ಕ್ರೀಡೆ

  • associate partner
HOME » NEWS » Sports » CRICKET SAM CURRAN CREDITS STINT WITH MS DHONI LED CSK IN IPL 2020 FOR SOUTH AFRICA HEROICS ZP

Sam Curran: CSK ಪರ ಆಡಿದ್ದರಿಂದ ಉತ್ತಮ ಪ್ರದರ್ಶನ ನೀಡಿರುವೆ..!

ಯುಎಇನಲ್ಲಿ ನಡೆದ 13ನೇ ಸೀಸನ್​ ಐಪಿಎಲ್​ ಟೂರ್ನಿಯಲ್ಲಿ ಸಿಎಸ್​ಕೆ ಪರ ಕಣಕ್ಕಿಳಿದ ಸ್ಯಾಮ್ ಕರ್ರನ್ 13 ವಿಕೆಟ್ ಕಬಳಿಸಿದ್ದರು. ಅಲ್ಲದೆ 131.91ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿ ಉಪಯುಕ್ತ ಕಾಣಿಕೆ ನೀಡಿದ್ದರು.

news18-kannada
Updated:December 1, 2020, 3:30 PM IST
Sam Curran: CSK ಪರ ಆಡಿದ್ದರಿಂದ ಉತ್ತಮ ಪ್ರದರ್ಶನ ನೀಡಿರುವೆ..!
Sam Curran
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ನೀಡಿತ್ತು. ಆದರೆ ತಂಡದ ಸಮಾಧಾನಕರ ವಿಷಯ ಎಂದರೆ ಸ್ಯಾಮ್ ಕರ್ರನ್ ಅವರ ಪ್ರದರ್ಶನ. ಸಿಎಸ್​ಕೆ ಪರ ಆಲ್​ರೌಂಡರ್ ಪ್ರದರ್ಶನ ನೀಡಿದ ಇಂಗ್ಲೆಂಡ್ ಆಟಗಾರ ಕರ್ರನ್, ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡುತ್ತಿದ್ದಾರೆ. ಅದರಲ್ಲೂ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾದ ಪ್ರಮುಖ 3 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡ ಸ್ಯಾಮ್ ಕರ್ರನ್ 4 ಓವರ್​ನಲ್ಲಿ 28 ರನ್ ನೀಡಿ 3 ವಿಕೆಟ್ ಉರುಳಿಸಿದರು. ಈ ಪ್ರದರ್ಶನದ ಬಗ್ಗೆ ಮಾತನಾಡಿರುವ ಕರ್ರನ್, ಇಂತಹ ಉತ್ತಮ ಪ್ರದರ್ಶನಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವುದು ಎಂದಿದ್ದಾರೆ. ಸಿಎಸ್​ಕೆ ಪರ ಕಣಕ್ಕಿಳಿದಿರುವುದರಿಂದ ನನಗೆ ಹೆಚ್ಚಿನ ಅನುಕೂಲವಾಗಿದೆ. ಅದರ ಪ್ರತಿಫಲ ಎಂಬಂತೆ ಇದೀಗ ಉತ್ತಮ ಪ್ರದರ್ಶನ ಮೂಡಿ ಬರುತ್ತಿದೆ ಎಂದರು.

ನಾನು ಐಪಿಎಲ್​ನ್ನು ಆನಂದಿಸಿರುವೆ. ಈ ವೇಳೆ ಕಲಿತ ಅನೇಕ ಪಾಠಗಳು ನನ್ನ ಪ್ರದರ್ಶನವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಸಿಎಸ್​ಕೆ ತಂಡದ ಕೋಚ್‌ಗಳಿಂದ ಸಾಕಷ್ಟು ಕಲಿತಿರುವೆ. ಐಪಿಎಲ್ ಆಡಿದ ಬಳಿಕ ನನ್ನ ಆಟ ಸುಧಾರಿಸಿದೆ ಎಂದು ಭಾವಿಸುವೆ. ಇದರೊಂದಿಗೆ ಮತ್ತಷ್ಟು ಸುಧಾರಣೆ ತಂದುಕೊಳ್ಳಲು ಪ್ರಯತ್ನ ಮಾಡುವುದಾಗಿ ಸ್ಯಾಮ್ ಕರ್ರನ್ ತಿಳಿಸಿದರು.

ಯುಎಇನಲ್ಲಿ ನಡೆದ 13ನೇ ಸೀಸನ್​ ಐಪಿಎಲ್​ ಟೂರ್ನಿಯಲ್ಲಿ ಸಿಎಸ್​ಕೆ ಪರ ಕಣಕ್ಕಿಳಿದ ಸ್ಯಾಮ್ ಕರ್ರನ್ 13 ವಿಕೆಟ್ ಕಬಳಿಸಿದ್ದರು. ಅಲ್ಲದೆ 131.91ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್ ಬೀಸಿ ಉಪಯುಕ್ತ ಕಾಣಿಕೆ ನೀಡಿದ್ದರು.
Youtube Video

ಇದನ್ನೂ ಓದಿ:  ನಾನು ಬ್ಯಾಟಿಂಗ್ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ..!
Published by: zahir
First published: December 1, 2020, 3:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories