1993ರ ರೋಚಕ ಪಂದ್ಯ; ಸಚಿನ್ ಫೈನಲ್ ಓವರ್ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದು ನೋಡಲೇಬೇಕು

ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 196 ರನ್​ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಅಂತಿಮವಾಗಿ ಕೊನೆಯ 6 ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅವಶ್ಯಕತೆಯಿದ್ದವು. ಈ ಸಂದರ್ಭ...

1- ಸಚಿನ್ ತೆಂಡೂಲ್ಕರ್

1- ಸಚಿನ್ ತೆಂಡೂಲ್ಕರ್

 • Share this:
  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ ದಾಖಲೆಗಳ ವೀರ. ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಹಾಗೂ ರನ್ ಬಾರಿಸಿರುವ ಸಾಧನೆ ಇರುವುದೇ ಇವರ ಹೆಸರಲ್ಲಿ. ಇದರ ಜೊತೆಗೆ ಸಚಿನ್ ಬೌಲಿಂಗ್​ನಲ್ಲೂ ಚಮತ್ಕಾರ ತೋರಿದ್ದಾರೆ. 46 ಟೆಸ್ಟ್​ ಮತ್ತು 154 ಏಕದಿನ ವಿಕೆಟ್ ಕಬಳಿಸಿದ್ದಾರೆ.

  ಅದರಲ್ಲೂ ಸಚಿನ್ 1993 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಓವರ್ ಬೌಲಿಂಗ್ ಮಾಡಿ ಭಾರತವನ್ನು ಗೆಲ್ಲಿಸಿದ್ದು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಈ ಕುರಿತು ಸ್ವತಃ ಸಚಿನ್ ಅವರೇ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

  MS Dhoni: ಧೋನಿಯ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು..?; ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ!

     1993ರಲ್ಲಿ ನಡೆದ ಹೀರೋ ಕಪ್​ನ ಸೆಮಿ ಫೈನಲ್ ಪಂದ್ಯದಲ್ಲಿ ನಾನು ಬೌಲಿಂಗ್ ಮಾಡಿದ್ದು ತುಂಬಾನೇ ಮಜವಾಗುತ್ತು. ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಈ ಹೈವೋಲ್ಟೇಹ್ ಪಂದ್ಯ ರೋಚಕವಾಗಿತ್ತು ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾಡಿರುವ ಟ್ವೀಟ್​ಗೆ ಸಚಿನ್ ಪ್ರತಿಕ್ರಿಯಿಸಿದ್ದಾರೆ.

  Virat Kohli: ಆ ದಿನ ನಾನು ರಾತ್ರಿಯಿಡೀ ಅತ್ತಿದ್ದೆ; ಅಸಾಹಯಕ ಕ್ಷಣವನ್ನು ನೆನೆದ ವಿರಾಟ್ ಕೊಹ್ಲಿ

  ಈ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 196 ರನ್​ಗಳ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನಟ್ಟಿದ ಆಫ್ರಿಕಾಕ್ಕೆ ಅಂತಿಮವಾಗಿ ಕೊನೆಯ 6 ಎಸೆತದಲ್ಲಿ ಗೆಲ್ಲಲು 6 ರನ್​ಗಳ ಅವಶ್ಯಕತೆಯಿದ್ದವು. ಈ ಸಂದರ್ಭ ಬೌಲಿಂಗ್ ಮಾಡಿದ ಸಚಿನ್ ಪಂದ್ಯದ ಗತಿಯನ್ನೇ ಬದಲಾಯಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

  ಈ ರೋಚಕ ಪಂದ್ಯದ ಕೊನೆಯ ಓವರ್​ನ ವಿಡಿಯೋ ಇಲ್ಲಿದೆ ನೋಡಿ:

  First published: