ಮಾಲ್ಡೀವ್ಸ್​ನಲ್ಲಿ ಪ್ರಧಾನಿ ಮೋದಿಯ ಕ್ರಿಕೆಟ್​ ರಾಜತಾಂತ್ರಿಕ ನಡೆ; ಮೆಚ್ಚುಗೆ ಸೂಚಿಸಿದ ದಂತಕಥೆ ಸಚಿನ್ ತೆಂಡೂಲ್ಕರ್​

ನರೇಂದ್ರ ಮೋದಿಯವರೆ ಕ್ರಿಕೆಟ್​ ಅನ್ನು ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು. ಕ್ರಿಕೆಟ್ ವಿಶ್ವಕಪ್​ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರದರ್ಶಿಸುತ್ತಿರುವ ನಿಮ್ಮ ನಡೆ ಪ್ರಶಂಸಾರ್ಹ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್​ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

MAshok Kumar | news18
Updated:June 12, 2019, 3:19 PM IST
ಮಾಲ್ಡೀವ್ಸ್​ನಲ್ಲಿ ಪ್ರಧಾನಿ ಮೋದಿಯ ಕ್ರಿಕೆಟ್​ ರಾಜತಾಂತ್ರಿಕ ನಡೆ; ಮೆಚ್ಚುಗೆ ಸೂಚಿಸಿದ ದಂತಕಥೆ ಸಚಿನ್ ತೆಂಡೂಲ್ಕರ್​
ಸಚಿನ್ ತೆಂಡೂಲ್ಕರ್​.
  • News18
  • Last Updated: June 12, 2019, 3:19 PM IST
  • Share this:
ನವ ದೆಹಲಿ (ಜೂನ್​.12); ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನೆರೆಯ ದ್ವೀಪ ರಾಷ್ಟ್ರ ಮಾಲ್ಡೀವ್ಸ್​ಗೆ ಮೊದಲ ಭೇಟಿ ನೀಡಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರಿಗೆ ನೆನೆಪಿನ ಕಾಣಿಕೆಯಾಗಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್​ ತಂಡದ ಆಟಗಾರರ ಸಹಿಯನ್ನೊಳಗೊಂಡ ಕ್ರಿಕೆಟ್ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದರು. ಪ್ರಧಾನಿಯವರ ಈ ನಡೆಯನ್ನು “ಕ್ರಿಕೆಟ್ ರಾಜತಾಂತ್ರಿ ನಡೆ”  ಎಂದು ಮಾಜಿ ಆಟಗಾರ ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ನರೇಂದ್ರ ಮೋದಿಯವರೆ ಕ್ರಿಕೆಟ್​ ಅನ್ನು ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು. ಕ್ರಿಕೆಟ್ ವಿಶ್ವಕಪ್​ ನಡೆಯುತ್ತಿರುವ ಇಂತಹ ಸಂದರ್ಭದಲ್ಲಿ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಪ್ರದರ್ಶಿಸುತ್ತಿರುವ ನಿಮ್ಮ ನಡೆ ಪ್ರಶಂಸಾರ್ಹ. ಶೀಘ್ರದಲ್ಲಿ ಮಾಲ್ಡೀವ್ಸ್​ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ ಭೂಪಟದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸವಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಲ್ಡೀವ್ಸ್​ನ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಸ್ವತಃ ಕ್ರಿಕೆಟ್ ಅಭಿಮಾನಿ ಇದೇ ಕಾರಣಕ್ಕೆ ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದಾಗ ಪ್ರಧಾನಿ ಮೋದಿ ಅವರಿಗೆ ಕ್ರಿಕೆಟ್ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಅವರು, “ಮಾಲ್ಡೀವ್ಸ್​ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಕನಸಿನಂತೆ ಈ ರಾಷ್ಟ್ರದಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಭಾರತ ಸಹಕರಿಸಲಿದೆ. ಪ್ರಸ್ತುತ ಇಲ್ಲಿನ ಕ್ರಿಕೆಟ್ ಆಟಗಾರರಿಗೆ ಭಾರತದಲ್ಲಿ ಉತ್ತಮ ಕ್ರಿಕೆಟ್ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ದ್ವೀಪ ರಾಷ್ಟ್ರದಲ್ಲಿ ಒಂದು ಕ್ರಿಕೆಟ್ ಅಂಗಳವನ್ನೂ ನಿರ್ಮಿಸುವ ಉದ್ದೇಶವಿದೆ” ಎಂದು ಆಶ್ವಾಸನೆ ನೀಡಿದ್ದರು.

ಬಿಸಿಸಿಐ ಮೇ ತಿಂಗಳಲ್ಲೇ ಮಾಲ್ಡೀವ್ಸ್​ಗೆ ಭೇಟಿ ನೀಡಿತ್ತು ಅಲ್ಲದೆ ಅಲ್ಲಿನ ಕ್ರಿಕೆಟ್ ಆಟಗಾರರಿಗೆ ತರಬೇತಿ ನೀಡಿತ್ತು. ಪ್ರಸ್ತುತ ಭಾರತೀಯ ಕ್ರೀಡಾ ಸಚಿವಾಲಯ ಅಲ್ಲಿನ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಹೊಣೆ ಹೊತ್ತಿದೆ.

ಇದನ್ನೂ ಓದಿ : ಭಾರತ-ಆಸ್ಟ್ರೇಲಿಯಾ ವಿಶ್ವಕಪ್​ ಪಂದ್ಯದ ವೇಳೆ ‘ಚುರುಮುರಿ’; ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ವಿಡಿಯೋ

First published:June 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ