41 ಎಸೆತಗಳಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್​ಮನ್​ ಶತಕ; 120 ಎಸೆತಗಳಲ್ಲಿ ಹರಿದು ಬಂದ ರನ್​ ಎಷ್ಟು ಗೊತ್ತಾ?

ಸ್ಕಾಟ್ಲೆಂಡ್ ಪರ ಜಾರ್ಜ್​ ಮನ್ಸಿ ಹಾಗೂ ಕ್ಯಾಲ್ ಕೋಟ್ಜರ್ ದ್ವಿಶತಕದ ಕಾಣಿಕೆ ನೀಡಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ಜೊತೆಯಾಟ ಆಡಿದ ಮೂರನೇ ಜೋಡಿ ಎನಿಸಿಕೊಂಡರು.

Vinay Bhat | news18-kannada
Updated:September 17, 2019, 10:18 AM IST
41 ಎಸೆತಗಳಲ್ಲಿ ಸ್ಕಾಟ್ಲೆಂಡ್ ಬ್ಯಾಟ್ಸ್​ಮನ್​ ಶತಕ; 120 ಎಸೆತಗಳಲ್ಲಿ ಹರಿದು ಬಂದ ರನ್​ ಎಷ್ಟು ಗೊತ್ತಾ?
ಸ್ಕಾಟ್ಲೆಂಡ್ ಬ್ಯಾಟ್ಸ್ಮನ್ ಜಾರ್ಜ್ ಮನ್ಸಿ
  • Share this:
ಬೆಂಗಳೂರು (ಸೆ. 17): ಐರ್ಲೆಂಡ್​ನಲ್ಲಿ ಸಾಗುತ್ತಿರುವ ತ್ರಿಕೋನ ಟಿ-20 ಸರಣಿಯಲ್ಲಿ ನೆದರ್ಲೆಂಡ್​ ವಿರುದ್ಧ ಅಬ್ಬರಿಸಿದ ಸ್ಕಾಟ್ಲೆಂಡ್ ಬ್ಯಾಟ್ಸ್​ಮನ್​ಗಳು 58 ರನ್​ಗಳ ಜಯ ಸಾಧಿಸಿದೆ. ಸ್ಕಾಟ್ಲೆಂಡ್ ಬ್ಯಾಟ್ಸ್​​ಮನ್​​ ಜಾರ್ಜ್​ ಮನ್ಸಿ ಶತಕ ಸಿಡಿಸಿ ಅಬ್ಬರಿಸಿದರೆ ಇಡೀ ಪಂದ್ಯದಲ್ಲಿ 446 ರನ್ ಹರಿದುಬಂತು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಸ್ಕಾಟ್ಲೆಂಡ್​ ಆರಂಭದಿಂದಲೇ ಸ್ಫೋಟಕ ಆರಂಭ ಪಡೆದುಕೊಂಡಿತು. ಜಾರ್ಜ್​ ಮನ್ಸಿ ಹಾಗೂ ನಾಯಕ ಕ್ಯಾಲ್ ಕೋಟ್ಜರ್ ಮನಬಂದಂತೆ ಬ್ಯಾಟ್ ಬೀಸಿದರು.

ನೆದರ್ಲೆಂಡ್ ಬೌಲರ್​ಗಳ ಬೆವರಿಳಿಸಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಮೊದಲ ವಿಕೆಟ್​ಗೆ ಈ ಜೋಡಿ ಬರೋಬ್ಬರು 200 ರನ್​ಗಳ ದಾಖಲೆಯ ಜೊತೆಯಾಟ ಆಡಿದರು. ಅದುಕೂಡ ಕೇವಲ 15 ಓವರ್​ಗಳಲ್ಲಿ.

ಟಿ-20ಯಲ್ಲಿ 200ಕ್ಕೂ ಅಧಿಕ ರನ್ ಚಚ್ಚುವ ಗುರಿ; ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಟ್ಟ ಕೊಹ್ಲಿ

ಕ್ಯಾಲ್ ಕೋಟ್ಜರ್ 50 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 89 ರನ್​ಗೆ 16ನೇ ಓವರ್​​ನ ಮೊದಲ ಎಸೆತದಲ್ಲಿ ಔಟ್ ಆದರು. ಇತ್ತ 41 ಎಸೆತಗಳಲ್ಲಿ ಜಾರ್ಜ್​ ಮನ್ಸಿ  ಚೊಚ್ಚಕ ಶತಕ ಬಾರಿಸಿದರು.

ಕೊನೆಯ 4 ಓವರ್​ನಲ್ಲಿ ಸಿಡಿದೆದ್ದ ಮನ್ಸಿ ಸಿಕ್ಸ್​ ಮೇಲೆ ಸಿಕ್ಸ್ ಚಚ್ಚಿದರು. ಪರಿಣಾಮ ಸ್ಕಾಟ್ಲೆಂಡ್ 20 ಓವರ್​ಗೆ 3 ವಿಕೆಟ್ 252 ರನ್ ಗಳಿಸಿತು. ಮೆಸ್ಸಿ ಕೇವಲ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 14 ಸಿಕ್ಸರ್​​ನೊಂದಿಗೆ ಅಜೇಯ 127 ರನ್ ಗಳಿಸಿದರು.

 


253 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ನೆದರ್ಲೆಂಡ್ ಆರಂಭದಲ್ಲೇ ಎಡವಿತು. ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಪೀಟರ್ ಸೀಲರ್ ಹಾಗೂ ಸ್ಕಾಟ್ ಎಡ್ವರ್ಡ್ಸ್​​ ಒಂದು ಹಂತದಲ್ಲಿ ಗೆಲುವಿಗೆ ಕಠಿಣ ಹೋರಾಟ ನಡೆಸಿದರಾದರು ಅದು ಯಶಸ್ವಿ ಆಗಲಿಲ್ಲ. ಸೀಡರ್ ಸ್ಫೋಟಕ ಬ್ಯಾಟಿಂಗ್​ಗೆ ಉಳಿದ ಬ್ಯಾಟ್ಸ್​ಮನ್​ಗಳು ಸಾತ್ ನೀಡಲಿಲ್ಲ.

ಎಡ್ವರ್ಡ್ಸ್​​ 19 ಎಸೆತಗಳಲ್ಲಿ 37 ರನ್ ಗಳಿಸಿದ್ದು ಬಿಟ್ಟರೆ, ನಾಯಕ ಸೀಡರ್ 49 ಎಸೆತಗಳಲ್ಲಿ 96 ರನ್ ಬಾರಿಸಿ ಅಜೇಯರಾಗಿ ಉಳಿದರಷ್ಟೆ. ಅಂತಿಮವಾಗಿ ನೆದರ್ಲೆಂಡ್ 20 ಓವರ್​ಗೆ 7 ವಿಕೆಟ್ ಕಳೆದುಕೊಂಡು 194 ರನ್ ಗಳಿಸಲಷ್ಟೆ ಶಕ್ತವಾಯಿತು.

ಕೊಹ್ಲಿ ತಿಂಗಳಿಗೆ ಕಟ್ಟುವ ಮನೆ ಬಾಡಿಗೆಯಲ್ಲಿ ಸಾಮಾನ್ಯರು ಹೊಸ ಮನೆಯನ್ನೇ ಖರೀದಿಸಬಹುದು!

ಸ್ಕಾಟ್ಲೆಂಡ್ 58 ರನ್​ಗಳ ಭರ್ಜರಿ ಜಯ ಸಾಧಿಸಿತು. ಜೊತೆಗೆ ಕೆಲ ದಾಖಲೆಗಳು ನಿರ್ಮಾಣವಾದವು. ಸ್ಕಾಟ್ಲೆಂಡ್ ಪರ ಜಾರ್ಜ್​ ಮನ್ಸಿ ಹಾಗೂ ಕ್ಯಾಲ್ ಕೋಟ್ಜರ್ ದ್ವಿಶತಕದ ಕಾಣಿಕೆ ನೀಡಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ಜೊತೆಯಾಟ ಆಡಿದ ಮೂರನೇ ಜೋಡಿ ಎನಿಸಿಕೊಂಡರು. ಅಲ್ಲದೆ ಟಿ-20 ಕ್ರಿಕೆಟ್ ಇತಿಹಾಸಲ್ಲೇ ದಾಖಲಾದ ಮೂರನೇ ಅತಿ ದೊಡ್ಡ ಮೊತ್ತ ಸ್ಕಾಟ್ಲೆಂಡ್ ಸಿಡಿಸಿದ 252 ರನ್ ಆಯಿತು.

First published: September 17, 2019, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading