HOME » NEWS » Sports » CRICKET SACHIN TENDULKAR GANGULY AND YUVRAJ SCORED CENTURY AND GOT 4 WICKETS INTERESTING DETAILS HERE VB

ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ, 4 ವಿಕೆಟ್ ಕಿತ್ತ ಸಚಿನ್-ಗಂಗೂಲಿ-ಯುವರಾಜ್; ಇಲ್ಲಿದೆ ಕುತೂಹಲಕಾರಿ ಮಾಹಿತಿ

2008 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ನೀಡಿದ ಆಲ್ರೌಂಡರ್ ಪ್ರದರ್ಶನ ಭಾರತದ ಗೆಲುವಿಗೆ ನೆರವಾಯಿತು. ಮೊದಲ ಬ್ಯಾಟ್ ಮಾಡಿದ ಭಾರತ ಯುವಿ ಅವರ 118 ರನ್​ಗಳ ಮೊತ್ತದಿಂದ 293 ರನ್​​ ಕಲೆಹಾಕಿತು.

Vinay Bhat | news18-kannada
Updated:March 17, 2020, 6:35 PM IST
ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ, 4 ವಿಕೆಟ್ ಕಿತ್ತ ಸಚಿನ್-ಗಂಗೂಲಿ-ಯುವರಾಜ್; ಇಲ್ಲಿದೆ ಕುತೂಹಲಕಾರಿ ಮಾಹಿತಿ
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ಯುವರಾಜ್ ಸಿಂಗ್.
  • Share this:
ಕ್ರಿಕೆಟ್ ಕ್ರೀಡೆಯಲ್ಲಿ ಒಬ್ಬ ಆಲ್ರೌಂಡರ್ ಇದ್ದರೆ ಆತನೇ ಆ ತಂಡದ ಬಹುದೊಡ್ಡ ಆಸ್ತಿ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ತನ್ನ ಕೌಶಲ್ಯ ತೋರುವ ಈತನ ಜವಾಬ್ದಾರಿ ಪ್ರತಿಯೊಂದು ಪಂದ್ಯದಲ್ಲಿ ಮುಖ್ಯವಾಗುತ್ತದೆ. ಅದರಂತೆ ಇಂಗ್ಲೆಂಡ್​ನ ಆ್ಯಂಡ್ರೊ ಫ್ಲಿಂಟಾಫ್, ಜ್ಯಾಕ್ ಕಾಲೀಸ್, ಡ್ವೇನ್ ಬ್ರಾವೋ, ಕಪಿಲ್ ದೇವ್, ಮೊಹಮ್ಮದ್ ಹಫೀಜ್ ಸೇರಿದಂತೆ ಪ್ರತಿಭಾನ್ವಿತ ಆಲ್ರೌಂಡರ್ ಆಟಗಾರರು ಕ್ರಿಕೆಟ್ ಲೋಕದಲ್ಲಿದ್ದಾರೆ.

ಯುವರಾಜ್ ಸಿಂಗ್, ಆರ್. ಅಶ್ವಿನ್, ಶೊಯೇಬ್ ಮಲಿಕ್, ಶೇನ್ ವಾರ್ನ್​​​, ಸ್ಟುವರ್ಟ್​ ಬ್ರಾಡ್ ಸೇರಿದಂತೆ ಕೆಲವು ಆಟಗಾರರು ಆಲ್ರೌಂಡರ್ ಆಗಿದ್ದರೂ, ಅದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಆದರೆ, ಇವರೆಲ್ಲ ಒಂದು ಪಂದ್ಯದಲ್ಲಿ ಮಿಂಚಿದವರಾಗಿದ್ದಾರೆ. ಅದರಂತೆ ಒಂದೇ ಪಂದ್ಯದಲ್ಲಿ ಶತಕ ಬಾರಿಸಿ ಜೊತೆಗೆ 4 ವಿಕೆಟ್ ಪಡೆದಂತಹ ಭಾರತದ 3 ಆಟಗಾರರನ್ನು ನೋಡುವುದಾದರೆ…

ಸಚಿನ್ ತೆಂಡೂಲ್ಕರ್ (141 ರನ್ ಮತ್ತು 4/38):ಆಸ್ಟ್ರೇಲಿಯನ್ನರಿಗೆ ಕೊಹ್ಲಿ ಮೇಲೆ ಯಾಕಿಷ್ಟು ಸಿಟ್ಟು?; ದಿ ಟೆಸ್ಟ್ ಡಾಕ್ಯುಮೆಂಟರಿಯಲ್ಲಿ ವಿರಾಟ್​ಗೆ ಅಪಮಾನ?

ದಾಖಲೆಗಳ ಸರದಾರ ಎಂದರೆ ಅದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರ ಖಾತೆಯಲ್ಲಿ 154 ವಿಕೆಟ್​​ಗಳು ಕೂಡ ಇವೆ. ಅದರಲ್ಲು 6 ಬಾರಿ 4 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ ಸಚಿನ್.

ಸಚಿನ್ ಅವರು ಒಂದೇ ಪಂದ್ಯದಲ್ಲಿ ಶತಕ ಸಿಡಿಸಿ 4 ವಿಕೆಟ್ ಕಿತ್ತಿರುವುದು 1998 ರಲ್ಲಿ ಆಸ್ಟ್ರೇಲಿಯಾ ವಿರುದ್ಧ. 128 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 141 ಸಿಡಿಸಿ ಸಚಿನ್ ಔಟ್ ಆದರು. ಇದರಲ್ಲಿ ಭಾರತ ನೀಡಿದ್ದ 308 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಸಚಿನ್ ಬೌಲಿಂಗ್ ದಾಳಿಗೆ ಇಳಿಯುವ ವರೆಗೆ ಭರ್ಜರಿ ಆಟ ಪ್ರದರ್ಶಿಸಿತ್ತು. ಬಳಿಕ ಸಚಿನ್ ಅವರು ಕಾಂಗರೂಗಳ ಶಾಕ್ ನೀಡಿ ಪ್ರಮುಖ 4 ವಿಕೆಟ್ ಕಿತ್ತ ಪರಿಣಾಮ ಈ ಪಂದ್ಯದಲ್ಲಿ ಭಾರತ 44 ರನ್​ಗಳ ಜಯ ಸಾಧಿಸಿತು. 10 ಓವರ್​ ಬೌಲಿಂಗ್ ಮಾಡಿದ ಸಚಿನ್ 38 ರನ್ ನೀಡಿ 4.15 ಎಕಾನಮಿಯಲ್ಲಿ 4 ವಿಕೆಟ್ ಪಡೆದರು.ಸೌರವ್ ಗಂಗೂಲಿ (130* ರನ್ ಮತ್ತು 21/4):ಬರಲಿದೆ ಯುವರಾಜ್ ಸಿಂಗ್ ಬಯೋಪಿಕ್ ಸಿನಿಮಾ; ಹೀರೋ ಇವರೇ ಆಗಬೇಕೆಂದ ಸಿಕ್ಸರ್ ಕಿಂಗ್

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಒಬ್ಬ ಉತ್ತಮ ಆಲ್ರೌಂಡರ್ ಕೂಡ ಹೌದು. ಅದು 1999 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯ. ಮೊದಲು ಬ್ಯಾಟ್ ಮಾಡಿದ ಭಾರತ ಗಂಗೂಲಿ ಅವರ 130 ರನ್ ಹಾಗೂ ದ್ರಾವಿಡ್ ಅವರ 116 ರನ್​​ಗಳ ನೆರವಿನಿಂದ 287 ರನ್ ಕಲೆಹಾಕಿತ್ತು. 288 ರನ್ ಗುರಿ ಬೆನ್ನತ್ತಿದ ಲಂಕಾನ್ನರು ಗಂಗೂಲಿ ಬೌಲಿಂಗ್ ದಾಳಿಗೆ ತತ್ತರಿಸಿತು. ಪರಿಣಾಮ ಭಾರತ 80 ರನ್​ಗಳ ಭರ್ಜರಿ ಜಯ ಕಂಡಿತು. ಗಂಗೂಲಿ ಅವರು 4 ಓವರ್​ಗೆ 21 ರನ್ ನೀಡಿ 4 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಯುವರಾಜ್ ಸಿಂಗ್ (118 ರನ್ ಮತ್ತು 28/4):2008 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ ನೀಡಿದ ಆಲ್ರೌಂಡರ್ ಪ್ರದರ್ಶನ ಭಾರತದ ಗೆಲುವಿಗೆ ನೆರವಾಯಿತು. ಮೊದಲ ಬ್ಯಾಟ್ ಮಾಡಿದ ಭಾರತ ಯುವಿ ಅವರ 118 ರನ್​ಗಳ ಮೊತ್ತದಿಂದ 293 ರನ್​​ ಕಲೆಹಾಕಿತು. ಯುವಿ ಬ್ಯಾಟ್​​ನಿಂದ 15 ಬೌಂಡರಿ ಹಾಗೂ 2 ಸಿಕ್ಸ್​ ಸೇರಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಯುವಿ ಸ್ಪಿನ್ ಮೋಡಿಗೆ ಬಲಿಯಾಯಿತು. 10 ಓವರ್​ ಬೌಲಿಂಗ್ ಮಾಡಿದ ಯುವರಾಜ್ 2.8 ಎಕಾನಮಿಯಲ್ಲಿ ಕೇವಲ 28 ರನ್ ನೀಡಿ 4 ವಿಕೆಟ್ ಕಿತ್ತ ಸಾಧನೆ  ಮಾಡಿದರು. ಇದರಿಂದ ಈ ಪಂದ್ಯದಲ್ಲಿ ಭಾರತ 54 ರನ್​ ಗಳ ಗೆಲುವು ಸಾಧಿಸಿತ್ತು.

Youtube Video
First published: March 17, 2020, 6:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories