• Home
 • »
 • News
 • »
 • sports
 • »
 • Sania Mirza- ಭಾರತ-ಪಾಕ್ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ? ಸಾನಿಯಾ ಕೊಟ್ಟ ಅಚ್ಚರಿ ಉತ್ತರ ಇದು

Sania Mirza- ಭಾರತ-ಪಾಕ್ ಪಂದ್ಯದಲ್ಲಿ ನಿಮ್ಮ ಬೆಂಬಲ ಯಾರಿಗೆ? ಸಾನಿಯಾ ಕೊಟ್ಟ ಅಚ್ಚರಿ ಉತ್ತರ ಇದು

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

India vs Pakistan match- ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪಂದ್ಯ ನಡೆದಾಗ ಯಾರನ್ನ ಬೆಂಬಲಿಸುತ್ತೀರಿ ಎಂಬುದು ಸಾನಿಯಾ ಮಿರ್ಜಾಗೆ ಅತಿ ಕಿರಿಕಿರಿ ಮಾಡುವ ಪ್ರಶ್ನೆ ಅಂತೆ. ಅಷ್ಟಕ್ಕೂ ಈ ಪ್ರಶ್ನೆಗೆ ಅವರು ಕೊಟ್ಟಿರೋ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು.

 • Share this:

  ಬೆಂಗಳೂರು: ಸಾನಿಯಾ ಮಿರ್ಜಾ (Indian Tennis Star Sania Mirza) ಭಾರತ ಕಂಡ ಅತ್ಯುತ್ತಮ ಮಹಿಳಾ ಟೆನಿಸ್ ತಾರೆ. ಪಾಕಿಸ್ತಾನದ ಕ್ರಿಕೆಟ್ ಸ್ಟಾರ್ ಶೋಯಬ್ ಮಲಿಕ್ (Pakistan Cricket All-rounder Shoaib Malik) ಅವರನ್ನ ಮದುವೆಯಾದಾಗಿನಿಂದಲೂ ಅವರನ್ನ ಕಾಡುತ್ತಾ ಬಂದಿರುವ ಪ್ರಮುಖ ಪ್ರಶ್ನೆ ಎಂದರೆ ನಿಮ್ಮ ಬೆಂಬಲ ಭಾರತಕ್ಕೋ ಅಥವಾ ಪಾಕಿಸ್ತಾನಕ್ಕೋ. ಪಾಕಿಸ್ತಾನದ ಸೊಸೆಯಾದರೂ ಸಾನಿಯಾ ಮಿರ್ಜಾ ಈಗಲೂ ಟೆನಿಸ್​ನಲ್ಲಿ ಭಾರತವನ್ನ ಪ್ರತಿನಿಧಿಸುತ್ತಾರೆ. ಆದರೆ, ಕ್ರಿಕೆಟ್ ವಿಚಾರಕ್ಕೆ ಬಂದರೆ ಅವರಿಗೆ ಎದುರಾಗುವುದು ಮೇಲಿನ ಬೆಂಬಲದ ಪ್ರಶ್ನೆ. ಭಾರತವಲ್ಲದ ತಂಡದ ಜೊತೆ ಪಾಕಿಸ್ತಾನದ ಪಂದ್ಯ ನಡೆದಾಗ ಸಾನಿಯಾ ಮಿರ್ಜಾ ಬೆಂಬಲ ಪಾಕಿಸ್ತಾನಕ್ಕೆ ಎಂಬುದು ನಿರ್ವಿವಾದ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆದಾಗ ಸಾನಿಯಾ ಮಿರ್ಜಾ ಬೆಂಬಲ ಯಾರಿಗೆ (Whom Sania Mirza support in India vs Pakistan match) ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಸಹಜವಾಗಿಯೇ ಕಾಡುವ ಪ್ರಶ್ನೆ.


  ಆದರೆ, ಮದುವೆಯಾದಾಗಿನಿಂದಲೂ ಈ ಪ್ರಶ್ನೆ ಕೇಳಿ ಕೇಳಿ ಸಾನಿಯಾ ಮಿರ್ಜಾಗೆ ರೋಸಿ ಹೋಗಿದೆಯಂತೆ. ಪಾಕಿಸ್ತಾನದ ಟಿವಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯಬ್ ಮಲಿಕ್ ಪಾಲ್ಗೊಂಡಿದ್ದರು. ಆಗ ಆಂಕರ್ ಅಹ್ಸಾನ್ ಖಾನ್ ಅವರು ಸಾನಿಯಾಗೆ ಪ್ರಶ್ನೆ ಹಾಕುತ್ತಾ, ನಿಮಗೆ ಒಬ್ಬ ಪತ್ರಕರ್ತರಾದವರು ಅಥವಾ ಆಂಕರ್ ಆದವರು ಕೇಳಬಹುದಾದ ಅತಿ ಕೆಟ್ಟ ಪ್ರಶ್ನೆ ಯಾವುದು ಎಂದು ಕೇಳಿದರು. ಅದಕ್ಕೆ ಸಾನಿಯಾ ಕೊಟ್ಟ ಉತ್ತರ ಇದು:


  “ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಡುವಾಗ ನಾನು ಯಾರನ್ನ ಬೆಂಬಲಿಸುತ್ತೇನೆ ಎಂಬುದು ನನ್ನನ್ನು ಯಾವಾಗಲೂ ಕೇಳುವ ಕೆಟ್ಟ ಮತ್ತು ಹಳಸಲು ಪ್ರಶ್ನೆ… ಆದ್ದರಿಂದ ಸ್ನೇಹಿತರೇ ಈ ಹಳಸಲು ಪ್ರಶ್ನೆಗೆ ನಾನು ಉತ್ತರ ಕೊಡಲು ಇಷ್ಟ ಪಡೋದಿಲ್ಲ” ಎನ್ನುತ್ತಾರೆ ಸಾನಿಯಾ.


  ಇದನ್ನೂ ಓದಿ: IPL 2022- ಐಪಿಎಲ್​ನಿಂದ ಕೆಎಲ್ ರಾಹುಲ್, ರಷೀದ್ ಖಾನ್ ಒಂದು ವರ್ಷ ನಿಷೇಧ? ಕಾರಣ ಇದು


  ಕಾಲೆಳೆದ ಶೋಯಬ್:


  ಟಿವಿ ಶೋನಲ್ಲಿ ಹೆಂಡತಿ ಸಾನಿಯಾ ಜೊತೆ ಪಾಲ್ಗೊಂಡಿದ್ದ ಶೋಯಬ್ ಮಲಿಕ್ ಈ ವಿಚಾರವನ್ನು ಅಷ್ಟಕ್ಕೇ ಬಿಡುವುದಿಲ್ಲ. “ಒಂದ್ನಿಮಿಷ…. ಇದು ಇಲ್ಲಿಗೇ ಮುಗಿದಿಲ್ಲ. ಭಾರತ ಮತ್ತು ಪಾಕಿಸ್ತಾನ ಆಡಿದಾಗ ನಿನ್ನ ಬೆಂಬಲ ಯಾರಿಗೆ ಇರುತ್ತದೆ?” ಎಂದು ಹೆಂಡತಿಯ ಕಾಲೆಳೆಯುತ್ತಾರೆ ಶೋಯಬ್.


  ಇದಕ್ಕೆ ಉತ್ತರವಾಗಿ ಸಾನಿಯಾ ಮಿರ್ಜಾ ಮರುಪ್ರಶ್ನೆ ಹಾಕುತ್ತಾರೆ: “ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಟೆನಿಸ್ ಪಂದ್ಯ ನಡೆದಾಗ ನೀವು ಯಾರ ಪರ ವಹಿಸುತ್ತೀರಿ?” ಎಂದು ಕೇಳುತ್ತಾರೆ.


  ಹೆಂಡತಿಯಿಂದ ಮರುಪ್ರಶ್ನೆ ನಿರೀಕ್ಷಿಸದ ಶೋಯಬ್, “ನನ್ನ ಬೆಂಬಲ ಖಂಡಿತವಾಗಿ ಹೆಂಡತಿಗೆ” ಎಂದು ಹೇಳುತ್ತಾರೆ. ಆದರೆ, ತಮ್ಮ ಮಾತು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳನ್ನ ರೊಚ್ಚಿಗೆಬ್ಬಿಸಬಹುದು ಎಂದು ಅನಿಸುತ್ತಲೇ ತಮ್ಮ ಮಾತಿಗೆ “ಹೆಂಡತಿಗೆ ಬೆಂಬಲ ಇದ್ದರೂ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ” ಎಂದು ಶೋಯಬ್ ಸೇರಿಸುತ್ತಾರೆ.


  ಇದನ್ನೂ ಓದಿ: '83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್


  ಕೋರ್ಟ್ ಕಟಕಟೆಯಲ್ಲಿ ಎದುರಾಳಿ ವಕೀಲರನ್ನ ಮಾತಿನ ಮೂಲಕ ಕಟ್ಟಿಹಾಕಿದ ನ್ಯಾಯವಾದಿಯಂತೆ ಸಾನಿಯಾ ಮಿರ್ಜಾ ಅವರು, “ನಂದೂ ಅದೇ ಉತ್ತರ…! ಮತ್ತೊಮ್ಮೆ ಈ ಪ್ರಶ್ನೆ ಕೇಳಬೇಡಿ” ಎಂದು ಹೇಳುತ್ತಾರೆ.


  ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಶೋಯಬ್ ಮಲಿಕ್ ತಮ್ಮ ಸ್ಟಾರ್ ಹೆಂಡತಿಯ ಮಾತಿನ ವರಸೆಗೆ ಬಗ್ಗದೇ, “ಸಮಯ ಸಿಕ್ಕಾಗೆಲ್ಲಾ ಈ ಪ್ರಶ್ನೆ ಕೇಳುತ್ತಲೇ ಇರುತ್ತೇನೆ” ಎಂದು ತಿಳಿಸಿದ್ಧಾರೆ.

  Published by:Vijayasarthy SN
  First published: