HOME » NEWS » Sports » CRICKET SAKSHI DHONI QUASHES RUMORS OF MS DHONI RETIREMENT VB

MS Dhoni: ಎಂಎಸ್ ಧೋನಿ ನಿವೃತ್ತಿ ವದಂತಿಗೆ ತೆರೆ; ಮೌನ ಮುರಿದ ಸಾಕ್ಷಿ ಹೇಳಿದ್ದೇನು ಗೊತ್ತಾ?

ನಿವೃತ್ತಿಯ ಕುರಿತ ಗಾಳಿ ಸುದ್ದಿಗೆ ಮಾಹಿ ಅಭಿಮಾನಿಗಳು ಕೂಡ ಸರಿಯಾಗೇ ತಿರುಗೇಟು ನೀಡಿದ್ದಾರೆ. ಸಾಕ್ಷಿ ಟ್ವೀಟ್ ಬಳಿಕ ಕೆಲವೇ ಗಂಟೆಗಳಲ್ಲಿ DhoniRetires ಗೆ ಪ್ರತಿಯಾಗಿ ಟ್ವಿಟರ್‌ನಲ್ಲಿ DhoniNeverRetires ಹ್ಯಾಷ್​ ಟ್ಯಾಗ್ ಟ್ರೇಂಡ್ ಆಗಿದೆ.

news18-kannada
Updated:May 28, 2020, 5:04 PM IST
MS Dhoni: ಎಂಎಸ್ ಧೋನಿ ನಿವೃತ್ತಿ ವದಂತಿಗೆ ತೆರೆ; ಮೌನ ಮುರಿದ ಸಾಕ್ಷಿ ಹೇಳಿದ್ದೇನು ಗೊತ್ತಾ?
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಧೋನಿ ಪತ್ನಿ ಸಾಕ್ಷಿ ಇದೆಲ್ಲವೂ ವದಂತಿ ಅಷ್ಟೇ. ಈ ಲಾಕ್‍ಡೌನ್ ಸಮಯದಲ್ಲಿ ಕಿಡಿಗೇಡಿಗಳು ಇಂತಹ ಸುಳ್ಳುಸುದ್ದಿಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.
  • Share this:
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ನಿನ್ನೆ ಸಂಜೆ ವೇಳೆಗೆ ಎಲ್ಲ ಕಡೆ ಭಾರೀ ವೈರಲ್ ಆಗಿತ್ತು. ಅಲ್ಲದೆ ಟ್ವಿಟ್ಟರ್​ನಲ್ಲಿ #DhoniRetires ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಧೋನಿ ನಿವೃತ್ತಿ ನೀಡುತ್ತಿದ್ದಾರೆ, ತನ್ನ ಮೆಚ್ಚಿನ ಆಟಗಾರನನ್ನು ಇನ್ನು ಟೀಂ ಇಂಡಿಯಾ ಜೆರ್ಸಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ ಎಂದು ಧೋನಿಯ ಅನೇಕ ಅಭಿಮಾನಿಗಳು ಬೇಸರ ಹೊರಹಾಕಿದ್ದರು.

ಈ ವಿಚಾರ ತಿಳಿದ ಕೂಡಲೆ ಧೋನಿ ಪತ್ನಿ ಸಾಕ್ಷಿ ಸಿಂಗ್ ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಧೋನಿ ನಿವೃತ್ತಿ ವಿಚಾರಕ್ಕೆ ತೆರೆ ಎಳೆದಿದ್ದಾರೆ. ಟ್ವಿಟ್ಟರ್​ನಲ್ಲಿ #DhoniRetires ಹ್ಯಾಷ್​ ಟ್ಯಾಗ್ ಟ್ರೆಂಡ್ ಆಗುತ್ತಿದ್ದಂತೆ ಸಾಕ್ಷಿ ತಮ್ಮ ಟ್ವಿಟ್ಟರ್​ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದು ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಭಾರತ- ಆಸ್ಟ್ರೇಲಿಯಾ ನಡುವಣ ಡೇ-ನೈಟ್ ಟೆಸ್ಟ್​; ದಿನಾಂಕ ಪ್ರಕಟಿಸಿದ ಐಸಿಸಿ

ಇದೊಂದು ಸಳ್ಳು ಸುದ್ದಿ. ಈ ಲಾಕ್‍ಡೌನ್ ಸಮಯದಲ್ಲಿ ಜನರು ಮಾನಸಿಕವಾಗಿ ಅಸ್ಥಿರವಾಗಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸಾಕ್ಷಿ ಅವರು ಈ ಟ್ವೀಟ್ ಮಾಡಿ ಕೆಲವೇ ನಿಮಿಷಗಳ ಬಳಿಕ ಡಿಲೀಟ್ ಮಾಡಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Lockdown has made people mentally unstable: Sakshi reacts
ಸಾಕ್ಷಿ ಧೋನಿ ಮಾಡಿರುವ ಟ್ವೀಟ್.


ಇನ್ನೂ ನಿವೃತ್ತಿಯ ಕುರಿತ ಗಾಳಿ ಸುದ್ದಿಗೆ ಮಾಹಿ ಅಭಿಮಾನಿಗಳು ಕೂಡ ಸರಿಯಾಗೇ ತಿರುಗೇಟು ನೀಡಿದ್ದಾರೆ. ಸಾಕ್ಷಿ ಟ್ವೀಟ್ ಬಳಿಕ ಕೆಲವೇ ಗಂಟೆಗಳಲ್ಲಿ #DhoniRetires ಗೆ ಪ್ರತಿಯಾಗಿ ಟ್ವಿಟರ್‌ನಲ್ಲಿ #DhoniNeverRetires ಹ್ಯಾಷ್​ ಟ್ಯಾಗ್ ಟ್ರೇಂಡ್ ಆಗಿದೆ.

T20 World Cup: ಬಹುನಿರೀಕ್ಷಿತ ಐಸಿಸಿ ಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ2019ರ ವಿಶ್ವಕಪ್‌ ಬಳಿಕ ಎಂಎಸ್ ಧೋನಿ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ. ಐಪಿಎಲ್‌ನಲ್ಲಾದರೂ ಧೋನಿ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿತ್ತು, ಆದರೆ ಕೊರೊನಾದಿಂದಾಗಿ ಐಪಿಎಲ್ ಕೂಡ ಅಸ್ಥಿರವೆನಿಸಿದೆ. ಧೋನಿ ದೀರ್ಘ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರಿಂದ ಅವರು ನಿವೃತ್ತಿ ನೀಡುತ್ತಾರೆ ಎಂಬ ಗಾಳಿಸುದ್ದಿ ಆಗೀಗ ಕೇಳಿಬರುತ್ತಲೇಯಿದೆ.

ಸದ್ಯ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಉಳಿದಿರುವ ಧೋನಿ, ಮಗಳು ಹಾಗೂ ಪತ್ನಿಯ ಜೊತೆ ತಮ್ಮ ತೋಟದ ಮನೆಯಲ್ಲಿ ಕಾಲಕಾಳೆಯುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೊಸ ಲುಕ್‍ನಲ್ಲಿ ಫಾರ್ಮ್ ಹೌಸ್ ನಲ್ಲಿ ಕಾಣಿಸಿಕೊಂಡ ಫೋಟೋಗಳು ಸಖತ್ ವೈರಲ್ ಆಗಿದ್ದವು.
First published: May 28, 2020, 5:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories