್ಞಾನಮುತ್ತು ಟ್ವಿಟರ್​ನಲ್ಲಿ ಟ್ವೀಟ್​ ಮೂಲಕ ಇರ್ಫಾನ್​ಗೆ ಸ್ವಾಗತ ಕೋರಿದ್ದಾರೆ.

ಇದನ್ನೂ ಓದಿ: Darshan: ಡಿಬಾಸ್​ ದರ್ಶನ್​ ಕಾಲ್​ಶೀಟ್​ಗಾಗಿ ಕಾಯುತ್ತಿದ್ದಾರಂತೆ ಟಾಲಿವುಡ್​ನ ನಿರ್ದೇಶಕ..!

ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದಾಗಿ ಖುದ್ದು ಇರ್ಫಾನ್​ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ವಿಕ್ರಮ್​ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಬರೆದುಕೊಂಡಿದ್ದಾರೆ.ವಿಕ್ರಮ್​ ಅಭಿನಯದ ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಿದ್ದು, ಪ್ರಿಯಾ ಭವಾನಿ ನಾಯಕಿಯಾಗಲಿದ್ದಾರಂತೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅಜಯ್​ ಜ್ಞಾನಮುತ್ತು ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.

Sonam Kapoor: ಮಾಲ್ಡೀವ್ಸ್​ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೋನಮ್ ಕಪೂರ್​
First published: