Sachin Tendulkar: ಕೊಹ್ಲಿ-ರಹಾನೆ ನಾಯಕತ್ವ ಬದಲಾವಣೆ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್

ಟೆಸ್ಟ್ ನಾಯಕತ್ವವನ್ನು ಪರಿಗಣಿಸಿದರೆ ವಿರಾಟ್ ಕೊಹ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 56 ಟೆಸ್ಟ್​ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಕೊಹ್ಲಿ 33 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.

Tendulkar, Rahane, Kohli

Tendulkar, Rahane, Kohli

 • Share this:
  ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಚರ್ಚೆ ಇಂದು ನಿನ್ನೆಯದಲ್ಲ. 2019ರ ವಿಶ್ವಕಪ್ ಸೋಲಿನ ಬೆನ್ನಲ್ಲೇ ನಾಯಕತ್ವ ಬದಲಾವಣೆ ಕೂಗುಗಳು ಜೋರಾಗಿ ಕೇಳಿ ಬಂದಿದ್ದವು. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ 5ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಸೀಮಿತ ಓವರ್​ಗಳಲ್ಲಿ ಇಬ್ಬರು ನಾಯಕರು ತಂಡವನ್ನು ಮುನ್ನಡೆಸಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಇಲ್ಲಿ ವಿರಾಟ್ ಕೊಹ್ಲಿ (Virat Kohli) ಏಕದಿನ ತಂಡವನ್ನು ಮುನ್ನಡೆಸಿದರೆ, ರೋಹಿತ್ ಶರ್ಮಾ (Rohit Sharma) ಟಿ20 ತಂಡಕ್ಕೆ ನಾಯಕರಾಗಲಿ ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಟೆಸ್ಟ್ ತಂಡದ ನಾಯಕತ್ವ ಬಗ್ಗೆ ಸಹ ಚರ್ಚೆಗಳು ಶುರುವಾಗಿವೆ. ಇದಕ್ಕೆ ಕಾರಣ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾರತದ ಗೆಲುವು.

  ಹೌದು, ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಕೊಹ್ಲಿ ಮುನ್ನಡೆಸಿದ್ದರೆ, 2ನೇ ಪಂದ್ಯಕ್ಕೆ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಸಾರಥ್ಯವಹಿಸಿದ್ದರು. ಅನುಭವಿ ಆಟಗಾರರ ಕೊರತೆ ನಡುವೆ ಯುವ ತಂಡದೊಂದಿಗೆ ಆಸ್ಟ್ರೇಲಿಯಾವನ್ನು ಮಣಿಸಿದ ರಹಾನೆ ನಾಯಕತ್ವ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗಿದ್ದವು. ಅಲ್ಲದೆ ರಹಾನೆ ಅವರನ್ನೇ ಟೆಸ್ಟ್ ತಂಡಕ್ಕೆ ನಾಯಕರನ್ನಾಗಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

  ಈ ಬಗ್ಗೆ ಮಾತನಾಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) , ಭಾರತ ದೇಶಕ್ಕಿಂತ ಇಲ್ಲಿ ಯಾವುದೇ ವೈಯುಕ್ತಿಕ ವ್ಯಕ್ತಿ ಮುಖ್ಯವಾಗುವುದಿಲ್ಲ. ನನ್ನ ಪ್ರಕಾರ ಕೊಹ್ಲಿಯನ್ನು ಅಜಿಂಕ್ಯ ರಹಾನೆ ಜೊತೆ ಹೋಲಿಕೆ ಮಾಡಬಾರದು ಎಂದರು.

  ಏಕೆಂದರೆ ರಹಾನೆ ವಿಭಿನ್ನ ವ್ಯಕ್ತಿತ್ವ ಹೊಂದಿರುವ ಆಟಗಾರ. ಆತನ ಉದ್ದೇಶ ಕೂಡ ಆಕ್ರಮಣಕಾರಿಯಾಗಿದೆ. ಅದರಲ್ಲೂ ಅವರಿಬ್ಬರೂ ಭಾರತಕ್ಕಾಗಿ ಆಡುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಲ್ಲಿ ಯಾರೂ ಕೂಡ ದೇಶಕ್ಕಿಂತ ಮೇಲಲ್ಲ. ಎಲ್ಲರಿಗಿಂತ ಮೇಲಿನ ಸ್ಥಾನದಲ್ಲಿರುವುದು ಭಾರತ ಎಂಬುದು ನೆನಪಿರಬೇಕು ಎಂದು ಸಚಿನ್ ತಿಳಿಸಿದರು.

  ಇನ್ನು ವಿರಾಟ್ ಕೊಹ್ಲಿ ಅವರ ಟೆಸ್ಟ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡಲು ಮುಖ್ಯ ಕಾರಣ ಕಳೆದ ವರ್ಷದ ಕಳಪೆ ಸಾಧನೆ ಎಂದರೆ ತಪ್ಪಾಗಲಾರದು. ಏಕೆಂದರೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಹಾಗೂ ಈ ವರ್ಷ ವೈಯಕ್ತಿಕವಾಗಿ ಯಾವುದೇ ಶತಕ ದಾಖಲಿಸಲು ಕೊಹ್ಲಿ ವಿಫಲರಾಗಿದ್ದರು.

  ಆದರೆ ಒಟ್ಟಾರೆ ಟೆಸ್ಟ್ ನಾಯಕತ್ವವನ್ನು ಪರಿಗಣಿಸಿದರೆ ವಿರಾಟ್ ಕೊಹ್ಲಿ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. 56 ಟೆಸ್ಟ್​ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಕೊಹ್ಲಿ 33 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಅಂದರೆ ಶೇ. 50 ಕ್ಕಿಂತ ಗೆಲುವಿನ ಸರಾಸರಿಯನ್ನು ಹೊಂದುವ ಮೂಲಕ ಕೊಹ್ಲಿ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.
  Published by:zahir
  First published: