35 ವರ್ಷಗಳ ಬಳಿಕ ಟೀಂ ಇಂಡಿಯಾದಿಂದ ತನ್ನ ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ!


Updated:August 5, 2018, 9:29 AM IST
35 ವರ್ಷಗಳ ಬಳಿಕ ಟೀಂ ಇಂಡಿಯಾದಿಂದ ತನ್ನ ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ!

Updated: August 5, 2018, 9:29 AM IST
ಅಜಯ್​ ರಾಜ್​, ನ್ಯೂಸ್​ 18 ಕನ್ನಡ

ಇಂಗ್ಲೆಂಡ್​ ಎಜ್ಬೆಸ್ಟನ್​ ಟೆಸ್ಟ್​ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಐದು ಪಂದ್ಯಗಳ ಸೀರೀಸ್​ನಲ್ಲಿ 1-0 ಅಂತರವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾಗೆ ನಾಲ್ಕನೇ ಇನ್ನಿಂಗ್ಸ್​ನಲ್ಲಿ ಗೆಲ್ಲಲು 194 ರನ್​ಗಳ ಗುರಿ ನೀಡಲಾಗಿತ್ತು. ಆದರೆ ಕ್ಯಾಪ್ಟನ್​ ಕೊಹ್ಲಿಯ 51 ರನ್​ಹಗಳ ಅದ್ಭುತ ಪ್ರದರ್ಶನದ ಬಳಿಕವೂ ಇಡೀ ತಂಡವು 162 ರನ್​ಗಳಲ್ಲೇ ಸುಸ್ತಾಗಿ 31 ರನ್​ನಿಂದಾಗಿ ಸೋಲನುಭವಿಸಿದೆ.

ಇನ್ನು 92 ನ್​ ನೀಡಿ 5 ವಿಕೆಟ್(ಮೊದಲ ಇನ್ನಿಂಗ್​ಸ್ನಲ್ಲಿ 4 ವಿಕೆಟ್​)​ ಕಸಿದುಕೊಳ್ಳುವುದರೊಂದಿಗೆ, 87 ರನ್​(ಎರಡನೇ ಇನ್ನಿಂಗ್ಸ್​ನಲ್ಲಿ 63) ರನ್​ ಗಳಿಸಿ ಇಂಗ್ಲೆಂಡ್​ ತಂಡದ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದ 20 ವರ್ಷದ ಸ್ಯಾಮ್​ ಕುರನ್​ ಪಂದ್ಯದ ಹೀರೋ ಆಗಿದ್ದಾರೆ. ನಿಜ ಹೇಳಬೇಕೆಂದರೆ ಇಂಗ್ಲೆಂಡ್​ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 87 ರನ್​ ಗಳಿಸುವಷ್ಟರಲ್ಲಿ 7 ವಿಕೆಟ್​ ಕಳೆದುಕೊಂಡಿದ್ದು, ಕೇವಲ 100 ಅಥವಾ 120 ರನ್​ ಮಾತ್ರ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿತ್ತು. ಆದರೆ ಸ್ಯಾಮ್​ ಕುರನ್​ 102 ಎಸೆತಗಳಲ್ಲಿ ಒಂಭತ್ತು ಬೌಂಡರಿ ಹಾಗೂ ಎರಡು ಸಿಕ್ಸರ್​ಗಳ ಸಹಾಯದಿಂದ 63 ರನ್​ಗಳ ಅದ್ಭುತ ಆಟವಾಡಿ ತನ್ನ ತಂಡದ ಸ್ಥಿತಿಯನ್ನು ಉತ್ತಮವಾಗಿಸಿದರು. ಈ ಮೂಲಕ ಸ್ಯಾಮ್​ ಅಂತಿಮ ಕ್ಷಣದಲ್ಲಿ ಗಳಿಸಿದ ಈ ಸ್ಕೋರ್​ ಟೀಂ ಇಂಡಿಯಾದ ಸೋಲಿಗೆ ಕಾರಣವಾಯ್ತು ಎಂದರೆ ತಪ್ಪಾಗುವುದಿಲ್ಲ.

ತಂದೆಯ ಸೋಲಿನ ಸೇಡು ತೀರಿಸಿದ ಮಗ!

ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡೂ ವಿಭಾಗದಲ್ಲಿ ಅದ್ಭುತವಾಗಿ ಆಡಿದ ಸ್ಯಾಮ್​ರನ್ನು ಮ್ಯಾನ್​ ಫ್​ ದ ಮ್ಯಾಚ್​ ಆಗಿ ಗೌರವಿಸಲಾಯಿತು. ಈ ಮೂಲಕ ಇವರು ಇಂಗ್ಲೆಂಡ್​ ತಂಡದಲ್ಲಿ ಮ್ಯಾನ್​ ಆಫ್​ ದ ಮ್ಯಾಚ್​ ಆಗಿ ಗೌರವ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೇ ತನ್ನ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ಅವರು 35 ವರ್ಷಗಳ ಹಿಂದೆ ಟೀಂ ಇಂಡಿಯಾದಿಂದ ತನ್ನ ತಂದೆಗಾದ ಸೋಲಿನ ಸೇಡನ್ನೂ ತೀರಿಸಿಕೊಂಡಿದ್ದಾರೆ.

ಶಾಕ್​ ಆಗಬೇಡಿ... 1983 ರ ವಿಶ್ವಕಪ್​ ಪಂದ್ಯದಲ್ಲಿ ಕ್ಯಾಪ್ಟನ್​ ಕಪಿಲ್​ ದೇವ್​ ಅಜೇಯ 175 ಅಚ್ಚರಿಜನಕ ಪ್ರದರ್ಶನ ನೀಡಿ, ವರ್ಲ್ಡ್​ ಕಪ್​ ಗೆಲ್ಲುವ ಜಿಂಬಾಬ್ವೆಯ ಕನಸನ್ನು ನುಚ್ಚು ನೂರು ಮಾಡಿದ್ದರು. ಅಂದುಕಪಿಲ್​ ದೇವ್​ 17 ರನ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡಿದ್ದ ತಂಡವನ್ನು 266/8 ಸ್ಕೋರ್​ಗೆ ತಲುಪಿಸಿತ್ತು. ಆ ಸಂದರ್ಭದಲ್ಲಿ 267 ರನ್​ಗಳ ಗುರಿ ಪಡೆದು ಆಟಕ್ಕಿಳಿದ ಜಿಂಬಾಬ್ವೆ ತಂಡದ ಪರವಾಗಿ ಕೆವಿನ್​ ಮಾರ್ಷಲ್​ ಕುರನ್​ 73 ರನ್​ಗಲ ಅದ್ಭುತ ಆಟವಾಡಿದ್ದರು. ಅಲ್ಲದೇ 63 ರನ್​ಗಳನ್ನು ನೀಡಿ ಟೀಂ ಇಂಡಿಯಾದ ಮೂವರು ಬ್ಯಾಟ್ಸ್​ಮನ್​ಗಳನ್ನು ಬೇಟೆಯಾಡಿದ್ದರು.

ಸ್ಯಾಮ್​ ಹಾಗೂ ಕೆವಿನ್​ ನಡುವಿನ ಸಂಬಂಧವೇನು?
Loading...

ಕೆವಿನ್​ ಬೇರಾರೂ ಅಲ್ಲ, ಟೀಂ ಇಂಡಿಯಾಗೆ ಎಜಬೆಸ್ಟನ್​ ಟೆಸ್ಟ್​ ಪಂದ್ಯದಲ್ಲಿ ಸೋಲುಣಿಸಿದ ಸ್ಯಾಮ್​ನ ತಂದೆ ಹಾಗೂ ಅಂದು ಜಿಂಬಾಬ್ವೆಯ ವಿಶ್ವಕಪ್​ ತಂಡದ ಭಾಗವಾಗಿದ್ದವರು. ಕೆವಿನ್​ ಜಿಂಬಾಬ್ವೆ ಪರವಾಗಿ 11 ಏಕದಿನ ಪಂದ್ಯಗಳನ್ನಾಡಿದ್ದರು. ಅಲ್ಲದೇ, ಸ್ಯಾಮ್​ರವರ ಅಜ್ಜ ಕೆವಿನ್​ ಪ್ಯಾಟ್ರಿಕ್​ರವರೂ ಜಿಂಬಾಬ್ವೆಯ 7 ಅತ್ಯುತ್ತಮ ಪಂದ್ಯಗಳಲ್ಲಿ ಆಡಿದ್ದರು. ಇನ್ನು ಸ್ಯಾಮ್​ರವರ ಹಿರಿಯ ಅಣ್ಣ ಟಾಮ್​ ಕುರನ್​ ಇಂಗ್ಲೆಂಡ್​ನ ಟೆಸ್ಟ್​, ಏಕದಿನ ಹಾಗೂ ಟಿ20 ತಂಡಗಳಲ್ಲಿ ಆಡುತ್ತಾರೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...