MI Skipper Spotted in Pakistan| ಸಸ್ತಾ ರೋಹಿತ್ ಶರ್ಮಾ; ಪಾಕಿಸ್ತಾನದಲ್ಲಿ ಕಾಣಿಸಿಕೊಂಡರಾ ಮುಂಬೈ ಇಂಡಿಯನ್ಸ್​ ನಾಯಕ?

ಫೋಟೋದಲ್ಲಿ, ಗಡ್ಡವನ್ನು ಹೊಂದಿರುವ ವ್ಯಕ್ತಿಯು ಸ್ಟಾಲ್ ಪಕ್ಕದಲ್ಲಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಈತ ನೋಡಲು ರೋಹಿತ್ ಶರ್ಮಾನಂತೆಯೇ ಇದ್ದು ನೆಟ್ಟಿಗರು ಈ ಫೋಟೋಗೆ ಉಲ್ಲಾಸದಿಂದ ಪ್ರತಿಕ್ರಿಯಿಸಿದ್ದಾರೆ.

ರೋಹಿತ್ ಶರ್ಮಾ ಹೋಲುವ ವ್ಯಕ್ತಿ.

ರೋಹಿತ್ ಶರ್ಮಾ ಹೋಲುವ ವ್ಯಕ್ತಿ.

 • Share this:
  ಸಿನಿಮಾ-ಕ್ರಿಕೆಟ್​ ಸೆಲೆಬ್ರಿಟಿಗಳಂತೆಯೇ ಕಾಣುವ ಕೆಲ ವ್ಯಕ್ತಿಗಳ ಫೋಟೋಗಳು ಇತ್ತೀಚೆಗೆ  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದು ಕಾಮನ್ ಆಗಿದೆ. ಕ್ರಿಕೆಟರ್ ರೋಹಿತ್ ಶರ್ಮಾ (Rohit Sharma) ಸಹ ಇದಕ್ಕೆ ಹೊರತಾಗಿಲ್ಲ. ಇತ್ತೀಚೆಗೆ ರೋಹಿತ್ ಶರ್ಮಾ ನಂತೆಯೇ ಹೋಲುವ ವ್ಯಕ್ತಿಯೊಬ್ಬ ಪಾಕಿಸ್ತಾನದ ರಾವಲ್ಪಿಂಡಿ ಯಲ್ಲಿ (Rawalpindi) ಶರ್ಬತ್ ಕುಡಿಯುವ ಪೋಟೋ ಸಾಕಷ್ಟು ವೈರಲ್ ಆಗಿದೆ.  ಟ್ವಿಟರ್ ಬಳಕೆದಾರ ಶಿರಾಜ್ ಹಸನ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಅದಕ್ಕೆ ಶೀರ್ಷಿಕೆ ನೀಡಿರುವ ಆತ, "ಅಂತಾರಾಷ್ಟ್ರೀಯ ಕ್ರಿಕೆಟಿಗರು ಭೇಟಿ ಮಾಡಲು ಪಾಕಿಸ್ತಾನ ಸುರಕ್ಷಿತವಲ್ಲ ಎಂದು ಯಾರು ಹೇಳಿದರು? ಇಲ್ಲಿದೆ ನೋಡಿ ರಾವಲ್ಪಿಂಡಿಯ ಸದ್ದಾರ್‌ನಲ್ಲಿ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಶರ್ಬತ್ ಅನ್ನು ಆನಂದಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ.  ಫೋಟೋದಲ್ಲಿ, ಗಡ್ಡವನ್ನು ಹೊಂದಿರುವ ವ್ಯಕ್ತಿಯು ಸ್ಟಾಲ್ ಪಕ್ಕದಲ್ಲಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಈತ ನೋಡಲು ರೋಹಿತ್ ಶರ್ಮಾನಂತೆಯೇ ಇದ್ದು ನೆಟ್ಟಿಗರು ಈ ಫೋಟೋಗೆ ಉಲ್ಲಾಸದಿಂದ ಪ್ರತಿಕ್ರಿಯಿಸಿದ್ದಾರೆ.  ಪಾಕಿಸ್ತಾನವನ್ನು ಸುಲಭವಾಗಿ ಡೊಪೆಲ್‌ಗ್ಯಾಂಜರ್‌ಗಳ ಹಾಟ್‌ಸ್ಪಾಟ್ ಎಂದು ಪರಿಗಣಿಸಬಹುದು. ಏಕೆಂದರೆ ಈ ತಿಂಗಳ ಆರಂಭದಲ್ಲಿ, ನೆಟ್​ಫ್ಲಿಕ್ಸ್​ ಮನಿ ಹೀಸ್ಟ್ ಪಾತ್ರಧಾರಿಯಾದ ದಿ ಪ್ರೊಫೆಸರ್​ ಪಾಕಿಸ್ತಾನದ ಅಂಗಡಿಯಲ್ಲಿ ದಿನಸಿ ಮಾರಾಟ ಮಾಡುತ್ತಿರುವಂತಹ ಪೋಟೋ ವೈರಲ್ ಆಗಿತ್ತು.

  ನ್ಯೂಸ್ 18 ಸ್ವತಂತ್ರವಾಗಿ ಫೋಟೋವನ್ನು ಪರಿಶೀಲಿಸಲು ಸಾಧ್ಯವಾಗದಿದ್ದರೂ, ಕೌಂಟರ್‌ನ ಹಿಂದಿನ ಐಟಂಗಳು ಮತ್ತು ಫೋಟೋದಲ್ಲಿ ಬಳಸಲಾದ ಭಾಷೆ ಪಾಕಿಸ್ತಾನದಲ್ಲಿರುವ ಸ್ಥಳವನ್ನು ಸೂಚಿಸುತ್ತವೆ.
  Published by:MAshok Kumar
  First published: