• Home
  • »
  • News
  • »
  • sports
  • »
  • Cricket Schedule 2023: ಕ್ರಿಕೆಟ್​ ಪ್ರೇಮಿಗಳಿಗೆ ಈ ವರ್ಷ ಭರ್ಜರಿ ಹಬ್ಬ, ಇಲ್ಲಿದೆ 2023ರ ಜನವರಿ-ಡಿಸೆಂಬರ್​ ವರೆಗಿನ ಸಂಪೂರ್ಣ ವೇಳಾಪಟ್ಟಿ

Cricket Schedule 2023: ಕ್ರಿಕೆಟ್​ ಪ್ರೇಮಿಗಳಿಗೆ ಈ ವರ್ಷ ಭರ್ಜರಿ ಹಬ್ಬ, ಇಲ್ಲಿದೆ 2023ರ ಜನವರಿ-ಡಿಸೆಂಬರ್​ ವರೆಗಿನ ಸಂಪೂರ್ಣ ವೇಳಾಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Cricket Schedule 2023: ಹೊಸ ವರ್ಷ ಆರಂಭವಾಗಿದೆ. ಅದರಂತೆ ಕ್ರಿಕೆಟ್​ ಟೂರ್ನಿಗಳು ನಿಧಾನವಾಗಿ ಆರಂಭವಾಗಲಿದೆ. ಇದರ ಭಾಗವಾಗಿ ಡಿಸೆಂಬರ್ 3ರಿಂದ ಭಾರತ ಈ ವರ್ಷದ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಹಾಗಿದ್ದರೆ ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್ ಹೇಗಿದೆ ಎಂದು ನೋಡೋಣ ಬನ್ನಿ.

ಮುಂದೆ ಓದಿ ...
  • Share this:

2022 ಮುಗಿದಿದ್ದು, ಎಲ್ಲರೂ 2023ರ ಹೊಸ ವರ್ಷವನ್ನು (New Year 2023) ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. 2023 ಆರಂಭವಾಗುತ್ತಿದ್ದಂತೆ ಕ್ರಿಕೆಟ್ (Cricket) ಕೂಡ ಚುರುಕಿನಿಂದ ಶುರುವಾಗಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (PAK vs NZ) ತಂಡಗಳು ವರ್ಷದ ಎರಡನೇ ದಿನದಂದು ಅಂದರೆ ಜನವರಿ 2 ರಂದು ಮುಖಾಮುಖಿಯಾಗಲಿವೆ. ಇಬ್ಬರ ನಡುವೆ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಕರಾಚಿಯಲ್ಲಿ ನಡೆಯಲಿದೆ. ಮರುದಿನವೇ ಟೀಂ ಇಂಡಿಯಾ ಕೂಡ ಮೈದಾನಕ್ಕಿಳಿಯಲಿದ್ದು, ಟಿ20ಯಲ್ಲಿ ಶ್ರೀಲಂಕಾ (IND vs SL) ವಿರುದ್ಧ ಪೈಪೋಟಿ ನಡೆಸಲಿದೆ. ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇದರಿಂದ ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನ ಕ್ಯಾಲೆಂಡರ್ ಹೇಗಿದೆ ಎಂದು ನೋಡೋಣ ಬನ್ನಿ.


ಮಹತ್ವದ ಟೂರ್ನಿಗಳಿಗೆ ಈ ವರ್ಷ ಸಾಕ್ಷಿ:


ಜನವರಿ: 2023ರ ಆರಂಭವು ವಿಶ್ವಕಪ್‌ನೊಂದಿಗೆ ಪ್ರಾರಂಭವಾಗಲಿದೆ. ಈಗ ನೀವು ಯಾವ ವಿಶ್ವಕಪ್ ಎಂದು ಆಶ್ಚರ್ಯ ಪಡುತ್ತಿರಬೇಕು. ಹೌದು, ಜನವರಿಯಲ್ಲಿ ಮೊದಲ ಬಾರಿಗೆ ಮಹಿಳೆಯರ 19 ವರ್ಷದೊಳಗಿನವರ ವಿಶ್ವಕಪ್ ನಡೆಯಲಿದೆ. ಜನವರಿ 16 ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಈ ಟೂರ್ನಿಯ ಫೈನಲ್ ಜನವರಿ 29 ರಂದು ನಡೆಯಲಿದೆ. ಇದರಲ್ಲಿ ಭಾರತ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಲಿವೆ. ಹೀಗಾಗಿ ಈ ವರ್ಷ ವಿಶ್ವಕಪ್‌ನಿಂದ ಆರಂಭವಾಗುತ್ತಿದೆ.


ಫೆಬ್ರವರಿ: ಮಹಿಳೆಯರ ಅಂಡರ್-19 ವಿಶ್ವಕಪ್ ಮುಗಿದ ನಂತರ, ಮಹಿಳಾ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿಯೇ ನಡೆಯಲಿದೆ. ಪಂದ್ಯಾವಳಿಯು ಫೆಬ್ರವರಿ 10 ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ. ಟಿ20 ವಿಶ್ವ ಚಾಂಪಿಯನ್ ಆಗಲು ಟಾಪ್-10 ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಇನ್ನು 2 ತಿಂಗಳೊಳಗೆ ಕ್ರಿಕೆಟ್ ಅಭಿಮಾನಿಗಳಿಗೆ ಎರಡು ವಿಶ್ವಕಪ್ ವೀಕ್ಷಿಸುವ ಅವಕಾಶ ಸಿಗಲಿದೆ.


ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಟೆಸ್ಟ್‌ಗಳ ಸರಣಿ ಫೆಬ್ರವರಿಯಲ್ಲಿಯೇ ಆರಂಭವಾಗಲಿದೆ. ಮೊದಲ ಟೆಸ್ಟ್ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ನಡೆಯಲಿದೆ. ಒಂದು ವೇಳೆ ಭಾರತ ಈ ಟೆಸ್ಟ್ ಸರಣಿಯನ್ನು ದೊಡ್ಡ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಈಗಾಗಲೇ ಅಂತಿಮ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.


ಇದನ್ನೂ ಓದಿ: IND vs SL 2023: ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಆರಂಭಿಸುವವರು ಯಾರು? 3 ಆಟಗಾರರ ನಡುವೆ ಬಿಗ್​ ಫೈಟ್​


ಮಾರ್ಚ್: ಭಾರತ-ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್-ಶ್ರೀಲಂಕಾ ನಡುವೆ ಟೆಸ್ಟ್ ಸರಣಿಗಳು ನಡೆಯಲಿವೆ. ಈ ಸಂಪೂರ್ಣ ಟೆಸ್ಟ್ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಡಿಯಲ್ಲಿ ನಡೆಯಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ಈ ಸರಣಿ ಮಹತ್ವದ್ದಾಗಿದೆ. ಏಕೆಂದರೆ ಈ ಎರಡೂ ತಂಡಗಳು WTC ಫೈನಲ್‌ನ ರೇಸ್‌ನಲ್ಲಿ ಉಳಿದಿವೆ. ಇದಲ್ಲದೇ ಮಾರ್ಚ್‌ನಲ್ಲಿ ಇಂಗ್ಲೆಂಡ್-ಬಾಂಗ್ಲಾದೇಶ ನಡುವೆ ಟಿ20 ಹಾಗೂ ಏಕದಿನ ಸರಣಿಯೂ ನಡೆಯಲಿದೆ.


ಏಪ್ರಿಲ್: IPL ನಿಂದಾಗಿ ಈ ತಿಂಗಳು ಅಂತರರಾಷ್ಟ್ರೀಯ ಕ್ರಿಕೆಟ್ ಕಡಿಮೆ ಇರುತ್ತದೆ. ಶ್ರೀಲಂಕಾ-ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ-ನ್ಯೂಜಿಲೆಂಡ್ ನಡುವೆ ಟಿ20 ಮತ್ತು ಏಕದಿನ ಸರಣಿ ಮಾತ್ರ ನಡೆಯಲಿದೆ.


ಜೂನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಜೂನ್‌ನಲ್ಲಿ ನಡೆಯಲಿದೆ. ಇದಲ್ಲದೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆ್ಯಶಸ್ ಸರಣಿ ಆರಂಭವಾಗಲಿದೆ.


ಜುಲೈ-ಆಗಸ್ಟ್: ಭಾರತೀಯ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಉಭಯ ದೇಶಗಳ ನಡುವೆ 2 ಟೆಸ್ಟ್‌ಗಳ ಹೊರತಾಗಿ ಮೂರು ODI ಹಾಗೂ T20 ಸರಣಿಗಳು ನಡೆಯಲಿವೆ. ದಿನಾಂಕ ಮತ್ತು ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ.


ಸೆಪ್ಟೆಂಬರ್: ಏಷ್ಯಾ ಕಪ್ ನಡೆಯಲಿದ್ದು, ಇದರ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಟೂರ್ನಿಯಲ್ಲಿ ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ಏಕದಿನ ಮಾದರಿಯಲ್ಲಿ ನಡೆಯಲಿವೆ. ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಭಾರತ ಪ್ರವಾಸವನ್ನು ಸಹ ಪ್ರಸ್ತಾಪಿಸಲಾಗಿದೆ. ಉಭಯ ದೇಶಗಳ ನಡುವೆ 3 ಏಕದಿನ ಪಂದ್ಯಗಳು ನಡೆಯಲಿವೆ.


ಅಕ್ಟೋಬರ್-ನವೆಂಬರ್: ಈ ಎರಡು ತಿಂಗಳಲ್ಲಿ ಭಾರತದಲ್ಲಿ ODI ವಿಶ್ವಕಪ್ ನಡೆಯಲಿದೆ. ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ನವೆಂಬರ್‌ನಲ್ಲಿ ಟಿ20 ಸರಣಿ ಆಡಲು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಬಹುದು.


ಡಿಸೆಂಬರ್: ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಉಭಯ ದೇಶಗಳ ನಡುವೆ 2 ಟೆಸ್ಟ್, 3 ODI ಮತ್ತು 3 T20 ಪಂದ್ಯಗಳು ನಡೆಯಲಿವೆ.

Published by:shrikrishna bhat
First published: