Sanju Samson: ಭಾವನೆಗಳನ್ನು ನಿಯಂತ್ರಿಸುವುದು ಕಲಿತಿದ್ದು ಧೋನಿಯಿಂದ: ಸಂಜು ಸ್ಯಾಮ್ಸನ್
MS Dhoni: ರಾಷ್ಟ್ರೀಯ ತಂಡದಲ್ಲಿ ಆಡುವುದು ನಿಜಕ್ಕೂ ಅದ್ಭುತ ಅನುಭವ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ವಿಶ್ವಶ್ರೇಷ್ಠ ಆಟಗಾರರ ಅನುಭವ ಆಟಕ್ಕೆ ಸಹಕಾರಿಯಾಗುತ್ತದೆ ಎನ್ನುವುದು ಕೇರಳ ಮೂಲದ ಸ್ಯಾಮ್ಸನ್ ಮಾತು.
ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಒದ್ದಾಡುತ್ತಿರುವ ಯುವ ಆಟಗಾರ ಸಂಜು ಸ್ಯಾಮ್ಸನ್ ಸದ್ಯ ತಾವು ಸೋಲನ್ನು ಸ್ವೀಕರಿಸಿ ಮುನ್ನಡೆಯಲು ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ. ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಂಡು ಬ್ಯಾಟ್ ಮಾಡಲು ನನಗೆ ಹಿರಿಯ ಆಟಗಾರ ಧೋನಿ ಪ್ರೇರಣೆ. ಕರಿಯರ್ನ ಏಳು-ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ನನ್ನ ಸಾಮರ್ಥ್ಯದ ಕಡೆಗೆ ಹೆಚ್ಚಿನ ಗಮನಹರಿಸುತ್ತಿದ್ದೇನೆ ಎಂದು ಸ್ಯಾಮ್ಸನ್, ರಾಜಸ್ಥಾನ ರಾಯಲ್ಸ್ ಆಯೋಜಿಸಿದ್ದ ಪಾಡ್ಕಾಸ್ಡ್ನಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಆಡುವುದು ನಿಜಕ್ಕೂ ಅದ್ಭುತ ಅನುಭವ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ವಿಶ್ವಶ್ರೇಷ್ಠ ಆಟಗಾರರ ಅನುಭವ ಆಟಕ್ಕೆ ಸಹಕಾರಿಯಾಗುತ್ತದೆ ಎನ್ನುವುದು ಕೇರಳ ಮೂಲದ ಸ್ಯಾಮ್ಸನ್ ಮಾತು.
ಇನ್ನೂ ಸ್ಟೀವ್ ಸ್ಮಿತ್ ಜೊತೆಗೆ ನಾನು ಉತ್ತಮ ಗೆಳೆತನ ಹೊಂದಿದ್ದು, ಆತ ಸದ್ಯ ಶ್ರೇಷ್ಠ ಕ್ರಿಕೆಟಿಗ. ಸ್ಮಿತ್ ಜೊತೆಗೆ ಆಡವುದು ಹೆಚ್ಚಿನ ಖುಷಿ ಕೊಡುತ್ತದೆ. ನಾವಿಬ್ಬರೂ 'ಚಾಚು' ಅಂತಲೇ ಸಂಬೋಧಿಸಿಕೊಳ್ಳುತ್ತೇವೆ. ಬ್ರಾಡ್ ಹಾಡ್ಜ್, ಸ್ಮಿತ್ರನ್ನು 'ಚಾಚು' ಅಂತ ಕರೆಯುತ್ತಿದ್ದರು ಎಂದು ಸ್ಯಾಮ್ಸನ್ ವಿವರಿಸಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ