Sachin-Rahul Dravid: ಸಚಿನ್-ದ್ರಾವಿಡ್ ಇವರಲ್ಲಿ ಯಾರು ಬೆಸ್ಟ್? ಪಾಕ್ ಕ್ರಿಕೆಟಿಗನ ಉತ್ತರ ಹೀಗಿತ್ತು..!

ಐಸಿಸಿ ಏಕದಿನ ಕ್ರಿಕೆಟ್​ ರ್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಬಾಬರ್ 5 ಸ್ಥಾನ ಪಡೆದಿದ್ದಾರೆ. ಇನ್ನು ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ನಾಯಕ 2ನೇ ಸ್ಥಾನ ಪಡೆದಿದ್ದರೆ, ಬಾಬರ್ ಆಜಂ 5ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಬಾಬರ್ 2ನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 7ನೇ ಶ್ರೇಯಾಂಕದಲ್ಲಿದ್ದಾರೆ.

Sachin Tendulkar - Rahul Dravid

Sachin Tendulkar - Rahul Dravid

 • Share this:
  ಭಾರತೀಯ ಕ್ರಿಕೆಟ್‌ ಜಗತ್ತು ಕಂಡ ಅತ್ಯದ್ಭುತ ಬ್ಯಾಟ್ಸ್‌ಮನ್‌ಗಳಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ರಾಹುಲ್ ದ್ರಾವಿಡ್ (Rahul Dravid) ಮುಂಚೂಣಿಯಲ್ಲಿರುತ್ತಾರೆ. ಸಚಿನ್ ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರಾದರೆ, ದ್ರಾವಿಡ್ ಅಭಿಮಾನಿಗಳ ಹೃದಯದಲ್ಲಿ ಎಂದೂ ಅಲುಗಾಡದ ಗೋಡೆಯಾಗಿ ಸ್ಥಾನ ಪಡೆದಿದ್ದಾರೆ. ಈ ಸಾರ್ವಕಾಲಿಕ ಇಬ್ಬರು ಬ್ಯಾಟ್ಸ್​ಮನ್​ಗಳಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ. ಇದೇ ಪ್ರಶ್ನೆಯನ್ನು ಅಭಿಮಾನಿಯೊಬ್ಬ ರಾವಲ್ಪಿಂಡಿ ಎಕ್ಸ್​ಪ್ರೆಸ್ ಖ್ಯಾತಿಯ ಶೊಯೇಬ್ ಅಖ್ತರ್ ಅವರ ಮುಂದಿಟ್ಟಿದ್ದಾರೆ.

  ಟ್ವಿಟರ್​ನಲ್ಲಿ ಫ್ಯಾನ್​ ಒಬ್ಬರು ಅಖ್ತರ್ ಇಬ್ಬರು ಶ್ರೇಷ್ಠರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ತಿಳಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು? ಎಂಬ ಬೌನ್ಸರ್ ಪ್ರಶ್ನೆ ಎಸೆದಿದ್ದರು. ಇದಕ್ಕೆ ಅಖ್ತರ್ ಕಡೆಯಿಂದ ಬಂದತಹ ಉತ್ತರ ರಾಹುಲ್ ದ್ರಾವಿಡ್. ಹೌದು, ಅಖ್ತರ್ ಟೆಸ್ಟ್ ಕ್ರಿಕೆಟ್​ನಲ್ಲಿ ಸಚಿನ್​ಗಿಂತ ಶ್ರೇಷ್ಠ ಬ್ಯಾಟ್ಸ್​ಮನ್ ರಾಹುಲ್ ದ್ರಾವಿಡ್ ಎಂದಿದ್ದಾರೆ.

  ಇದೇ ವೇಳೆ ಮತ್ತೊಂದು ಪ್ರಶ್ನೆಯಲ್ಲಿ ಎಲ್ಲಾ ಸ್ವರೂಪದ ಕ್ರಿಕೆಟ್‌ನಲ್ಲೂ ಪರಿಪೂರ್ಣ ಆಟಗಾರ ಯಾರು ಎಂದು ಕೇಳಲಾಗಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ಆಟಗಾರ ಬಾಬರ್ ಆಜಂ ಎಂದು ಅಖ್ತರ್ ಉತ್ತರಿಸಿದ್ದರು. ಕೊಹ್ಲಿ ಹಾಗೂ ಬಾಬರ್ ಮೂರು ಮಾದರಿ ಕ್ರಿಕೆಟ್​ ರ್ಯಾಕಿಂಗ್​ನಲ್ಲೂ ಸ್ಥಾನ ಪಡೆದಿದ್ದಾರೆ.

  ಐಸಿಸಿ ಏಕದಿನ ಕ್ರಿಕೆಟ್​ ರ್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಬಾಬರ್ 5 ಸ್ಥಾನ ಪಡೆದಿದ್ದಾರೆ. ಇನ್ನು ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ನಾಯಕ 2ನೇ ಸ್ಥಾನ ಪಡೆದಿದ್ದರೆ, ಬಾಬರ್ ಆಜಂ 5ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್​ನಲ್ಲಿ ಬಾಬರ್ 2ನೇ ಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 7ನೇ ಶ್ರೇಯಾಂಕದಲ್ಲಿದ್ದಾರೆ.
  Published by:zahir
  First published: