ವಿಶ್ವಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್: 26 ವರ್ಷಗಳ ನಂತರ ಭಾರತಕ್ಕೆ ಪದಕ ಖಚಿತಪಡಿಸಿದ ಪ್ರಣೀತ್!

ಪುರುಷರ ಸಿಂಗಲ್ಸ್​ ಬ್ಯಾಡ್ಮಿಂಟನ್​ನಲ್ಲಿ ಸೆಮಿ ಫೈನಲ್ ತಲುಪಿರುವ ಪ್ರಣೀತ್ ನಂಬರ್​ ಒನ್​ ಶ್ರೇಯಾಂಕದ ಜಪಾನ್​ನ ಕೆಂಟೊ ಮೊಮೊಟೋ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

ಸಾಯಿ ಪ್ರಣೀತ್

ಸಾಯಿ ಪ್ರಣೀತ್

  • News18
  • Last Updated :
  • Share this:
ಬೆಂಗಳೂರು (ಆ. 24): 19ನೇ ಶ್ರೇಯಾಂಕದ ಸಾಯಿ ಪ್ರಣೀತ್​ 26 ವರ್ಷಗಳ ನಂತರ ವಿಶ್ವಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕ ಹೊಂದಿರುವ ಇಂಡೋನೇಷ್ಯಾದ ಜೋನಾಥನ್​ ಕ್ರಿಸ್ಟಿ ಅವರನ್ನು 24-22, 21-14ರ ನೇರ ಸೆಟ್​ಗಳಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಕನಿಷ್ಟ ಕಂಚಿನ ಪದಕಕ್ಕಾದರು ಪ್ರಣೀತ್​ ಕೊರಳೊಡ್ಡಲಿದ್ದಾರೆ.

ಭಾರತದ ದಂತಕತೆ ಪ್ರಕಾಶ್​ಪಡುಕೋಣೆ ಅವರು 1983ರ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ​ ಎನಿಸಿದ್ದರು. ಸದ್ಯ 26 ವರ್ಷಗಳ ನಂತರ ಈ ದಾಖಲೆಯನ್ನು ಅಳಿಸಿ ಹಾಕುವ ಹೊಸ್ತಿಲಲ್ಲಿ ಪ್ರಣೀತ್ ಇದ್ದಾರೆ.

KPL 2019: ಕೃಷ್ಣಾಷ್ಟಮಿಯಂದು ಮಿಂಚಿದ ಕೃಷ್ಣಪ್ಪ; ಸ್ಫೋಟಕ ಶತಕ ಜೊತೆ 8 ವಿಕೆಟ್ ಕಿತ್ತ ಗೌತಮ್

ಸದ್ಯ ಪುರುಷರ ಸಿಂಗಲ್ಸ್​ ಬ್ಯಾಡ್ಮಿಂಟನ್​ನಲ್ಲಿ ಸೆಮಿ ಫೈನಲ್ ತಲುಪಿರುವ ಪ್ರಣೀತ್ ನಂಬರ್​ ಒನ್​ ಶ್ರೇಯಾಂಕದ ಜಪಾನ್​ನ ಕೆಂಟೊ ಮೊಮೊಟೋ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

 ಇವರ ಜೊತೆ ಭಾರತದ ಸ್ಟಾರ್​ ಮಹಿಳಾ ಬ್ಯಾಡ್ಮಿಂಟನ್​ ಆಟಗಾರ್ತಿ​ ಪಿ.ವಿ.ಸಿಂಧು ಕೂಡ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಕ್ವಾರ್ಟರ್​ ಫೈನಲ್​ನಲ್ಲಿ ಚೀನಾದ ತೈ ತ್ಸುಯಿಂಗ್ ವಿರುದ್ಧ 12-21, 23-21,21-19 ಸೆಟ್​ನಿಂದ ಹೊಡೆದುರುಳಿಸಿದ್ದು, 5ನೇ ಬಾರಿಗೆ ಪದಕವನ್ನು ಖಚಿತ ಪಡಿಸಿದ್ದಾರೆ.

 ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ
First published: