KL Rahul: ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಅಪಸ್ವರ
ಟೀಮ್ ಇಂಡಿಯಾದಲ್ಲಿ ಉತ್ತಮ ಪ್ರದರ್ಶನವನ್ನು ನಿಡುತ್ತಾರೋ ಇಲ್ಲವೋ ಎಂಬುದು ಸದ್ಯದ ಮಾತಲ್ಲ. ಆದರೆ ಇಂತಹ ಆಯ್ಕೆಗಳು ರಣಜಿ ಆಟಗಾರರಿಗೆ ಭಾರೀ ನಿರಾಸೆಯನ್ನು ಉಂಟು ಮಾಡುತ್ತದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
news18-kannada Updated:October 28, 2020, 3:08 PM IST

KL Rahul
- News18 Kannada
- Last Updated: October 28, 2020, 3:08 PM IST
ಆಸ್ಟ್ರೇಲಿಯಾ ವಿರುದ್ಧ ಸರಣಿಗಾಗಿ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ಏಕದಿನ, ಟಿ20 ತಂಡಗಳಿಗೆ ಕನ್ನಡಿಗ ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ತಂಡಕ್ಕೂ ಕೆಎಲ್ಆರ್ ಮರಳಿದ್ದಾರೆ. ಆದರೆ ರಾಹುಲ್ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಪಸ್ವರ ಎತ್ತಿದ್ದಾರೆ.
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ರಾಹುಲ್ ನಿಜಕ್ಕೂ ಅದೃಷ್ಟಶಾಲಿ ಎಂದಿರುವ ಮಂಜ್ರೇಕರ್, ಆತನನ್ನು ಸೀಮಿತ ಓವರ್ಗಳ ಪಂದ್ಯಗಳಲ್ಲಿ ಹಾಗೂ ಐಪಿಎಲ್ನಲ್ಲಿ ರಾಹುಲ್ ಪ್ರದರ್ಶನವನ್ನು ನೋಡಿ ಈ ಆಯ್ಕೆಯನ್ನು ಮಾಡಲಾಗಿದೆ. ಐಪಿಎಲ್ ಪ್ರದರ್ಶನದ ಮೇಲೆ ಟೆಸ್ಟ್ಗೆ ಆಯ್ಕೆಯಾದ ಈ ಹಿಂದಿನ ನಿರ್ದಶನ ಉತ್ತಮವಾಗಿಲ್ಲ. ಅದರಲ್ಲೂ ಆಟಗಾರರು ಕೊನೆಯ ಕೆಲ ಪಂದ್ಯಗಳಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಂಜ್ರೇಕರ್ ತಿಳಿಸಿದ್ದಾರೆ. ಇನ್ನು ಐಪಿಎಲ್ ಪ್ರದರ್ಶನದಿಂದ ಆಯ್ಕೆಯಾದ ಆಟಗಾರರು ಟೀಮ್ ಇಂಡಿಯಾದಲ್ಲಿ ಉತ್ತಮ ಪ್ರದರ್ಶನವನ್ನು ನಿಡುತ್ತಾರೋ ಇಲ್ಲವೋ ಎಂಬುದು ಸದ್ಯದ ಮಾತಲ್ಲ. ಆದರೆ ಇಂತಹ ಆಯ್ಕೆಗಳು ರಣಜಿ ಆಟಗಾರರಿಗೆ ಭಾರೀ ನಿರಾಸೆಯನ್ನು ಉಂಟು ಮಾಡುತ್ತದೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಅವರ ಕೊನೆಯ ಐದು ಟೆಸ್ಟ್ ಪಂದ್ಯಗಳ ಪ್ರದರ್ಶನ ಗಮನಿಸಿದರೆ, 46, 2, 9, 82, ಮತ್ತು 19 ರನ್ಗಳಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಟೆಸ್ಟ್ ಸರಣಿಯಲ್ಲಿ ಆರಂಭಿಕನಾಗಿ ಮೊದಲ ಆಯ್ಕೆ ಅಸಂಭವವಾಗಿದೆ ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೆಟ್ಟ ಪ್ರದರ್ಶನದ ನಂತರ ಟೆಸ್ಟ್ ತಂಡದಿಂದ ಹೊರಬಿದ್ದರು. ಆ ಬಳಿಕ ನ್ಯೂಜಿಲೆಂಡ್ 'ಎ' ತಂಡದ ವಿರುದ್ಧ ಭಾರತ 'ಎ' ತಂಡದಲ್ಲೂ ರಾಹುಲ್ ಆಯ್ಕೆಯಾಗಿರಲಿಲ್ಲ.
ಇದನ್ನೂ ಓದಿ: IPL 2020: ಬೆನ್ ಸ್ಟೋಕ್ಸ್ ಬೆರಳು ಮಡಚಿದ್ದರ ಹಿಂದಿದೆ ಮತ್ತೊಂದು ಕಹಾನಿ..!
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ರಾಹುಲ್ ನಿಜಕ್ಕೂ ಅದೃಷ್ಟಶಾಲಿ ಎಂದಿರುವ ಮಂಜ್ರೇಕರ್, ಆತನನ್ನು ಸೀಮಿತ ಓವರ್ಗಳ ಪಂದ್ಯಗಳಲ್ಲಿ ಹಾಗೂ ಐಪಿಎಲ್ನಲ್ಲಿ ರಾಹುಲ್ ಪ್ರದರ್ಶನವನ್ನು ನೋಡಿ ಈ ಆಯ್ಕೆಯನ್ನು ಮಾಡಲಾಗಿದೆ. ಐಪಿಎಲ್ ಪ್ರದರ್ಶನದ ಮೇಲೆ ಟೆಸ್ಟ್ಗೆ ಆಯ್ಕೆಯಾದ ಈ ಹಿಂದಿನ ನಿರ್ದಶನ ಉತ್ತಮವಾಗಿಲ್ಲ. ಅದರಲ್ಲೂ ಆಟಗಾರರು ಕೊನೆಯ ಕೆಲ ಪಂದ್ಯಗಳಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಮಂಜ್ರೇಕರ್ ತಿಳಿಸಿದ್ದಾರೆ.