ಆಟವೂ ಬೇಕು, ಆಧ್ಯಾತ್ಮವೂ ಬೇಕು: ಕ್ರೀಡಾಪ್ರೇಮಿ ಸದ್ಗುರು ಜಗ್ಗಿ ವಾಸುದೇವ್

ಸದ್ಗುರು ಒಬ್ಬ ಉತ್ತಮ ಕ್ರೀಡಾಪಟು ಕೂಡ ಹೌದು. ಹಲವು ಕ್ರೀಡೆಗಳನ್ನು ಆಡುವ ಕ್ರೀಡಾಪ್ರೇಮಿ. ಫ್ರಿಸ್ಬೀ, ಕ್ರಿಕೆಟ್, ಗಾಲ್ಫ್, ವಾಲಿಬಾಲ್ ಆಟಗಳನ್ನು ಆಡುವುದು ಅಂದರೆ ಅವರಿಗೆ ಇಷ್ಟ. ಆಗಾಗ ಇಶಾ ಫೌಂಡೇಶನ್ ಆವರಣದಲ್ಲಿಯೇ ಆಡುವ ಮೂಲಕ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ ಸದ್ಗುರು.

news18-kannada
Updated:August 8, 2020, 3:37 PM IST
ಆಟವೂ ಬೇಕು, ಆಧ್ಯಾತ್ಮವೂ ಬೇಕು: ಕ್ರೀಡಾಪ್ರೇಮಿ ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್-ಅಮಿತ್ ಮಿಶ್ರಾ
  • Share this:
ಇಶಾ ಫೌಂಡೇಶನ್ ಮೂಲಕ ಸದ್ಗುರು ಜಗ್ಗಿ ವಾಸುದೇವ್ ಅವರು ಕಳೆದ ಹಲವಾರು ವರ್ಷಗಳಿಂದ ನಾನಾ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆಧ್ಯಾತ್ಮ, ಯೋಗ, ನದಿಗಳ ಸಂರಕ್ಷಣೆ, ಅರಣ್ಯ ರಕ್ಷಣೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಈ ಸಮಾಜಮುಖಿ ಕೆಲಸಗಳ ಮೂಲಕ ಹಾಗೂ ಪ್ರವಚನಗಳಿಂದಲೇ ಜಗ್ಗಿ ವಾಸುದೇವ್ ಅವರು ಸದ್ಗುರು ಆಗಿದ್ದಾರೆ.

ಆದರೆ ಸದ್ಗುರು ಒಬ್ಬ ಉತ್ತಮ ಕ್ರೀಡಾಪಟು ಕೂಡ ಹೌದು. ಹಲವು ಕ್ರೀಡೆಗಳನ್ನು ಆಡುವ ಕ್ರೀಡಾಪ್ರೇಮಿ. ಫ್ರಿಸ್ಬೀ, ಕ್ರಿಕೆಟ್, ಗಾಲ್ಫ್, ವಾಲಿಬಾಲ್ ಆಟಗಳನ್ನು ಆಡುವುದು ಅಂದರೆ ಅವರಿಗೆ ಇಷ್ಟ. ಆಗಾಗ ಇಶಾ ಫೌಂಡೇಶನ್ ಆವರಣದಲ್ಲಿಯೇ ಆಡುವ ಮೂಲಕ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ ಸದ್ಗುರು. ಇನ್ನು 62 ವರ್ಷದ ಹರೆಯದರಲ್ಲೂ ಅವರು ಫ್ರಿಸ್ಬೀ ಆಟವಾಡುವ ರೀತಿಯಂತೂ ಯುವಕ, ಯುವತಿಯರನ್ನೂ ನಾಚಿಸುವಂತಿದೆ.ಇನ್ನು ಸಾಮಾನ್ಯವಾಗಿ ಸಿನಿಮಾ ರಂಗದ ಸೆಲೆಬ್ರಿಟಿಗಳು, ವಿವಿಧ ಕ್ಷೇತ್ರಗಳ ಸಾಧಕರ ಜೊತೆ ಸದ್ಗುರು ನಾನಾ ವಿಷಯಗಳ ಬಗ್ಗೆ ಚರ್ಚಿಸುವುದನ್ನು ನೋಡಿದ್ದೀರಿ. ಅದೇ ರೀತಿ ಕ್ರಿಕೆಟರ್​ಗಳ ಜೊತೆಗೂ ಸದ್ಗುರು ಹತ್ತು, ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾ ಸ್ಟಾರ್ ಬೌಲರ್​ಗಳಾದ ಅಮಿತ್ ಮಿಶ್ರಾ, ರವಿಚಂದ್ರನ್ ಅಶ್ವಿನ್, ಸ್ಫೋಟಕ ಬ್ಯಾಟ್ಸ್​​​ಮನ್ ಕೆಎಲ್ ರಾಹುಲ್ ಅವರು ಸದ್ಗುರು ಜೊತೆ ಮಾತನಾಡಿದ್ದಾರೆ.ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಮಾಜಿ ಟೆನ್ನಿಸ್ ದಿಗ್ಗಜ ಪ್ರಕಾಶ್ ಪಡುಕೋಣೆ, ಭಾರತ ತಂಡದ ಲೆಜೆಂಡರಿ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಕೂಡ  ಆಧ್ಯಾತ್ಮ, ಯೋಗ, ಕ್ರೀಡೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಭಾರತೀಯ ಕ್ರೀಡಾಪಟುಗಳು ಮಾತ್ರವಲ್ಲ ವಿದೇಶಿ ಆಟಗಾರರೂ ಸಹ ಸದ್ಗುರು ಜೊತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಆಟಗಾರ ಎಬಿಡಿ ವಿಲಿಯರ್ಸ್, ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ಅಂತಾರಾಷ್ಟ್ರೀಯ ಖ್ಯಾತಿಯ ಎಫ್ಒನ್ ರೇಸ್ ಕಾರು ಚಾಲಕ ನಿಕೋ ರೋಸ್ಬರ್ಗ್ ಸೇರಿದಂತೆ ಹಲವಾರು ಮಂದಿ ವಿದೇಶಿ ಕ್ರೀಡಾಪಟುಗಳು ಸಹ ಸದ್ಗುರು ಜೊತೆ ಚರ್ಚಿಸಿದ್ದಾರೆ.

ಅಷ್ಟೇ ಯಾಕೆ ಯೋಗಗುರು ರಾಮ್​ದೇವ್​ ಅವರನ್ನು ಬೈಕ್ ಮೇಲೆ ಕೂರಿಸಿಕೊಂಡು ಇಶಾ ಫೌಂಡೇಶನ್​​ನಲ್ಲಿ ತಿರುಗಾಡಿದ್ದು, ಡರ್ಟ್ ಬೈಕ್ ಓಡಿಸಿ ಸಂಭ್ರಮಿಸಿದ್ದು, ಎಟಿವಿಯಲ್ಲಿ ಸವಾರಿ ಮಾಡಿ ಹೊಸ ಎಕ್ಸ್​ಸ್ಪೀರಿಯನ್ಸ್​​​ ಪಡೆದಿದ್ದು, ಹೀಗೆ ಸದ್ಗುರು ಅವರು ಕೇವಲ ಖುಷಿಯಾಗಿ ಬದುಕುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮಾತ್ರವಲ್ಲ, ಅವರು ಹೇಳಿದಂತೆಯೇ ಜೀವಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.ಇಶಾ ಫೌಂಡೇಶನ್ ವತಿಯಿಂದ ರಾಲಿ ಫಾರ್ ರಿವರ್ಸ್, ಕಾವೇರಿ ಕಾಲಿಂಗ್ ಕ್ಯಾಂಫೇನ್​ಗಳ ಮೂಲಕ ಕಾವೇರಿ ಹಾಗೂ ನದಿಗಳ ರಕ್ಷಣೆಗೆ ಒತ್ತು ನೀಡಿದ್ದು ಗೊತ್ತೇಯಿದೆ. ಅದರ ಜೊತೆಗೆ ಇಶಾ ಗ್ರಾಮೋತ್ಸವಂ ಮೂಲಕ ಹಳ್ಳಿ, ಗ್ರಾಮಗಳಲ್ಲೂ ದೇಸಿ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. 35 ಸಾವಿರಕ್ಕೂ ಅಧಿಕ ಮಂದಿ ಆಟಗಾರರಿರುವ ಮೂರು ಸಾವಿರ ತಂಡಗಳು ಈ ಗ್ರಾಮೋತ್ಸವದಲ್ಲಿ ಪಾಲ್ಗೊಳ್ಳುತ್ತವೆ. ಹೀಗೆ ಉತ್ತಮ ಆರೋಗ್ಯಕ್ಕಾಗಿ ಆಟವೂ ಬೇಕು, ಆಧ್ಯಾತ್ಮವೂ ಬೇಕು ಎಂಬ ಆಲೋಚನೆಯೊಂದಿಗೆ ಸದ್ಗುರು, ಹಳ್ಳಿ ಹಳ್ಳಿಗಳಲ್ಲೂ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ.
Published by: Harshith AS
First published: August 8, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading