Yuvraj Singh: ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ; ಗೆಳೆಯನಿಗೆ ಪ್ರೀತಿಪೂರ್ವಕ ಸಂದೇಶ ಕಳಿಸಿ ಹಾರೈಸಿದ ಸಚಿನ್!

Sachin Tendulkar Tweet: ಸಚಿನ್​ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಉತ್ತಮ ಗೆಳೆಯರು. ಸಚಿನ್ ಅವರನ್ನು ತಮ್ಮ ಗುರು ಎಂದೇ ಯುವರಾಜ್ ತಿಳಿಸಿದ್ದರು. ಅಲ್ಲದೆ 2011ರ ವಿಶ್ವಕಪ್ ಅನ್ನು ಸಚಿನ್ ಗಾಗಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದರು. ಅದನ್ನು ಸಾಧಿಸಿಯೂ ತೋರಿಸಿದ್ದರು. ಅಲ್ಲದೆ ಭಾರತ ಫೈನಲ್​ ಪಂದ್ಯದಲ್ಲಿ ಗೆದ್ದಾಗ ಸಚಿನ್ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದರು.

MAshok Kumar | news18
Updated:June 11, 2019, 9:45 AM IST
Yuvraj Singh: ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ; ಗೆಳೆಯನಿಗೆ ಪ್ರೀತಿಪೂರ್ವಕ ಸಂದೇಶ ಕಳಿಸಿ ಹಾರೈಸಿದ ಸಚಿನ್!
ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್.
  • News18
  • Last Updated: June 11, 2019, 9:45 AM IST
  • Share this:
ಭಾರತದ ಸಿಕ್ಸರ್​ ಕಿಂಗ್​, ದಿ ಗ್ರೇಟ್ ಫಿನಿಶರ್, ದಿ ರಿಯಲ್ ವಾರಿಯರ್ ಆಫ್​ ಕ್ರಿಕೆಟ್​ ಖ್ಯಾತಿಯ ಯುವರಾಜ್​ ಸಿಂಗ್ ಸೋಮವಾರ ಮುಂಬೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. 2007ರ ಟಿ-20 ಹಾಗೂ 2011 ಏಕದಿನ ವಿಶ್ವಕಪ್ ಕ್ರಿಕೆಟ್​ನ ಹೀರೋ ಯುವರಾಜ್​ಗೆ ಅದು ನಿಜಕ್ಕೂ ಭಾವನಾತ್ಮಕ ಸನ್ನಿವೇಶವಾಗಿತ್ತು.

ಈ ವೇಳೆ ​ಅವರು ತಮಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಮಾಡಿಕೊಟ್ಟ ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ವೃತ್ತಿ ಜೀವನದಲ್ಲಿ ತಾವು ಬೆಳೆಯಲು ಕಾರಣವಾಗಿದ್ದ ಸಚಿನ್ ತೆಂಡೂಲ್ಕರ್​ ಅವರನ್ನು ನೆನೆಸಿಕೊಂಡಿದ್ದರು. ಅಲ್ಲದೆ ಈ ಇಬ್ಬರೂ ದಿಗ್ಗಜರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದರು.

ಯುವರಾಜ್ ನಿವೃತ್ತಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಭಾರತದ ವರ್ಲ್ಡ್​​ಕಪ್​ ಹೀರೋನ ಕೊಡುಗೆಗಳನ್ನು ನೆನೆದ ಸಚಿನ್, “ಯುವಿ ನಿಜಕ್ಕೂ ನಿಮ್ಮ ವೃತ್ತಿ ಜೀವನ ಅದ್ಭುತವಾಗಿತ್ತು. ತಂಡಕ್ಕೆ ಅಗತ್ಯ ಬಿದ್ದಾಗಲೆಲ್ಲಾ ನೀವು ನಿಜವಾದ ಚಾಂಪಿಯನ್ ರೀತಿಯಲ್ಲಿ ಆಟವಾಡಿದ್ದೀರಿ. ಅಂಗಣದ ಒಳಗೆ ಹಾಗೂ ಹೊರಗೆ ತಮಗೆ ಎದುರಾದ ಎಲ್ಲಾ ಸವಾಲುಗಳನ್ನು ನೀವು ಅದ್ಭುತವಾಗಿ ಎದುರಿಸಿದ್ದೀರಿ. ಇದೀಗ ನಿವೃತ್ತಿಯ ಸಮಯ ಬಂದಿದೆ. ನಿಮ್ಮ ಎರಡನೇ ಇನ್ನಿಂಗ್ಸ್ ಅದ್ಭುತವಾಗಿರಲಿ ಹಾಗೂ ಕ್ರಿಕೆಟ್​ಗೆ ನೀವು ನೀಡಿದ ಎಲ್ಲಾ ಕೊಡುಗೆಗಳಿಗೂ ಧನ್ಯವಾದಗಳು” ಎಂದು ತಿಳಿಸಿದ್ದಾರೆ.ಇದನ್ನೂ ಓದಿ : Yo Yo Test: 'ಯೋ ಯೋ ಟೆಸ್ಟ್​ ಪಾಸ್​ ಮಾಡಿದರೂ ಅವಕಾಶ ಕೊಡಲಿಲ್ಲ, ಸಮಯ ಬಂದಾಗ ಮಾತಾಡ್ತೀನಿ'; ಯುವಿ

ಎಲ್ಲರಿಗೂ ತಿಳಿದಿರುವಂತೆ ಸಚಿನ್​ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ ಉತ್ತಮ ಗೆಳೆಯರು. ಸಚಿನ್ ಅವರನ್ನು ತಮ್ಮ ಗುರು ಎಂದೇ ಯುವರಾಜ್ ತಿಳಿಸಿದ್ದರು. ಅಲ್ಲದೆ 2011ರ ವಿಶ್ವಕಪ್ ಅನ್ನು ಸಚಿನ್ ಗಾಗಿ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದರು. ಅದನ್ನು ಸಾಧಿಸಿಯೂ ತೋರಿಸಿದ್ದರು. ಈ ವಿಶ್ವಕಪ್​ ನಲ್ಲಿ ಯುವರಾಜ್ 350ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದರು. ಅಲ್ಲದೆ ಭಾರತ ಫೈನಲ್​ ಪಂದ್ಯದಲ್ಲಿ ಗೆದ್ದಾಗ ಸಚಿನ್ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದರು.

ಈ ಸರಣಿಯ ನಂತರ ಯುವರಾಜ್ ಕ್ಯಾನ್ಸರ್​ಗೆ ತುತ್ತಾಗಿ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದಾಗ ಸಚಿನ್ ಅಲ್ಲಿಗೆ ತೆರಳಿ ಯುವರಾಜ್ ಯೋಗಕ್ಷೇಮವನ್ನು ವಿಚಾರಿಸಿದ್ದರು. ಅಲ್ಲದೆ ಶೀಘ್ರವಾಗಿ ಗುಣಮುಖರಾಗಿ ತಂಡಕ್ಕೆ ಮರಳುವಂತೆ ಹಾರೈಸಿದ್ದರು.

ಇದನ್ನೂ ಓದಿ : ಯುವರಾಜನಿಗೆ ಬೀಳ್ಕೊಡುಗೆ ಇಲ್ಲದ ವಿದಾಯ; ಲೆಜೆಂಡ್​ನ ನಿವೃತ್ತಿಗೆ ಗೆಳೆಯರ ಶುಭ ಹಾರೈಕೆ

First published:June 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ