Sam Curran: ವಿರೋಚಿತ ಹೋರಾಟದೊಂದಿಗೆ ವಿಶ್ವ ದಾಖಲೆ ಬರೆದ ಸ್ಯಾಮ್ ಕರ್ರನ್..!

2016ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿಸ್ ವೋಕ್ಸ್ 92 ಎಸೆತಗಳಲ್ಲಿ ಅಜೇಯ 95 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು.

sam curran

sam curran

  • Share this:
    ಭಾರತ-ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಅಥವಾ ಭಾರತದ ವಿರುದ್ಧ ಇಂಗ್ಲೆಂಡ್ 7 ರನ್​ಗಳಿಂದ ವಿರೋಚಿತ ಸೋಲುಂಡಿದೆ ಎಂದೇ ಹೇಳಬಹುದು. ಏಕೆಂದರೆ ಒಂದು ಹಂತದಲ್ಲಿ ಭಾರತ ಪರ ವಾಲಿದ್ದ ಪಂದ್ಯವನ್ನು ಕಿತ್ತುಕೊಳ್ಳಲು ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರ್ರನ್ ತನ್ನೆಲ್ಲಾ ಪ್ರಯತ್ನ ನಡೆಸಿದ್ದರು. 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್ಸ್ ತಂಡದ ಮೊತ್ತವನ್ನು 200 ರಿಂದ 322 ಕ್ಕೆ ತಂದು ನಿಲ್ಲಿಸಿ ಟೀಮ್ ಇಂಡಿಯಾ ಆಟಗಾರರಲ್ಲಿ ನಡುಕ ಹುಟ್ಟಿಸಿದ್ದರು.

    ಅದರಲ್ಲೂ ಕೊನೆವರೆಗೂ ಏಕಾಂಗಿ ಹೋರಾಟ ನಡೆಸಿದ ಸ್ಯಾಮ್ 83 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 95 ರನ್​ ಬಾರಿಸಿದರು. ಈ ಮೂಲಕ ಅಂತಿಮ ಎಸೆತದವರೆಗೂ ಭಾರತದ ಗೆಲುವು ಕಸಿಯುವ ಪ್ರಬಲ ಪ್ರಯತ್ನ ಮಾಡಿದ್ದರು. ಈ ವಿರೋಚಿತ ಹೋರಾಟದ ಹೊರತಾಗಿಯೂ ತಂಡಕ್ಕೆ ಸರಣಿ ಗೆದ್ದುಕೊಡುವಲ್ಲಿ ಸ್ಯಾಮ್ ಕರ್ರನ್​ಗೆ ಸಾಧ್ಯವಾಗಿರಲಿಲ್ಲ.

    ಆದರೆ ತಮ್ಮ ಅಮೋಘ ಇನಿಂಗ್ಸ್​ ಮೂಲಕ ಸ್ಯಾಮ್ ಕರ್ರನ್ ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 95 ರನ್​ ಬಾರಿಸುವುದರೊಂದಿಗೆ 8ನೇ ಕ್ರಮಾಂಕದಲ್ಲಿ ಗರಿಷ್ಠ ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಈ ವಿಶ್ವ ದಾಖಲೆ ಇಂಗ್ಲೆಂಡ್ ಆಟಗಾರ ಕ್ರಿಸ್ ವೋಕ್ಸ್​ ಹೆಸರಿನಲ್ಲಿತ್ತು.

    2016ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕ್ರಿಸ್ ವೋಕ್ಸ್ 92 ಎಸೆತಗಳಲ್ಲಿ ಅಜೇಯ 95 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಇದೀಗ ಟೀಮ್ ಇಂಡಿಯಾ ವಿರುದ್ಧ ಕೇವಲ 83 ಎಸೆತಗಳಲ್ಲಿ 95 ರನ್ ಬಾರಿಸುವ ಮೂಲಕ ಸ್ಯಾಮ್ ಕರ್ರನ್ ಕ್ರಿಸ್ ವೋಕ್ಸ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
    Published by:zahir
    First published: