ಸರ್ಫರಾಜ್​ನನ್ನು ನಾಯಕತ್ವದಿಂದ ಕಿತ್ತೆಸೆದ ಪಾಕಿಸ್ತಾನ; ಹೊಸ ಕ್ಯಾಪ್ಟನ್ ಯಾರು?

ಸದ್ಯದಲ್ಲೇ ಪಿಸಿಬಿ ಏಕದಿನ ಕ್ರಿಕೆಟ್​ನಿಂದಲೂ ಸರ್ಫರಾಜ್​ನನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ.

Vinay Bhat | news18-kannada
Updated:October 18, 2019, 3:46 PM IST
ಸರ್ಫರಾಜ್​ನನ್ನು ನಾಯಕತ್ವದಿಂದ ಕಿತ್ತೆಸೆದ ಪಾಕಿಸ್ತಾನ; ಹೊಸ ಕ್ಯಾಪ್ಟನ್ ಯಾರು?
ಇನ್ನು ಅಚ್ಚರಿಯ ವಿಷಯವೆಂದರೆ ಏಷ್ಯಾ ಇಲೆವೆನ್​ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಅವಕಾಶ ನೀಡಲಾಗಿರುವುದು.
  • Share this:
ಬೆಂಗಳೂರು (ಅ. 18): ಅಚ್ಚರಿಯ ಬೆಳವಣಿಗೆ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​​ ಸರ್ಫರಾಜ್ ಖಾನ್​ನನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿದೆ. ಟೆಸ್ಟ್​ ಹಾಗೂ ಟಿ-20 ತಂಡಕ್ಕೆ ಸರ್ಫರಾಜ್ ಬದಲು ಹೊಸ ನಾಯಕನ ಹೆಸರು ಘೋಷಣೆ ಮಾಡಿದೆ.

ಸರ್ಫರಾಜ್ ನಾಯಕತ್ವದಲ್ಲಿ ಪಾಕಿಸ್ತಾನ ವಿಶ್ವಕಪ್ ಸೇರಿದಂತೆ ಸತತ ಸೋಲಿನಿಂದ ಕಂಗೆಟ್ಟಿತ್ತು. ಹೀಗಾಗಿ ಈ ಬದಲಾವಣೆಗೆ ಮುಂದಾಗಿದೆ ಎನ್ನಲಾಗಿದೆ.

 


IND vs SA: ಅಂತಿಮ ಟೆಸ್ಟ್​ಗೆ ಟೀಂ ಇಂಡಿಯಾದಲ್ಲಿ ಎರಡು ಪ್ರಮುಖ ಬದಲಾವಣೆ?; ಸಂಭಾವ್ಯ ಪಟ್ಟಿ ಇಲ್ಲಿದೆ!

ಪಾಕಿಸ್ತಾನ ಟಿ-20 ತಂಡವನ್ನು ಬಾಬರ್ ಅಜಮ್ ಮುನ್ನಡೆಸಿದರೆ, ಟೆಸ್ಟ್​ಗೆ ಅಜರ್ ಅಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಾಬರ್ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಟಿ-20 ವರೆಗೆ ನಾಯಕನಾಗಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ಹೇಳಿದೆ.

ನವೆಂಬರ್ 3 ರಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆರಂಭಿಸಲಿದೆ. ಬಳಿಕ ನ. 21 ರಿಂದ ಎರಡು ಪಂದ್ಯಗಳ ಹೊನಲು- ಬೆಳಕಿನ ಟೆಸ್ಟ್​ ಸರಣಿ ಆಡಲಿದೆ.

"ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ನನ್ನ ಮೇಲೆ ನಂಬಿಕೆಯಿಟ್ಟು ಟೆಸ್ಟ್​ ನಾಯಕತ್ವ ನೀಡಿದೆ. ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಆಗಿರುವುದರಿಂದ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ" ಎಂದು ನೂತನ ಟೆಸ್ಟ್​ ನಾಯಕ ಅಜಲಿ ಅಲಿ ಹೇಳಿದರು.

 IND vs SA: ಭಾರತ-ಆಫ್ರಿಕಾ ಮೂರನೇ ಟೆಸ್ಟ್​ನಲ್ಲಿ ಕಾಣಿಸಿಕೊಳ್ಳಲಿರುವ ಎಂಎಸ್ ಧೋನಿ!

ಇನ್ನು ಟಿ-20 ನಾಯಕ ಬಾಬರ್, ನಂಬರ್ 1 ಟಿ-20 ತಂಡಕ್ಕೆ ನಾಯಕನಾಗಿರುವುದು ಖುಷಿ ನೀಡಿದೆ. ನಾನು ಚಾಲೆಂಜ್​ಗೆ ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಪಿಸಿಬಿ ಏಕದಿನ ಕ್ರಿಕೆಟ್​ನಿಂದಲೂ ಸರ್ಫರಾಜ್​ನನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಆಯ್ಕೆ ಬಗ್ಗೆ ಚಿಂತನೆ ನಡೆಸುತ್ತಿದೆ.
First published: October 18, 2019, 2:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading