Sachin Tendulkar: ಬಡವರ ಪಾಲಿಗೆ ದೇವರಾದ ಸಚಿನ್​ ತೆಂಡೂಲ್ಕರ್‌; 4,000 ದೀನ ದಲಿತ ಬಡವರಿಗೆ ಆರ್ಥಿಕ ಸಹಾಯ

Master Blaster Sachin Tendulkar: ಸಚಿನ್​ ಅವರ ಸಹಾಯವನ್ನು ಸ್ಮರಿಸಿರುವ ಹೈಫೈವ್​ ಫೌಂಡೇಷನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ ಸ್ಮರಿಸಿದ್ದಕ್ಕಾಗಿ ಸಚಿನ್​ ತೆಂಡೂಲ್ಕರ್​ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್​-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ  ಆರ್ಥಿಕವಾಗಿ ಸಹಾಯವಾಗಿದೆ‘ ಎಂದು ತಿಳಿಸಿದ್ದಾರೆ.

news18-kannada
Updated:May 9, 2020, 3:00 PM IST
Sachin Tendulkar: ಬಡವರ ಪಾಲಿಗೆ ದೇವರಾದ ಸಚಿನ್​ ತೆಂಡೂಲ್ಕರ್‌; 4,000 ದೀನ ದಲಿತ ಬಡವರಿಗೆ ಆರ್ಥಿಕ ಸಹಾಯ
ಸಚಿನ್​​ ತೆಂಡೂಲ್ಕರ್​
  • Share this:
ಇತ್ತೀಚೆಗೆ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​​ ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸುವ ಮೂಲಕ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಜೊತೆಗೆ 5 ಸಾವಿರ ಬಡವರಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಇದೀಗ ಸಂಕಷ್ಟದಲ್ಲಿರುವ 4 ಸಾವಿರ ಕೂಲಿ ಕಾರ್ಮಿಕರಿಗೆ ಸಚಿನ್​ ನೆರವು ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಸಚಿನ್​ ಅವರ ಸಹಾಯವನ್ನು ಸ್ಮರಿಸಿರುವ ಹೈಫೈವ್​ ಫೌಂಡೇಷನ್​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ‘ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ  ಸಾಬೀತು ಪಡಿಸಿದಕ್ಕಾಗಿ ಸಚಿನ್​ ತೆಂಡೂಲ್ಕರ್​ ಅವರಿಗೆ ಧನ್ಯವಾದಗಳು. ನಮ್ಮ ಕೋವಿಡ್​-19 ನಿಧಿಗೆ ನೀವು ನೀಡಿದ ನೆರವಿನಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ 4 ಸಾವಿರ ಕಾರ್ಮಿಕರಿಗೆ  ಆರ್ಥಿಕವಾಗಿ ಸಹಾಯವಾಗಿದೆ‘ ಎಂದು ತಿಳಿಸಿದ್ದಾರೆ.

 
ಹೈಫೈವ್​ ಫೌಂಡೇಷನ್​ ಮಾಡಿರುವ ಟ್ವೀಟ್​ಗೆ ಸಚಿನ್​​ ತೆಂಡೂಲ್ಕರ್​ ರಿಟ್ವೀಟ್​ ಮಾಡಿದ್ದು, ‘ದಿನಗೂಲಿ ಕಾರ್ಮಿಕರ ಕುಟುಂಬಕ್ಕೆ ನೆರವಾಗುತ್ತಿರುವ ಹೈಫೈವ್​ ಫೌಂಡೇಷನ್​ಗೆ ಒಳ್ಳೆಯದಾಗಲಿ‘ ಎಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತೆಲುಗಿನಲ್ಲಿ ಯಶ್ ಸಿನಿಮಾ ಅಕ್ರಮ ಪ್ರಸಾರ; ಕಾನೂನು ಹೋರಾಟ ನಡೆಸಲು ಮುಂದಾದ ಕೆ.ಜಿ.ಎಫ್​ ಟೀಂ
First published: May 9, 2020, 1:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading