ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಧಾನದಲ್ಲಿ ತುಸು ಬದಲಾವಣೆ ಆಗಬೇಕು: ಸಂಜಯ್ ಮಂಜ್ರೇಕರ್

Sanjay Manjrekar on Virat Kohli: ವಿರಾಟ್ ಕೊಹ್ಲಿ ಫ್ರಂಟ್ ಫೂಟ್​ನಲ್ಲಿ ಹೆಚ್ಚು ಆಡಲು ಮುಂದಾಗುತ್ತಾರೆ. ಇದು ಅವರಿಗೆ ಸರಾಗವಾಗಿ ರನ್ ಗಳಿಸಲು ಅಡ್ಡಿ ಆಗುತ್ತಿದೆ ಎಂಬುದು ಸಂಜಯ್ ಮಂಜ್ರೇಕರ್ ಅವರ ಅಭಿಪ್ರಾಯವಾಗಿದೆ.

ಭಾರತೀಯ ಕ್ರಿಕೆಟಿಗರು

ಭಾರತೀಯ ಕ್ರಿಕೆಟಿಗರು

 • Share this:
  ನವದೆಹಲಿ, ಜ. 12: ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಕೇಪ್​ಟೌನ್​ನಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 79 ರನ್ ಗಳಿಸಿ ಭಾರತದ ಮಾನ ಕಾಪಾಡಿದ್ದು ಹೌದು. ಈ 79 ರನ್ ಗಳಿಸಲು ಅವರು ಬರೋಬ್ಬರಿ 201 ಎಸೆಗಳನ್ನ ತೆಗೆದುಕೊಂಡರು. ಅರ್ಧಶತಕ ದಾಟಲು 158 ಎಸೆತ ಬೇಕಾಯಿತು. ಇದು ಅವರ ವೃತ್ತಿ ಜೀವನದಲ್ಲಿ ಎರಡನೇ ಅತಿ ನಿಧಾನಗತಿ ಅರ್ಧಶತಕ ಎನಿಸಿದೆ. ಕೊಹ್ಲಿಯ ಈ ಆಟಕ್ಕೆ ಪ್ರಶಂಸೆಯ ಜೊತೆಗೆ ಕೆಲವರಿಂದ ಟೀಕೆಗಳೂ ಬಂದಿವೆ. ಕೊಹ್ಲಿ ಅನಗತ್ಯವಾಗಿ ಚೆಂಡುಗಳನ್ನ ವೇಸ್ ಮಾಡಿದರು. ಇಲ್ಲದಿದ್ದರೆ ಶತಕ ಭಾರಿಸಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರೂ ಕೂಡ ಇಂಥ ಅಭಿಪ್ರಾಯಗಳನ್ನ ಪಾಕ್ಷಿಕವಾಗಿ ಪುನರುಚ್ಚರಿಸಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ವಿಧಾನದಲ್ಲಿ ತುಸು ಬದಲಾವಣೆ ಆಗಬೇಕು ಎಂದು ಮಂಜ್ರೇಕರ್ ಸಲಹೆ ನೀಡಿದ್ದಾರೆ.

  ವಿರಾಟ್ ಕೊಹ್ಲಿ ಬಳಿ ಹಲವು ರೀತಿಯ ಸ್ಟ್ರೋಕ್​ಗಳಿವೆ. ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ಬಳಸಲು ಅವರ ಬಳಿ ಹಲವು ಶಾಟ್​ಗಳಿವೆ. ಇವುಗಳನ್ನ ಸಮರ್ಪಕವಾಗಿ ಬಳಸಿದರೆ 201 ಎಸೆತದಲ್ಲಿ ಕೊಹ್ಲಿ 130 ರನ್​ಗಳನ್ನ ಗಳಿಸಬಹುದಿತ್ತು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

  ವಿರಾಟ್ ಕೊಹ್ಲಿಗೆ ಸಲಹೆ ಕೊಡುವವರು ಅಗತ್ಯ:

  “ಸರ್ವಶ್ರೇಷ್ಠ ಕ್ರಿಕೆಟಿಗರಲ್ಲೊಬ್ಬರಾಗಿರುವ ವಿರಾಟ್ ಕೊಹ್ಲಿ ಅವರಿಗೆ ಹೀಗೆ ಬ್ಯಾಟ್ ಮಾಡಿ ಎಂದು ಯಾರು ಹೇಳಲು ಸಾಧ್ಯ ಎಂಬ ಮಾತನ್ನ ನಾನು ಒಪ್ಪುವುದಿಲ್ಲ. ರೋಜರ್ ಫೆಡರರ್ ಜೊತೆ ಒಬ್ಬ ಕೋಚ್ ಕೂಡ ಇರುತ್ತಾರೆ. ಆಟದಲ್ಲಿ ಸುಧಾರಣೆ ತರುವುದು ಹೇಗೆಂದು ಈ ಕೋಚ್ ಸಲಹೆ ಕೊಡುತ್ತಲೇ ಇರುತ್ತಾರೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಂದು ರೀತಿಯ ಮಾರ್ದದರ್ಶಿಯ ಅಗತ್ಯ ಇರುತ್ತದೆ” ಎಂದು ಮಂಜ್ರೇಕರ್ ಹೇಳಿದ್ದಾರೆ.

  ಇದನ್ನೂ ಓದಿ: U19 World Cup: ಕಿರಿಯರ ವಿಶ್ವಕಪ್ ವಾರ್ಮಪ್: ವಿಂಡೀಸ್, ಆಸೀಸ್ ಮಣಿಸಿದ ಟೀಮ್ ಇಂಡಿಯಾ

  “ವಿರಾಟ್ ಕೊಹ್ಲಿ ಬಳಿ ಇತರ ಶಾಟ್​ಗಳು ಇವೆ. ಸೂಕ್ತ ಜೊತೆಗಾರರು ಸಿಗದೇ ಹೋದ್ದರಿಂದ ವಿರಾಟ್ ಕೊಹ್ಲಿ ಶತಕವಂಚಿತರಾದರು ಎಂದು ಹೇಳುತ್ತಾರೆ. ಆದರೆ, ಹಳೆಯ ವಿರಾಟ್ ಕೊಹ್ಲಿ ಆಗಿದ್ದರೆ ಅವರು ಹಿಂದೆ ಬಳಸುತ್ತಿದ್ದ ಶಾಟ್​ಗಳನ್ನ ಬಳಸಿಕೊಂಡಿದ್ದರೆ ಅಷ್ಟೇ ಎಸೆತಗಳಲ್ಲಿ 130 ರನ್​ಗಳನ್ನ ಗಳಿಸುತ್ತಿದ್ದರು” ಎಂದಿದ್ದಾರೆ.

  ದ್ರಾವಿಡ್​ಗಿಂತ ಸೂಕ್ತ ವ್ಯಕ್ತಿ ಯಾರು?

  “ವಿರಾಟ್ ಕೊಹ್ಲಿ ಹಿಂದೆ ಎಷ್ಟು ಸರಾಗವಾಗಿ ರನ್ ಗಳಿಸುತ್ತಿದ್ದರು, ಅವರ ಹಿಂದಿನ ಆಟಗಳ ವಿಡಿಯೋ ತುಣುಕುಗಳನ್ನ ನೋಡುವಂತೆ ಅವರಿಗೆ ತಿಳಿಹೇಳಲು ರಾಹುಲ್ ದ್ರಾವಿಡ್​ಗಿಂತ ಸೂಕ್ತ ವ್ಯಕ್ತಿ ಯಾರಿದ್ಧಾರೆ? ಫ್ರಂಟ್ ಫೂಟ್​ಗೆ ಅವರು ಬೇಗನೇ ಕಮಿಟ್ ಆಗದೇ ಇರುವಂತೆ ತಿಳಿಹೇಳಬೇಕು” ಎಂಬುದು ಸಂಜಯ್ ಮಂಜ್ರೇಕರ್ ಅಭಿಮತ.

  ಅದೇನೇ ಆದರೂ ವಿರಾಟ್ ಕೊಹ್ಲಿ ಅವರ 79 ರನ್​ಗಳ ಸಂಯಮಭರಿತ ಇನ್ನಿಂಗ್ಸ್ ಅನ್ನು ಸಂಜಯ್ ಮಂಜ್ರೇಕರ್ ಮೆಚ್ಚಿಕೊಂಡಿದ್ಧಾರೆ. ಅವರ ಒಂದೇ ಆಕ್ಷೇಪ ಎಂದರೆ ಫ್ರಂಟ್ ಫೂಟ್​ನಲ್ಲಿ ಆಡುತ್ತಿದ್ದುದರಿಂದ ಕೊಹ್ಲಿಗೆ ಫ್ರೀ ಆಗಿ ಶಾಟ್ ಭಾರಿಸಲು ಆಗುತ್ತಿಲ್ಲ. ಬಹಳ ಡಿಫೆನ್ಸಿವ್ ಆಗಲು ಅದೇ ಕಾರಣ ಎಂಬುದು ಅವರ ಭಾವನೆ.

  ಇದನ್ನೂ ಓದಿ: IPL 2022: ಅಹ್ಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್; ಫೆ. 12-13ರಂದು ಐಪಿಎಲ್ ಹರಾಜು ಫಿಕ್ಸ್

  ಸಂಯಮದ ಕಟ್ಟೆ ಒಡೆಯಲಿಲ್ಲ:

  ವಿರಾಟ್ ಕೊಹ್ಲಿ ಅವರ ಇನ್ನಿಂಗ್ಸ್ ಸಾಂದರ್ಭಿಕವಾಗಿ ಬಹಳ ಸಂಯಮದಿಂದ ಕೂಡಿದ ಆಟವಾಗಿತ್ತು. ಅವರು ಹಿಂದೆ ಹಲವು ಬಾರಿ ಔಟಾಗಿದ್ದೆಲ್ಲಾ ಆಫ್​ಸೈಡ್​ನಲ್ಲಿ ಹೋಗುತ್ತಿದ್ದ ಬಾಲ್​ಗಳನ್ನ ಕೆಣಕಿಯೇ. ಆದರೆ, ಈ ಪಂದ್ಯದಲ್ಲಿ ಅದೇನೇ ಆಗಲಿ ಆಫ್ ಸ್ಟಂಪ್ ಆಚೆ ಹೋಗುವ ಬಾಲ್​ಗಳನ್ನ ಆಡಲೇಬಾರದೆಂದು ನಿರ್ಧರಿಸಿ ಕೊಹ್ಲಿ ಕ್ರೀಸ್​ಗೆ ಕಾಲಿಟ್ಟಂತಿತ್ತು.

  ಪ್ರಚಂಡ ವೇಗಿ ಕಗಿಸೊ ರಬಡ ಅವರು ಕೊಹ್ಲಿಯ ದೌರ್ಬಲ್ಯವನ್ನ ಅರಿತು ಆಫ್​ಸೈಡ್ ಆಚೆ ಔಟ್​ಸ್ವಿಂಗ್ ಎಸೆತಗಳನ್ನ ಸತತವಾಗಿ ಹಾಕುತ್ತಲೇ ಇದ್ದರು. ಆದರೆ, ಶತಾಯಗತಾಯ ಕೊಹ್ಲಿ ಅಂಥ ಎಸೆತಗಳನ್ನ ಟಚ್ ಮಾಡುವ ಗೋಜಿಗೂ ಹೋಗಲಿಲ್ಲ. ತಮ್ಮ ಬ್ಯಾಟಿಂದ ಹೆಚ್ಚು ರನ್ ಹರಿದುಬರುವುದು ನಿಂತುಹೋದರೂ ಕೊಹ್ಲಿಯ ಸಂಯಮದ ಕಟ್ಟೆ ಒಡೆಯಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
  Published by:Vijayasarthy SN
  First published: