HOME » NEWS » Sports » CRICKET SAFARAZ AHMED SAYS HE FOUND HIS WIFE CRYING AFTER PAKISTAN FAN CALLED HIM FAT PIG IN VIDEO

ನೀವೇಕೆ ಕೊಬ್ಬು ತುಂಬಿದ ಹಂದಿಯಂತೆ ದಪ್ಪಗಿದ್ದೀರಾ: ಈ ವಿಡಿಯೋ ನೋಡಿದ ಪಾಕ್ ತಂಡದ ನಾಯಕನ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು..!

ಇದೀಗ ಈ ವಿಡಿಯೋ ಬಗ್ಗೆ ಸರ್ಫರಾಜ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಯಾರು ಕೂಡ ಅನಗತ್ಯವಾಗಿ ಆಟಗಾರರ ಬಗ್ಗೆ ಪ್ರತಿಕ್ರಿಯಿಸಬೇಡಿ ಎಂದು ಪಾಕ್ ಅಭಿಮಾನಿಗಳಲ್ಲಿ ಕೋರಿದ್ದಾರೆ.

zahir | news18
Updated:June 26, 2019, 5:51 PM IST
ನೀವೇಕೆ ಕೊಬ್ಬು ತುಂಬಿದ ಹಂದಿಯಂತೆ ದಪ್ಪಗಿದ್ದೀರಾ: ಈ ವಿಡಿಯೋ ನೋಡಿದ ಪಾಕ್ ತಂಡದ ನಾಯಕನ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು..!
ಪಾಕ್​ ನಾಯಕ ಸರ್ಫರಾಜ್​ ಅಹ್ಮದ್​
  • News18
  • Last Updated: June 26, 2019, 5:51 PM IST
  • Share this:
ಈ ಬಾರಿಯ ವಿಶ್ವಕಪ್​​ನಲ್ಲೂ ಪಾಕಿಸ್ತಾನ ತಂಡ ಭಾರತ ವಿರುದ್ಧ ಹೀನಾಯವಾಗಿ ಸೋತಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಪಾಕ್ ಕ್ರಿಕೆಟ್​ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಪಡೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಯುವಕನೊಬ್ಬ, ಪಾಕ್ ತಂಡದ ನಾಯಕನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದರು.

ತನ್ನ ಮಗನೊಂದಿಗೆ ​ ಮಾಲ್​​ಗೆ ಹೋಗಿದ್ದ ಸರ್ಫರಾಜ್ ಅವರನ್ನು 'ನೀವೇಕೆ ಕೊಬ್ಬು ತುಂಬಿದ ಹಂದಿಯಂತೆ ದಪ್ಪಗಿದ್ದೀರಾ' ಎಂದು ನಿಂದಿಸಿದ್ದರು. ಈ ನಿಂದನೆ  ವೇಳೆ ವಿಡಿಯೋ ಮಾಡಿದ ಅಭಿಮಾನಿ ಅದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅತಿರೇಕ ಎನಿಸಿದ್ದ ಈ ವಿಡಿಯೋಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಇದೀಗ ಈ ವಿಡಿಯೋ ಬಗ್ಗೆ ಸರ್ಫರಾಜ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಯಾರು ಕೂಡ ಅನಗತ್ಯವಾಗಿ ಆಟಗಾರರ ಬಗ್ಗೆ ಪ್ರತಿಕ್ರಿಯಿಸಬೇಡಿ ಎಂದು ಪಾಕ್ ಅಭಿಮಾನಿಗಳಲ್ಲಿ ಕೋರಿದ್ದಾರೆ. ನನ್ನನ್ನು ವೈಯುಕ್ತಿಕವಾಗಿ ನಿಂದಿಸಿದ ಬಗ್ಗೆ ಏನನ್ನೂ ಹೇಳಲಾರೆ. ಸೋಲು ಗೆಲುವು ಎಂಬುದು ಆಟದ ಭಾಗವಾಗಿದೆ. ಸೋತಾಗ ಈ ಹಿಂದಿನ ತಂಡಗಳನ್ನು ಅಭಿಮಾನಿಗಳು ಟೀಕಿಸಿದ್ದಾರೆ ಮತ್ತು ನೋಯಿಸಿದ್ದಾರೆ. ಅದು ಈಗಲೂ ಮುಂದುವರೆದಿದೆ. ಇದೀಗ ಟೀಕೆ ಟಿಪ್ಪಣಿಗಳಿಗೆ ಸೋಷಿಯಲ್ ಮೀಡಿಯಾ ಕೂಡ ಇದೆ. ಆದರೆ ನೀವು ಬರೆಯುವ ಮತ್ತು ಮಾತನಾಡುವ ವಿಷಯಗಳು ಆಟಗಾರರ ಮೇಲೆ ಪರಿಣಾಮ ಬೀರುತ್ತವೆ ಎಂದಿದ್ದಾರೆ.ವಿಡಿಯೋ ನೋಡಿ ಅತ್ತಿದ್ದ ಸರ್ಫರಾಜ್ ಪತ್ನಿ:ಇದೇ ವೇಳೆ ನಿಮ್ಮನ್ನು ಹಂದಿ ಎಂದು ಜರಿಯಲಾಗಿತ್ತು. ಇದರಿಂದ ನೋವಾಗಿದೆಯೇ ಎಂಬ ಪ್ರಶ್ನೆಗೆ, ಟೀಕೆ ಉತ್ತಮ ನಿಂದನೆ ಮಾಡಬಾರದು ಎಂದು ಸರ್ಫರಾಜ್ ತಿಳಿಸಿದರು. ಈ ವಿಡಿಯೋ ನೋಡಿದ ನನ್ನ ಪತ್ನಿಯು ಹೋಟೆಲ್ ಕೋಣೆಯಲ್ಲಿ ಅಳುತ್ತಾ ಕೂತಿದ್ದರು. ಇದೆಲ್ಲಾ ಸಾಮಾನ್ಯ ಎಂದು ಆಕೆಯನ್ನು ನಾನೇ ಸಮಾಧಾನ ಪಡಿಸಿದ್ದೆ. ಹೀಗಾಗಿ ನಿಮ್ಮ ನಿಂದನೆಯು ಬೇರಯವರ ಮನಸ್ಸನನ್ನು ಘಾಸಿಗೊಳಿಸುತ್ತದೆ ಎಂಬುದು ನೆನಪಿರಲಿ ಎಂದು ಪಾಕ್ ನಾಯಕ ತಿಳಿಸಿದರು.

ಇದನ್ನೂ ಓದಿ: ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ: ನಾಳಿನ ಪಂದ್ಯದಲ್ಲಿ ಸಚಿನ್-ಲಾರಾ ದಾಖಲೆ ಉಡೀಸ್..!
First published: June 26, 2019, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories