ಟೀಂ ಇಂಡಿಯಾದಲ್ಲಿ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್‌ಗೆ ಮಾರು ಹೋಗದ ಕ್ರಿಕೆಟ್ ಪ್ರೇಮಿಗಳಿಲ್ಲ(cricket lovers), ಯಾಕೆಂದ್ರೆ ಅವರ ಕೀಪಿಂಗ್ ವೈಖರಿಯೇ ವಿಶೇಷ. ಕ್ರಿಕೆಟ್‌ನಲ್ಲಿ ಕೀಪಿಂಗ್ ಮಾಡುವುದು ನಿಜಕ್ಕೂ ಕಠಿಣದ ಕೆಲಸ. ಅದರಲ್ಲಿ ಪ್ರತಿಯೊಬ್ಬರು ಯಶ ಸಾಧಿಸಲು ಸಾಧ್ಯವಿಲ್ಲ, ಆದರೆ ಸ್ಟ್ರೀಟ್ ಕ್ರಿಕೆಟ್ ಆಟದಲ್ಲಿ ಶ್ವಾನವೊಂದು ವಿಕೆಟ್ (video of a dog taking a wicket at a street cricket) ಕೀಪಿಂಗ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ ಸಕತ್ ಸುದ್ದಿ ಮಾಡಿದೆ. ಆ ವಿಡಿಯೋವನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್(cricket legend Sachin Tendulkar) ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವುದು ವಿಶೇಷ.
ಶ್ವಾನದ ಕ್ರಿಕೆಟ್ ಕಂಡು ಅಚ್ಚರಿ(Surprised to find dog cricket)
ಈ ವಿಡಿಯೋ ರಸ್ತೆಯೊಂದರಲ್ಲಿ ಕೋಲುಗಳಿಂದ ಮಾಡಿದ ಸ್ಟಂಪ್‌ಗಳ ಮುಂದೆ ಮಕ್ಕಳು ಕ್ರಿಕೆಟ್ ಆಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅಲ್ಲಿ ಒಂದು ನಾಯಿಯೂ ಇದೆ. ಎರಡು ಮಕ್ಕಳೊಂದಿಗೆ ಶ್ವಾನ ಕ್ರಿಕೆಟ್ ಆಡುವ ದೃಶ್ಯ ಇದು. (two kids play dog cricket) ಬಾಲಕಿಯೊಬ್ಬಳು ಬ್ಯಾಟಿಂಗ್‌ನಲ್ಲಿ ತೊಡಗಿಕೊಂಡಿರುವ ದೃಶ್ಯದಲ್ಲಿ ಬಾಲಕ ಬೌಲಿಂಗ್ ಮಾಡುತ್ತಾನೆ. ಬಾಲಕ ಬೌಲಿಂಗ್ ಮಾಡಲು ಸಜ್ಜಾಗುವಾಗಲೇ ಮುದ್ದು ಶ್ವಾನವೊಂದು ಓಡೋಡಿ ಬಂದು ವಿಕೆಟ್ ಹಿಂದೆ ನಿಲ್ಲುತ್ತದೆ. ಜತೆಗೆ, ಬರುವ ಚೆಂಡನ್ನು ಬಾಯಲ್ಲಿ ಕಚ್ಚಿ ಮತ್ತೆ ಅದೇ ಬಾಲಕನ ಬಳಿಗೆ ಹೋಗುತ್ತದೆ. ಇದು 1.17 ನಿಮಿಷದ ವಿಡಿಯೋ ಆಗಿದ್ದು, ಸಚಿನ್ ಅವರು ಶೇರ್ ಮಾಡುತ್ತಿದಂತೆ ಲಕ್ಷಾಂತರ ಮಂದಿ ನಾಯಿಯ ಆಟವನ್ನು ಮೆಚ್ಚಿ ಕಮೆಂಟ್ ಮಾಡುತ್ತಿದ್ದಾರೆ.
Received this from a friend and I must say, those are some 'sharp' ball catching skills 😉
We've seen wicket-keepers, fielders and all-rounders in cricket, but what would you name this? 😄 pic.twitter.com/tKyFvmCn4v
— Sachin Tendulkar (@sachin_rt) November 22, 2021
ಮತ್ತೆ ಮನಗೆದ್ದ ಹಳೆವಿಡಿಯೋ( old video)
ಅದ್ಭುತ ವಿಡಿಯೋದಲ್ಲಿ ಶ್ವಾನವೊಂದು ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಈ ದೃಶ್ಯ ಕಂಡು ನೆಟ್ಟಿಗರು ಇದಕ್ಕೆ ಕೋಚ್ ಯಾರಿರಬಹುದು ಎಂದು ಕೇಳುತ್ತಿದ್ದಾರೆ. ಕೆಲವರು ಈ ದೃಶ್ಯವನ್ನು ಎರಡೆರಡು ಸಲ ನೋಡಿ ಖಷಿಪಡುತ್ತಿದ್ದಾರೆ. `ಸ್ನೇಹಿತರೊಬ್ಬರು ಕಳುಹಿಸಿದ ವಿಡಿಯೋ ಇದು. ಇದು ಅತ್ಯಂತ ಅದ್ಭುತ ಚೆಂಡು ಹಿಡಿಯುವ ಕೌಶಲ್ಯ ಎಂದು ನಾವು ಹೇಳಲೇಬೇಕು. ನಾವು ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್‌ಗಳು, ಫೀಲ್ಡರ್‌ಗಳು ಮತ್ತು ಆಲ್‌ರೌಂಡರ್‌ಗಳನ್ನು ನೋಡಿದ್ದೇವೆ, ಆದರೆ, ನೀವು ಇದಕ್ಕೆ ಏನೆಂದು ಹೆಸರಿಡುತ್ತೀರಿ' ಎಂದು ಕ್ಯಾಪ್ಶನ್ ಬರೆದು ಸಚಿನ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಂತ, ಇದು ಇತ್ತೀಚಿನ ವಿಡಿಯೋ ಅಲ್ಲ. ಇದೇ ವರ್ಷದ ಫೆಬ್ರವರಿಯಲ್ಲೂ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ, ಈ ಹಳೆಯ ವಿಡಿಯೋ ಸಚಿನ್ ಅವರು ಶೇರ್ ಮಾಡಿದ ನಂತರ ಇನ್ನಷ್ಟು ಖ್ಯಾತಿ ಗಳಿಸಿದ್ದು, ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯುವಲ್ಲಿ ವಿಫಲವಾಗಿಲ್ಲ ಎಂದರೆ ತಪ್ಪಾಗಲಾರದು.
ಇದನ್ನು ಓದಿ: Sachin Tendulkar| ಮಾಸ್ಟರ್ ಬ್ಲಾಸ್ಟರ್ ಅಡುಗೆ ಮಾಡಿದ ವಿಡಿಯೋ ನೋಡಿ ಬೌಲ್ಡ್ ಆದ ಅಭಿಮಾನಿಗಳು
ಸಮಾಜ ಸೇವೆಯಲ್ಲಿ ಸಚಿನ್(Sachin in social service)
ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ಭೇಟಿ ನೀಡಿದ ಸಚಿನ್ ಅವರು ಮಕ್ಕಳ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡುವತ್ತ ಗಮನ ಹರಿಸಿದ್ದಾರೆ. ತಂದೆ ದಿವಂಗತ ಪ್ರೊಫೆಸರ್ ರಮೇಶ್ ತೆಂಡೂಲ್ಕರ್ ಅವರ ಸ್ಮರಣಾರ್ಥ 'ಪರಿವಾರ' ಸಹಯೋಗದಲ್ಲಿ ತಮ್ಮ ಪ್ರತಿಷ್ಠಾನ ನಿರ್ಮಿಸುತ್ತಿರುವ ಶಾಲೆಯ ನಿರ್ಮಾಣದ ಬಗ್ಗೆಯೂ ಅವರು ಪರಿಶೀಲನೆ ನಡೆಸಿದರು. ಮಧ್ಯಪ್ರದೇಶದ ಸೇವಾನಿಯಾ ಎಂಬ ದೂರದ ಹಳ್ಳಿಯಲ್ಲಿ ಮಕ್ಕಳನ್ನು ಭೇಟಿ ಮಾಡಿದ ಅವರು. ‘ಸೇವಾ ಕುಟೀರ’ದಲ್ಲಿ ಮಕ್ಕಳಿಗೆ ಪೌಷ್ಟಿಕಾಂಶದ ಊಟ, ಪೂರಕ ಶಿಕ್ಷಣ ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಹಿಂದುಳಿದ ಬುಡಕಟ್ಟು ಮಕ್ಕಳಿಗಾಗಿ ಈ ಸೇವಾ ಕುಟೀರವನ್ನು ನಡೆಸಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ