Sachin Tendulkar Birthday: ಇಂದು ಕ್ರಿಕೆಟ್ ದೇವರ ಜನ್ಮದಿನ; ಕೊರೋನಾ ಕಾರಣ ಹುಟ್ಟುಹಬ್ಬ ಆಚರಿಸದಿರಲು ಸಚಿನ್ ತೆಂಡುಲ್ಕರ್ ನಿರ್ಧಾರ

Happy Birthday Sachin Tendulkar: ಮಹಾರಾಷ್ಟ್ರದ ಮುಂಬಯಿನಲ್ಲಿ 1973ರಂದು ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಶತಕದ ಶತಕಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಗಳನ್ನು ಬಾರಿಸಿ ದಾಖಲೆ ಮಾಡಿದ ಕ್ರಿಕೆಟ್‌ ದಂತಕತೆ.

news18-kannada
Updated:April 24, 2020, 9:24 AM IST
Sachin Tendulkar Birthday: ಇಂದು ಕ್ರಿಕೆಟ್ ದೇವರ ಜನ್ಮದಿನ; ಕೊರೋನಾ ಕಾರಣ ಹುಟ್ಟುಹಬ್ಬ ಆಚರಿಸದಿರಲು ಸಚಿನ್ ತೆಂಡುಲ್ಕರ್ ನಿರ್ಧಾರ
ಇಂದು ವಿಶ್ವ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 47ನೇ ಜನ್ಮದಿನ. ಕ್ರಿಕೆಟ್‌ ಅಂಗಳದಲ್ಲಿ ಹಲವು ದಾಖಲೆಗಳನ್ನು ಬರೆದಿಟ್ಟಿರುವ ಸಚಿನ್, ಖ್ಯಾತನಾಮರ ಕೆಲ ದಾಖಲೆಗಳನ್ನು ಅಳಿಸಿ ಹಾಕಿದ್ದರು.
  • Share this:
ಕ್ರಿಕೆಟ್ ಲೋಕದ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ ಅವರು ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದು ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಅವರ ಫೋಟೋವನ್ನು ಶೇರ್ ಮಾಡಿ ಶುಭಾಶಯ ಕೋರುತ್ತಿದ್ದಾರೆ.

ಆದರೆ, ದೇಶದಲ್ಲಿ ಕೊರೋನಾ ಮಹಾಮಾರಿ ಅನೇಕ ಜನರನ್ನು ಬಲಿ ಪಡೆದುಕೊಳ್ಳುತ್ತಿರುವ ಕಾರಣದಿಂದ ಸಚಿವ್ ತೆಂಡೂಲ್ಕರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

 ದೇಶಾದ್ಯಾಂತ ಕೋವಿಡ್ 19 ವಿರುದ್ಧ ಹೋರಾಟ ಮಾಡುತ್ತಿರುವವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಸಚಿನ್‌ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

RCB ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಹ ಆಟಗಾರರೇ ಹೊಟ್ಟೆಕಿಚ್ಚು ಪಟ್ಟಿದ್ದರು..!

ಮಹಾರಾಷ್ಟ್ರದ ಮುಂಬಯಿನಲ್ಲಿ 1973ರಂದು ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಶತಕದ ಶತಕಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಗಳನ್ನು ಬಾರಿಸಿ ದಾಖಲೆ ಮಾಡಿದ ಕ್ರಿಕೆಟ್‌ ದಂತಕತೆ.

24 ವರ್ಷಗಳ ಕಾಲ ಕ್ರಿಕೆಟ್ ಆಡಿ ಬ್ಯಾಟಿಂಗ್​​ನಲ್ಲಿ ನೂರಾರು ದಾಖಲೆ ಬರೆದ ಸಚಿನ್, ಭಾರತ ರತ್ನ ಪುರಸ್ಕೃತರೂ  ಹೌದು. ಇಂದಿಗೂ ಸಚಿನ್ ಅವರು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ.

ಲಿಟ್ಲ್​ ಮಾಸ್ಟರ್​ ಎಂದೇ ಪ್ರಖ್ಯಾತಿ ಆಗಿರುವ ಸಚಿನ್​ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಪದಾರ್ಪಣೆ ಮಾಡಿದರು. ಅಂತಾರಾಷ್ಟ್ರೀಯ ಏಕದಿನ ಪಂದ್ಯಾಗಳಲ್ಲಿ ಅಜೇಯ 200 ರನ್​ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಸಚಿಬ್ ಅವರು ಪಾತ್ರರಾಗಿದ್ದಾರೆ. ದ. ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 147 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದರು.

IPL ನಡೆಸಲು T20 ವಿಶ್ವಕಪ್ ಮುಂದೂಡುವಂತೆ ಸ್ಟಾರ್ ಕ್ರಿಕೆಟಿಗನ ಮನವಿ..!

ಏಕದಿನ ಕ್ರಿಕೆಟ್​​ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಇವರು 18, 426 ರನ್ ಕಲೆಹಾಕಿದ್ದಾರೆ. 49 ಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. ಬೌಲಿಂಗ್​​ನಲ್ಲೂ 154 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್​​ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ.

 First published: April 24, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading